Gold Price: ಪ್ರಧಾನಿ ನರೇಂದ್ರ ಮೋದಿ ಅವರು ಒಂದು ವರ್ಷವಾದರೂ ಕೂಡ, ಗೋಲ್ಡ್ ಖರೀದಿ ಮಾಡಬೇಡಿ ಎಂದು ಹೇಳಿದ್ದಾರೆ. ಅನೇಕರು ಗೋಲ್ಡ್ ಖರೀದಿ ಮಾಡುತ್ತಾರೆ, ಇದನ್ನು ದೊಡ್ಡ ಮಟ್ಟದ ಹೂಡಿಕೆ ಎಂದು ಭಾವಿಸಿದ್ದಾರೆ. ಮದುವೆ ಎಂದು ಒಂದು ವರ್ಷದವರೆಗೆ ಚಿನ್ನ ಖರೀದಿಸಬೇಡಿ ಎಂದು ನರೇಂದ್ರ ಮೋದಿ ಹೇಳಿದರು.
ಸಂಪ್ರದಾಯ, ಉಳಿತಾಯ, ಕೌಟುಂಬಿಕ ಆಚರಣೆಗಳ ಜೊತೆ ಬಂಗಾರ ಸೇರಿಕೊಂಡಿದೆ. ಹೀಗಿರುವಾಗ ನರೇಂದ್ರ ಮೋದಿ ಅವರು ಯಾಕೆ ಹೀಗೆ ಹೇಳಿದರು ಎಂಬ ಡೌಟ್ ಕಾಡ್ತಿದೆ. ಇದರ ಹಿಂದಿರುವ ಕಾರಣ ಏನು?
ಇರಾನ್-ಇಸ್ರೇಲ್ ಯುದ್ಧ ನಡೆಯುತ್ತಿದೆ. ಅಲ್ಲಿಂದ ಒಂದಿಷ್ಟು ವಸ್ತುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಪೆಟ್ರೋಲ್ ಕೂಡ ಸಿಗೋದು ಕಷ್ಟ ಆಗಿದೆ. ಒಟ್ಟಿನಲ್ಲಿ ಜಾಗತಿಕ ಇಂಧನ ಬಿಕ್ಕಟ್ಟು ನಡೆಯುತ್ತಿದೆ. ಒಟ್ಟಿನಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು (Forex Reserves) ಮೇಲಿನ ಒತ್ತಡ, ಕುಸಿಯುತ್ತಿರುವ ರೂಪಾಯಿ ಮೌಲ್ಯವನ್ನು ರಕ್ಷಿಸಬೇಕಿದೆ.
26
ಕಚ್ಚಾ ತೈಲ ಬೆಲೆಗಳು ಹೆಚ್ಚಾಗಿದೆ
ಪಶ್ಚಿಮ ಏಷ್ಯಾದ ಸಂಘರ್ಷ, ವಿಶ್ವದ ಪ್ರಮುಖ ತೈಲ ಸಾಗಣೆ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಸುತ್ತಲು ಉದ್ವಿಗ್ನತೆ ಶುರುವಾಗಿದೆ. ಹೀಗಾಗಿ ಕಚ್ಚಾ ತೈಲ ಬೆಲೆಗಳು ಹೆಚ್ಚಾಗಿದೆ.
ಕೆಲವು ವಾರಗಳಿಂದ ಪ್ರತಿ ಬ್ಯಾರೆಲ್‌ಗೆ ಜಾಗತಿಕ ಕಚ್ಚಾ ತೈಲ ಬೆಲೆಯು ಸುಮಾರು $70 ರಿಂದ ಸುಮಾರು $126 ಕ್ಕೆ ಏರಿದೆ. ಇದರಿಂದ ಭಾರತದ ಆಮದು ವೆಚ್ಚ ಹೋಗಿದೆ. ಪೆಟ್ರೋಲ್, ಡೀಸೆಲ್ ಬಳಕೆಯನ್ನು ಕಡಿಮೆ ಮಾಡಿ, ವಿದೇಶಿ ವಿನಿಮಯವನ್ನು ಸಂರಕ್ಷಿಸಿ ಎಂದು ಹೇಳಿದ್ದಾರೆ.
36
ಯಾಕೆ ಚಿನ್ನ ಖರೀದಿ ತೊಂದರೆಯಾಗುತ್ತದೆ?
ಭಾರತದ ಪಾಲಿಗೆ ಚಿನ್ನ, ಕಚ್ಚಾ ತೈಲ ಎರಡೂ ಒಂದೇ ಆಗಿದೆ. ಇವೆರಡನ್ನೂ ಹೆಚ್ಚಾಗಿ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ, ಅದನ್ನು ಯುಎಸ್ ಡಾಲರ್‌ಗಳಲ್ಲಿ ಕೊಡಲಾಗುತ್ತದೆ. ಭಾರತಕ್ಕೆ ಎಷ್ಟು ತೈಲ ಬೇಕೋ ಅದರಲ್ಲಿ, ಸುಮಾರು 85% ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ, ವಿಶ್ವದ ಅತಿದೊಡ್ಡ ಚಿನ್ನದ ಆಮದುದಾರರಲ್ಲಿ ಒಂದು ಎಂಬ ಹೆಗ್ಗಳಿಕೆ ಪಡೆದಿದೆ.
ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಾದಾಗ, ಚಿನ್ನದ ಆಮದು ಕೂಡ ಹೆಚ್ಚಾಗಿದ್ದಾಗ, ಭಾರತಕ್ಕೆ ಇದನ್ನೆಲ್ಲ ಆಮದು ಪಾವತಿ ಮಾಡಲು ಹೆಚ್ಚಿನ ಡಾಲರ್‌ಗಳು ಬೇಕು. ಇದರಿಂದ ಕರೆನ್ಸಿ ಮಾರುಕಟ್ಟೆಯಲ್ಲಿ ಡಾಲರ್ ಬೇಡಿಕೆ ಹೆಚ್ಚುವುದು, ರೂಪಾಯಿ ಮೌಲ್ಯದ ಮೇಲೆ ಒತ್ತಡ ಹೇರುತ್ತದೆ.
ಅರ್ಥಶಾಸ್ತ್ರಜ್ಞರದ ಪ್ರಕಾರ, ಚಿನ್ನವು ಸಾಮಾನ್ಯ ಗ್ರಾಹಕ ಉತ್ಪನ್ನವಲ್ಲ. ಚಿನ್ನದ ಆಮದನ್ನು ಹೆಚ್ಚಾಗಿ ಐಚ್ಛಿಕ ಖರ್ಚು ಅಥವಾ ಉಳಿತಾಯದ ಬೇಡಿಕೆ ಎನ್ನಲಾಗುವುದು. ಯುದ್ಧದ ಟೈಮ್‌ನಲ್ಲಿ ಚಿನ್ನವನ್ನು ಖರೀದಿ ಮಾಡಿದರೆ, ದೇಶದಿಂದ ಹೆಚ್ಚಿನ ಡಾಲರ್‌ಗಳು ಹೊರಹೋಗುತ್ತವೆ. ಇದು ಭಾರತದ ಚಾಲ್ತಿ ಖಾತೆ ಕೊರತೆಯನ್ನು (Current Account Deficit) ಹೆಚ್ಚಿಸಬಹುದು. ಇದರಿಂದ ರೂಪಾಯಿ ಮೌಲ್ಯ ಕುಂಠಿತವಾಗುತ್ತದೆ.
56
ಬಂಗಾರ, ಖರೀದಿ ಮಾಡದಿದ್ರೆ ಏನಾಗುತ್ತದೆ?
ಇಂಥ ಟೈಮ್‌ನಲ್ಲಿ ಚಿನ್ನದ ಆಮದು ಕಡಿಮೆ ಮಾಡಲು ಭಾರತವು, ಭಾರತದ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿವೆ, ಆಮದಿನ ಮೇಲೆ ನಿರ್ಬಂಧ ಹೇರಿವೆ, ಸಾವರಿನ್ ಗೋಲ್ಡ್ ಬಾಂಡ್‌ಗಳನ್ನು ಹೆಚ್ಚು ಮಾಡಿವೆ. ಇದರಿಂದ ವಿದೇಶಿ ವಿನಿಮಯ ಮೀಸಲು ಮೇಲಿನ ಒತ್ತಡ ಕಡಿಮೆ ಮಾಡುವುದು, ರೂಪಾಯಿ ಮೌಲ್ಯವನ್ನು ಸ್ಥಿರಗೊಳಿಸಲಾಗುವುದು.
66
ಬಂಗಾರದ ರೇಟ್ ಹೆಚ್ಚಾಗಿದೆ
ಒಂದು ಕುಟುಂಬವು ಮದುವೆಗಾಗಿ ಆಭರಣ ಖರೀದಿಯನ್ನು ಮುಂದೂಡಿದೆ, ಇದರಿಂದ ರೂಪಾಯಿ ಮೌಲ್ಯ ಬದಲಾಗುವುದಿಲ್ಲ. ಆದರೆ ಅರ್ಥಶಾಸ್ತ್ರಜ್ಞರು ಒಂದೊಂದು ಕುಟುಂಬ ಎಂದುಕೊಂಡರೂ ಕೂಡ, ನೂರಾರು ಕುಟುಂಬಗಳು ಇದೇ ನಿರ್ಧಾರ ಕೈಗೊಂಡರೆ ಡಾಲರ್ ಮೌಲ್ಯ ಕುಸಿಯೋದಿಲ್ಲ. ಮದುವೆಗೆ ಅಥವಾ ಮುಂದಿನ ದಿನಗಳಲ್ಲಿ ಬಂಗಾರದ ರೇಟ್ ಹೆಚ್ಚಾಗುತ್ತದೆ ಎಂದು ಖರೀದಿ ಮಾಡುವವರು ಜಾಸ್ತಿ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.