ಬೆಂಗಳೂರು ಸೇರಿದಂತೆ ಭಾರತದಲ್ಲಿ ಇಂದು ಚಿನ್ನದ ಬೆಲೆ ಎಷ್ಟಾಗಿದೆ? ಪ್ರಧಾನಿ ಮೋದಿ ಕನಿಷ್ಠ ಒಂದು ವರ್ಷ ಅನಗತ್ಯ ಚಿನ್ನ ಖರೀದಿ ಮಾಡಬೇಡಿ, ಪೆಟ್ರೋಲ್ ಡೀಸೆಲ್ ಬಳಕೆ ಕಡಿಮೆ ಮಾಡಿ ಎಂದು ಕರೆ ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ಬಂಗಾರದ ಬೆಲೆಯಲ್ಲಿ ವ್ಯತ್ಯಾಸವಾಗಿದೆ.
ಮೋದಿ ಕರೆ ನೀಡಿದ ಬೆನ್ನಲ್ಲೆ ಚಿನ್ನದ ಬೆಲೆಯಲ್ಲಿ ವ್ಯತ್ಯಾಸ
ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಮಹತ್ವದ ಕರೆ ನೀಡಿದ್ದಾರೆ. ಕನಿಷ್ಠ ಒಂದು ವರ್ಷ ಅನಗತ್ಯ ಚಿನ್ನ ಖರೀದಿ ಮಾಡದಂತೆ ಸೂಚಿಸಿದ್ದಾರೆ. ಬೆಲೆ ಏರಿಕೆ, ಡೀಸೆಲ್ ಹಾಗೂ ಇಂಧನ ಬಳಕೆ ಕಡಿಮೆ, ವಿದೇಶಿ ಪ್ರವಾಸ, ವಿದೇಶದಲ್ಲಿ ಮದುವೆ ಸೇರಿದಂತೆ ಹಲವು ಸ್ವಯಂ ನಿರ್ಬಂಧ ವಿಧಿಸಲು ಮನವಿ ಮಾಡಿದ್ದಾರೆ. ಈ ಪೈಕಿ ಚಿನ್ನ ಖರೀದಿ ಬೇಡ ಎಂದ ಬೆನ್ನಲ್ಲೇ ಇಂದು ಚಿನ್ನದ ಬೆಲೆಯಲ್ಲಿ ವ್ಯತ್ಯಾಸವಾಗಿದೆ.
25
ಚಿನ್ನದ ಬೆಲೆಯಲ್ಲಿ ಏರಿಕೆ
ಮೋದಿ ಚಿನ್ನ ಖರೀದಿ ಬೇಡ ಎಂದ ಬೆನ್ನಲ್ಲೇ ಇಂದು ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಒಂದೆಡೆ ಯುದ್ಧದ ಸನ್ನಿವೇಶ, ಡೋನಾಲ್ಡ್ ಟ್ರಂಪ್ ಎಚ್ಚರಿಕೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಗುತ್ತಿರುವ ಏರಿಳಿತಗಳ ಪರಿಣಾಮ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಇಂದು 10 ಗ್ರಾಂ ಚಿನ್ನಕ್ಕೆ 1,53,150 ರೂಪಾಯಿ ಆಗಿದೆ.
35
ಬೆಂಗಳೂರಿನಲ್ಲಿ ಚಿನ್ನದ ದರ
ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ 10 ಗ್ರಾಂಗೆ 1,52,990 ರೂಪಾಯಿ ಆಗಿದೆ. ದಕ್ಷಿಣ ಭಾರತದಲ್ಲಿ ಚೆನ್ನೈನಲ್ಲಿ ಚಿನ್ನ ದುಬಾರಿಯಾಗಿದೆ. ಚೆನ್ನೈನಲ್ಲಿ 10 ಗ್ರಾಂಗೆ 1,53,320 ರೂಪಾಯಿ ಆಗಿದೆ. ಬಳಿಕ ಹೈದರಾಬಾದ್‌ನಲ್ಲಿ 1,53,110 ರೂಪಾಯಿ ಆಗಿದೆ. ಮೂರು ನಗರಗಳ ಪೈಕಿ ಬೆಂಗಳೂರಿನಲ್ಲಿ ಚಿನ್ನದ ಬೆಲೆ ಕೊಂಚ ಕಡಿಮೆ ಇದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.