ದೇಶದಲ್ಲಿ ಮದ್ಯದ ಬೆಲೆ ಗೋವಾದಲ್ಲಿ ಅತಿ ಕಡಿಮೆ, ಕರ್ನಾಟಕದಲ್ಲಿ ಅತ್ಯಂತ ದುಬಾರಿ ಏಕೆ?

Published : May 06, 2025, 06:08 PM IST

ಭಾರತದಲ್ಲಿ ಮದ್ಯದ ಬೆಲೆ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಬೆಲೆಯನ್ನು ಹೊಂದಿದ್ದರೆ, ಗೋವಾ ರಾಜ್ಯದಲ್ಲಿ ಅತಿ ಕಡಿಮೆ ಮದ್ಯದ ಬೆಲೆ ಇದೆ. ಈ ವ್ಯತ್ಯಾಸಕ್ಕೆ ಕಾರಣವೇನು?

PREV
16
ದೇಶದಲ್ಲಿ ಮದ್ಯದ ಬೆಲೆ ಗೋವಾದಲ್ಲಿ ಅತಿ ಕಡಿಮೆ, ಕರ್ನಾಟಕದಲ್ಲಿ ಅತ್ಯಂತ ದುಬಾರಿ ಏಕೆ?

ಭಾರತದಲ್ಲಿ ಮದ್ಯದ ಬೆಲೆ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಒಂದೇ ಬ್ರ್ಯಾಂಡ್‌ನ ಮದ್ಯದ ಬೆಲೆಯಲ್ಲಿಯೂ ವ್ಯತ್ಯಾಸವಿರುತ್ತದೆ. ಇನ್ನು ಮದ್ಯದ ಗುಣಮಟ್ಟದಲ್ಲಿಯೂ ಬದಲಾವಣೆ ಆಗುತ್ತದೆ. ಇದಕ್ಕೆ ಕಾರಣ ಪ್ರತಿಯೊಂದು ರಾಜ್ಯ ಸರ್ಕಾರ ವಿಧಿಸುವ ಅಬಕಾರಿ ಸುಂಕ.

26

ಇಂಟರ್ನ್ಯಾಷನಲ್ ಸ್ಪಿರಿಟ್ಸ್ ಅಂಡ್ ವೈನ್ ಅಸೋಸಿಯೇಷನ್ ​​ಆಫ್ ಇಂಡಿಯಾ (ISWAI) ಬಿಡುಗಡೆ ಮಾಡಿದ ವರದಿಯ ಪ್ರಕಾರ, ಕರ್ನಾಟಕದಲ್ಲಿ ಗ್ರಾಹಕರು ಖರೀದಿ ಮಾಡುವ ಮದ್ಯದ ಮೇಲೆ ಬರೋಬ್ಬರಿ ಶೇ.80% ಅಬಕಾರಿ ಸುಂಕವನ್ನು ವಿಧಿಸಲಾಗುತ್ತದೆ. ಆದ್ದರಿಂದ ಭಾರತದಲ್ಲಿಯೇ ಮದ್ಯದ ಬೆಲೆ ಕರ್ನಾಟಕದಲ್ಲಿ ಅತಿಹೆಚ್ಚು ದರವನ್ನು ಹೊಂದಿದೆ.

ಇನ್ನು ಗೋವಾದಲ್ಲಿ ಕೇವಲ ಶೇ.55% ಸುಂಕ ವಿಧಿಸಲಾಗುತ್ತಿದೆ. ಆದ್ದರಿಂದ ಗೋವಾದಲ್ಲಿ ಮದ್ಯದ ದರ ಇತರೆ ರಾಜ್ಯಗಳಿಗಿಂತ ತೀವ್ರ ಅಗ್ಗವಾಗಿದೆ. ಕಳೆದ ಕೆಲವು ವರ್ಷಗಳಿಂದ ಗೋವಾದಲ್ಲಿ ತೆರಿಗೆಗಳು ಸ್ವಲ್ಪ ಹೆಚ್ಚಾಗಿದ್ದರೂ, ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಗೋವಾದಲ್ಲಿ ಮದ್ಯದ ಬೆಲೆಗಳು ಇನ್ನೂ ಕಡಿಮೆಯಾಗಿದೆ. ಹೀಗಾಗಿ, ಗೋವಾವನ್ನು ಮದ್ಯ ಪ್ರಿಯರ ಸ್ವರ್ಗವೆಂದೇ ಕರೆಯಲಾಗುತ್ತದೆ.

36

ಮದ್ಯದ ಮೇಲೆ ವಿಧಿಸಲಾಗುವ ತೆರಿಗೆಗಳ ಪರಿಣಾಮವು ಮದ್ಯದ ಚಿಲ್ಲರೆ ಬೆಲೆಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ. ಉದಾಹರಣೆಗೆ, ಜಾನಿ ವಾಕರ್ ರೆಡ್ ಲೇಬಲ್ (750 ಮಿ.ಲೀ) ಬೆಲೆ ದೆಹಲಿಯಲ್ಲಿ ₹1400, ಗೋವಾದಲ್ಲಿ ₹1650, ಬೆಂಗಳೂರಿನಲ್ಲಿ ₹1700, ಹೈದರಾಬಾದ್‌ನಲ್ಲಿ ₹2400 ಬೆಲೆಯಿದೆ.

ದೆಹಲಿಯಲ್ಲಿ ಬ್ಲ್ಯಾಕ್ ಲೇಬಲ್ ವಿಸ್ಕಿ 3310 ರೂ.ಗೆ ಲಭ್ಯವಿದೆ. ಮುಂಬೈನಲ್ಲಿ ರೂ. 4,200 ಇದ್ದರೆ, ಕರ್ನಾಟಕದಲ್ಲಿ ಸುಮಾರು ಇದು 5,200 ರೂ. ಆಗಿದೆ.

ಈ ಭಾರಿ ಬೆಲೆ ವ್ಯತ್ಯಾಸವು 'ಒಂದು ರಾಷ್ಟ್ರ, ಒಂದು ತೆರಿಗೆ' ತತ್ವವನ್ನು ಉಲ್ಲಂಘಿಸುತ್ತದೆ ಎಂದು ಮದ್ಯ ಉದ್ಯಮ ಹೇಳುತ್ತಿದೆ. ತೆರಿಗೆ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆಗಳನ್ನು ಉದ್ಯಮವು ಪದೇ ಪದೇ ಒತ್ತಾಯಿಸುತ್ತಿದ್ದರೂ, ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತದೆ. 

46

ಆಯಾ ರಾಜ್ಯಗಳ ತೆರಿಗೆಗಳಿಂದಾಗಿ ಮದ್ಯದ ಬೆಲೆಗಳು ವಿಭಿನ್ನವಾಗಿರುವುದರಿಂದ ರಾಜ್ಯಗಳ ಗಡಿಗಳನ್ನು ದಾಟಿ ಅಕ್ರಮವಾಗಿ ಮದ್ಯ ಖರೀದಿಸಿಕೊಂಡು ಬರುವ ಜನರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಕೆಲವು ರಾಜ್ಯಗಳು ಆದಾಯ ನಷ್ಟವನ್ನು ಅನುಭವಿಸುತ್ತಿವೆ ಎಂದು ಉದ್ಯಮ ಮೂಲಗಳು ತಿಳಿಸಿವೆ.

ಭಾರತೀಯ ಮದ್ಯಪಾನ ಕಂಪನಿಗಳ ಒಕ್ಕೂಟ (ಸಿಐಎಬಿಸಿ) ಕೂಡ ಇದೇ ವಿಷಯದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. 'ಏಕರೂಪದ ತೆರಿಗೆ ಪದ್ಧತಿಯ ಕೊರತೆಯು ಮದ್ಯ ಮಾರಾಟ ಉದ್ಯಮದ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ' ಎಂದು ಮದ್ಯಪಾನ ಕಂಪನಿಗಳ ಒಕ್ಕೂಟದ ಸದಸ್ಯ ದೀಪಕ್ ರಾಯ್ ಹೇಳಿದ್ದಾರೆ.

56

ಕರ್ನಾಟಕ ಸರ್ಕಾರ ಇತ್ತೀಚೆಗೆ ಬಿಯರ್ ಮೇಲಿನ ಅಬಕಾರಿ ತೆರಿಗೆಯನ್ನು ಉತ್ಪಾದನಾ ವೆಚ್ಚದ ಶೇ.205ಕ್ಕೆ ಹೆಚ್ಚಿಸಿದೆ. ಈ ಹಿಂದೆ ಇದು ಶೇ.195 ರಷ್ಟಿತ್ತು. ಇದೀಗ ಪುನಃ ಅಬಕಾರಿ ಸುಂಕವನ್ನು ಶೇ.10 ಹೆಚ್ಚಳ ಮಾಡಲು ಮುಂದಾಗಿದ್ದು, ಇದರಿಂದ ಪ್ರೀಮಿಯಂ ಬಿಯರ್ ಬೆಲೆ ₹10ರಷ್ಟು ಹೆಚ್ಚಾಗಬಹುದು.

66

ಕರ್ನಾಟಕದಲ್ಲಿ ಕಳೆದೆರಡು ವರ್ಷಗಳಲ್ಲಿ ಬಿಯರ್ ಮೇಲೆ 3ನೇ ಬಾರಿಗೆ ತೆರಿಗೆ ಹೆಚ್ಚಳವನ್ನು ಮಾಡಿದೆ. 2025ರ ಜನವರಿಯಲ್ಲಿ ಬಿಯರ್ ತೆರಿಗೆಯನ್ನು ಹೆಚ್ಚಿಸಲಾಗಿದೆ. ಪುನಃ ಬೆಲೆ ಹೆಚ್ಚಳದ ಬಗ್ಗೆ ಸರ್ಕಾರ ಪ್ರಸ್ತಾವನೆಯನ್ನೂ ಮಾಡಿದೆ.

ಒಟ್ಟಾರೆಯಾಗಿ ದೇಶದಲ್ಲಿ ಮದ್ಯ ಬೆಲೆ ನಿಗದಿ ಮಾಡುವ ವ್ಯವಸ್ಥೆಯಲ್ಲಿ ಏಕರೂಪತೆಯ ಕೊರತೆಯು ಗ್ರಾಹಕರು ಮತ್ತು ಉತ್ಪಾದಕರ ಮೇಲೆ ಹೊರೆಯಾಗುತ್ತಿದೆ. ಮದ್ಯ ವಲಯಕ್ಕೆ ಸ್ಥಿರವಾದ ತೆರಿಗೆ ವ್ಯವಸ್ಥೆಯ ಅಗತ್ಯವಿದೆ ಎಂದು ಉದ್ಯಮ ಮೂಲಗಳು ಕಳವಳ ವ್ಯಕ್ತಪಡಿಸುತ್ತಿವೆ. ಮತ್ತೊಂದೆಡೆ, ಮದ್ಯದ ಬೇಡಿಕೆಗೆ ಅನುಗುಣವಾಗಿ ರಾಜ್ಯ ಸರ್ಕಾರಗಳು ಬೆಲೆಗಳನ್ನು ಹೆಚ್ಚಿಸುತ್ತಿದ್ದು, ಅದನ್ನು ಆದಾಯದ ಮೂಲವೆಂದು ಭಾವಿಸುತ್ತಿವೆ ಎಂಬ ಆರೋಪಗಳೂ ಇವೆ.

Read more Photos on
click me!

Recommended Stories