ಐಪಿಎಲ್ ಟೂರ್ನಿ ಆರಂಭಕ್ಕೂ ಮೊದಲು ಜಿಯೋ ಈ ಅನ್‌ಲಿಮಿಟೆಡ್ ಪ್ಲಾನ್ ಘೋಷಿಸಿತ್ತು. ಅನ್‌ಲಿಮಿಟೆಡ್ ಕಾಲ್, ಡೇಟಾ ಸೇರಿದಂತೆ ಐಪಿಎಲ್ ಲೈವ್ ವೀಕ್ಷಿಸಲು ಹಾಟ್‌ಸ್ಟಾರ್, ಜಿಯೋ ಸಿನಿಮಾ ಸೇರಿದಂತೆ ಇತರ ಸಬ್‌ಸ್ಕ್ರಿಪ್ಶನ್ ಉಚಿತವಾಗಿ ನೀಡುತ್ತಿದೆ. ಈ ಆಫರ್ ಮಾರ್ಚ್ 17 ರಿಂದ ಮಾರ್ಚ್ 30 ವರೆಗೆ ಘೋಷಿಸಲಾಗಿತ್ತು. ಬಳಿಕ ಎಪ್ರಿಲ್ 15, ಎಪ್ರಿಲ್ 30 ವರಗೆ ವಿಸ್ತರಿಸಾಗಿತ್ತು. ಇದೀಗ ಮೇ 25ರ ವರೆಗೆ ಅಂದರೆ ಐಪಿಎಲ್ ಟೂರ್ನಿ ಅಂತ್ಯದ ವರೆಗೆ ಆಫರ್ ವಿಸ್ತರಿಸಲಾಗಿದೆ.