ಭಾರತದಲ್ಲಿ ಇವರಿಗೆ ಸಿಗುತ್ತೆ ಹೆಚ್ಚು ಆದಾಯ ತೆರಿಗೆ ವಿನಾಯ್ತಿ; ಈ ರಾಜ್ಯದವರು ಟ್ಯಾಕ್ಸ್ ಕಟ್ಟೋದೇ ಇಲ್ಲ

First Published | Dec 5, 2024, 1:57 PM IST

ಭಾರತದಲ್ಲಿ ಹೆಚ್ಚು ತೆರಿಗೆ ವಿನಾಯ್ತಿ ಈ ವರ್ಗದವರಿಗೆ ಸಿಗುತ್ತದೆ. ಇವರು ನಿಯಮಗಳ ಪ್ರಕಾರ 3 ರಿಂದ 5 ಲಕ್ಷ ರೂಪಾಯಿಗಳವರೆಗೆ ತೆರಿಗೆ ವಿನಾಯ್ತಿಯನ್ನು ಪಡೆದುಕೊಳ್ಳುತ್ತಾರೆ.

ಆದಾಯ ತೆರಿಗೆಯಲ್ಲಿ ಕೆಲವು ವರ್ಗದವರಿಗೆ ಸರ್ಕಾರದಿಂದಲೇ ವಿನಾಯ್ತಿ ಸಿಗುತ್ತದೆ. ಹಾಗಾದ್ರೆ ಭಾರತದಲ್ಲಿ ಯಾರಿಗೆ ಹೆಚ್ಚು ತೆರಿಗೆ ವಿನಾಯ್ತಿ ಸಿಗುತ್ತೆ ಅಂತ ಈ ಲೇಖನದಲ್ಲಿ ನೋಡೋಣ.

ಭಾರತದಲ್ಲಿ ಯಾರು ಗರಿಷ್ಠ ತೆರಿಗೆ ವಿನಾಯಿತಿ ಪಡೆಯುತ್ತಾರೆ ಎಂಬ ಪ್ರಶ್ನೆಗೆ ಉತ್ತರ ನಿಮಗೆ ಗೊತ್ತಿದೆಯಾ? ಅದರಲ್ಲಿಯೂ ಹಿರಿಯ ನಾಗರಿಕರಿಗೆ ಎರಡು ವರ್ಗದ ತೆರಿಗೆಗಳಿವೆ. ಆ ಎರಡು ತೆರಿಗೆಗಳ ಕುರಿತ ಮಾಹಿತಿ ಇಲ್ಲಿದೆ.

Tap to resize

ತೆರಿಗೆ ವಿನಾಯ್ತಿ

ಭಾರತದಲ್ಲಿ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹೆಚ್ಚು ತೆರಿಗೆ ವಿನಾಯ್ತಿ ಪಡೆದುಕೊಳ್ಳುತ್ತಾರೆ. 60 ವರ್ಷ ಮತ್ತು ಮೇಲ್ಪಟ್ಟ ವಯಸ್ಸಾದವರಿಗೆ 3 ಲಕ್ಷ ರೂ.ಗಳವರೆಗೆ ಮತ್ತು 60 ವರ್ಷ ಮತ್ತು ಮೇಲ್ಪಟ್ಟ ವಯಸ್ಸಾದವರಿಗೆ 5 ಲಕ್ಷದವರೆಗಿನ ವಾರ್ಷಿಕ ಆದಾಯದವರೆಗೆ ಯಾವುದೇ ತೆರಿಗೆ ವಿನಾಯ್ತಿ ಸಿಗುತ್ತದೆ. 

ಅತಿ ಹೆಚ್ಚು ತೆರಿಗೆ ಪಾವತಿದಾರ ಯಾರು?

ಕಳೆದ ವರ್ಷ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅತಿ ಹೆಚ್ಚು ತೆರಿಗೆ ಪಾವತಿಸಿದ ವ್ಯಕ್ತಿಯಾಗಿದ್ದಾರ. ಆದಾಯ ತೆರಿಗೆ ಇಲಾಖೆಯ ಪ್ರಕಾರ ಅಕ್ಷಯ್ ಕುಮಾರ್ 29.5 ಕೋಟಿ ತೆರಿಗೆ ಪಾವತಿಸಿದ್ದಾರೆ. ಈ ವರ್ಷ ತೆರಿಗೆ ಪಾವತಿಯಲ್ಲಿ ನಟ ಶಾರುಖ್ ಖಾನ್ ಅಗ್ರಸ್ಥಾನದಲ್ಲಿದ್ದಾರೆ. ಈ ವರ್ಷ ಶಾರುಖ್ ಖಾನ್ ಅತಿ ಹೆಚ್ಚು ತೆರಿಗೆ ಪಾವತಿಸಿದ್ದಾರೆ ಎಂದು ವರದಿಯಾಗಿದೆ.

ಈ ರಾಜ್ಯದ ಜನರು ತೆರಿಗೆ ಕಟ್ಟುವುದಿಲ್ಲವೇ?

ಈ ರಾಜ್ಯದ ಜನರು ತೆರಿಗೆ ಕಟ್ಟುವುದಿಲ್ಲವೇ?

ಭಾರತದಲ್ಲಿ ಜನರು ತೆರಿಗೆ ಪಾವತಿಸದ ರಾಜ್ಯವಿದೆ. ಹೌದು, ಈ ರಾಜ್ಯದ ನಾಗರಿಕರು  ಯಾವುದೇ ತೆರಿಗೆಯನ್ನು ಪಾವತಿಸಬೇಕಿಲ್ಲ. ಭಾರತದ ಸಿಕ್ಕಿಂ ರಾಜ್ಯದ ಜನತೆ ತೆರಿಗೆ ಪಾವತಿಸಲ್ಲ.

ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯ

ಭಾರತದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳ ಪೈಕಿ ಮಹಾರಾಷ್ಟ್ರ ಅಗ್ರಸ್ಥಾನದಲ್ಲಿದೆ. ಕಳೆದ ಹಣಕಾಸು ವರ್ಷದಲ್ಲಿ 7,61,716.30 ಕೋಟಿ ನೇರ ತೆರಿಗೆ ಸಂಗ್ರಹದೊಂದಿಗೆ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಇದರ ನಂತರ ಉತ್ತರ ಪ್ರದೇಶವು 48,333.44 ಕೋಟಿ ರೂ ನೇರ ತೆರಿಗೆ ಸಂಗ್ರಹದೊಂದಿಗೆ ಎರಡನೇ ಸ್ಥಾನದಲ್ಲಿದೆ.

Latest Videos

click me!