ಮುಕೇಶ್-ಅನಿಲ್ ಅಂಬಾನಿ; ಯಾರ ಜೊತೆಗಿದ್ದಾರೆ 18 ಸಾವಿರ ಕೋಟಿ ಒಡತಿ ತಾಯಿ ಕೊಕಿಲಾಬೆನ್?

First Published | Dec 4, 2024, 7:48 PM IST

ಮುಕೇಶ್ ಅಂಬಾನಿ, ಅನಿಲ್ ಅಂಬಾನಿ ಹಾಗೂ ಅಂಬಾನಿ ಕುಟುಂಬವನ್ನು ವಿಶ್ವದ ಶ್ರೀಮಂತ ಕುಟುಂಬವಾಗಿ ಮಾಡಿದ ಹೆಗ್ಗಳಿಗೆ ಧೀರೂಬಾಯಿ ಅಂಬಾನಿ ಜೊತೆಗೆ ಕೊಕಿಲಾಬೆನ್ ಅಂಬಾನಿಗೂ ಸಲ್ಲಲಿದೆ. ಧೀರೂಬಾಯಿ ನಿಧನದ ಬಳಿಕ ಕೊಕಿಲಾಬೆನ್ ಯಾರ ಜೊತೆಗೆ ವಾಸವಿದ್ದಾರೆ? 

ಶೂನ್ಯದಿಂದ ರಿಲಯನ್ಸ್ ಸಂಸ್ಥೆಯನ್ನು ಕಟ್ಟಿ ಜಗತ್ತಿನ ಅತೀ ದೊಡ್ಡ ಕಂಪನಿಯನ್ನಾಗಿ ಮಾಡಿ ಕೀರ್ತಿ ಧೀರೂಬಾಯಿ ಅಂಬಾನಿಗೆ ಸಲ್ಲಲಿದೆ. ಧೀರೂಬಾಯಿ ಅಂಬಾನಿಗೆ ಬೆಂಬಲವಾಗಿ ನಿಂತ ಪತ್ನಿ ಕೊಕೆಲಾಬೆನ್ ಅಂಬಾನಿ, ಪತಿಯ ಉದ್ಯಮದ ಜೊತೆಗೆ ಮಕ್ಕಳನ್ನು ಉತ್ತಮ ಆರೈಕೆ, ಪಾಲನೆ ಮಾಡಿ ಬೆಳೆಸಿದ್ದಾರೆ. ಇದೀಗ ಮುಕೇಶ್ ಅಂಬಾನಿ ಜಗತ್ತಿನ ಶ್ರೀಮಂತ ವ್ಯಕ್ತಿಯಾಗಿದ್ದಾರೆ. 

ಧೀರೂಬಾಯಿ ಅಂಬಾನಿ ನಿಧನದ ಬಳಿಕ ಅಂಬಾನಿ ಆಸ್ತಿ ಹಂಚಿಕೆಯಾಗಿತ್ತು. ಮುಕೇಶ್ ಅಂಬಾನಿ, ಅನಿಲ್ ಅಂಬಾನಿ ಹಾಗೂ ಇಬ್ಬರು ಪುತ್ರಿಯರಿಗೆ ಹಂಚಿಕೆ ಮಾಡಲಾಗಿದೆ. ಆಸ್ತಿ ಹಂಚಿಕೆ ಬಳಿಕ ಕೊಕಿಲಾಬೆನ್ ಅಂಬಾನಿ ಯಾರ ಜೊತೆಗೆ ವಾಸವಿದ್ದಾರೆ. ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕೊಕಿಲಾಬೆನ್ ಅಂಬಾನಿ ಹಿರಿಯ ಮಗ ಮುಕೇಶ್ ಅಂಬಾನಿ ಜೊತೆ ವಾಸವಿದ್ದಾರೆ.


ಮುಕೇಶ್ ಅಂಬಾನಿಯ ಆ್ಯಂಟಿಲಿಯಾ ಮನೆಯಲ್ಲಿ ಕೊಕಿಲಾಬೆನ್ ಅಂಬಾನಿ ವಾಸವಿದ್ದಾರೆ. ಮುಕೇಶ್ ಅಂಬಾನಿ, ಇಬ್ಬರು ಮಕ್ಕಳ ಹಾಗೂ ಅವರ ಕುಟುಂಬ ಜೊತೆಗೆ ತಾಯಿ ಎಲ್ಲರೂ 27ನೇ ಮಹಡಿಯಲ್ಲಿ ವಾಸವಿದ್ದಾರೆ. ಎಲ್ಲರಿಗೂ ಪ್ರತ್ಯೇಕ ಮನೆಗಳಿವೆ. ಈ ಪೈಕಿ ಕೋಕಿಲಾಬೆನ್ ಮುಕೇಶ್ ಅಂಬಾನಿ ಮನೆಯಲ್ಲಿ ಅವರ ಜೊತೆಗಿದ್ದಾರೆ.

ಕೊಕಿಲಾಬೆನ್ ಅಂಬಾನಿ ಬರೋಬ್ಬರಿ 18 ಸಾವಿರ ಕೋಟಿ ರೂ ಒಡತಿ. ಕೋಕಿಲಾಬೆನ್ ಅಂಬಾನಿ ಬಳಿ ರಿಲಯನ್ಸ್ ಸಂಸ್ಥೆಯ 1,57,41,322 ಷೇರುಗಳಿವೆ.  ಅಂದರೆ ಕಂಪನಿಯ ಒಟ್ಟು ಷೇರುಗಳ ಪೈಕಿ 0.24% ರಷ್ಟು ಷೇರುಗಳು ಕೋಕಿಲಾಬೆನ್ ಬಳಿ ಇದೆ. ಇದರ ಜೊತೆಗೆ ಇತರ ಕೆಲ ಆಸ್ತಿಗಳನ್ನು ಕೋಕಿಲಾಬೆನ್ ಹೊಂದಿದ್ದಾರೆ.  ಬ್ಯಾಂಕ್ ಬ್ಯಾಲೆನ್ಸ್ ಸೇರಿದಂತೆ 20,000 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಹೊಂದಿದ್ದಾರೆ.

90 ವರ್ಷದ ಕೊಕಿಲಾಬೆನ್ ಮೂಲ ಗುಜರಾತ್‌ನ ಜಾಮ್‌ನಗರ್. ದೈವ ಭಕ್ತೆಯಾಗಿರುವ ಕೋಕಿಲಾಬೆನ್ ಜಾಮನಗರದ ದ್ವಾರಕಾದಿಶ್ ದೇವಸ್ಥಾನ ಹಾಗೂ ರಾಜಸ್ಥಾನದ ನಥ್ವಾರ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುತ್ತಾರೆ. ಅಂಬಾನಿ ಕುಟುಂಬದ ಹಲವು ಕಾರ್ಯಕ್ರಮಗಳಲ್ಲಿ ಕೊಕಿಲಾಬೆನ್ ಕಾಣಿಸಿಕೊಂಡಿದ್ದಾರೆ. ಇತ್ತೀಗೆ ಅನಂತ್ ಅಂಬಾನಿ ಮದುವೆಯಲ್ಲಿ ಕೊಕಿಲಾಬೆನ್ ಸಕ್ರಿಯವಾಗಿ ಪಾಲ್ಗೊಂಡಿದ್ದರು.
 

ಧೀರೂಬಾಯಿ ಅಂಬಾನಿ ತಮ್ಮ 69ನೇ ವಯಸ್ಸಿನಲ್ಲಿ ನಿಧನರಾದರು. ತೀವ್ರ ಪಾರ್ಶ್ವವಾಯುವಿನಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ವಾರ ಕೋಮಾದಲ್ಲಿದ್ದ ಧೀರೂಬಾಯಿ ಅಂಬಾನಿ ಬದುಕಿಸಲು ವೈದ್ಯರ ತಂಡ ನಿರಂತರ ಚಿಕತ್ಸೆ ನೀಡಿತ್ತು. ಆದರೆ ಜೂನ್ 24, 2002ರಲ್ಲಿ ನಿಧನರಾದರು.

Latest Videos

click me!