Petrol Diesel Price: ದೇಶದ ಯಾವ ರಾಜ್ಯದಲ್ಲಿ ಗರಿಷ್ಠ ಮತ್ತು ಕನಿಷ್ಠ ಬೆಲೆಗೆ ಪೆಟ್ರೋಲ್- ಡೀಸೆಲ್ ಮಾರಾಟವಾಗುತ್ತೆ? ಸದನಕ್ಕೆ ಲಿಖಿತ ರೂಪದಲ್ಲಿ ಮಾಹಿತಿ ನೀಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ
ಆಂಧ್ರ ಪ್ರದೇಶದಲ್ಲಿ ಪೆಟ್ರೋಲ್ ಬೆಲೆ 109.74 ರು.ಗೆ ಹಾಗೂ ಡೀಸೆಲ್ ಬೆಲೆ 97.57 ರು. ಇದೆ. ಇದು ದೇಶದಲ್ಲೇ ಗರಿಷ್ಠ. ಇನ್ನು ಅಂಡಮಾನ್‌ನಲ್ಲಿ ಕೇವಲ 82.46 ರು.ಗೆ ಪೆಟ್ರೋಲ್ ಸಿಗುತ್ತಿದ್ದು, ದೇಶದಲ್ಲೇ ಕನಿಷ್ಠ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ರಾಜ್ಯಸಭೆಗೆ ಲಿಖಿತ ರೂಪದಲ್ಲಿ ಸೋಮವಾರ ಮಾಹಿತಿ ನೀಡಿದ್ದಾರೆ.
24
ಕರ್ನಾಟಕದಲ್ಲಿ ಪೆಟ್ರೋಲ್ ಬೆಲೆ
ಕರ್ನಾಟಕದಲ್ಲಿ ಪೆಟ್ರೋಲ್ 102.92 ರು.ಗೆ ಲಭಿಸುತ್ತದೆ. ಇಲ್ಲಿ ಪೆಟ್ರೋಲ್ ಮೇಲೆ ಸುಮಾರು 30 ರು. ಮತ್ತು ಡೀಸೆಲ್ ಮೇಲೆ 19 ರು. ವ್ಯಾಟ್ ವಿಧಿಸಲಾಗುತ್ತದೆ. ರಾಜ್ಯ ರಾಜ್ಯಗಳ ತರಿಗೆ ದರಗಳು ಬೇರೆ ಆಗಿರುವ ಕಾರಣ, ಪ್ರತಿ ರಾಜ್ಯಗಳ ದರದಲ್ಲೂ ವ್ಯತ್ಯಾಸವಾಗುತ್ತದೆ ಎಂದು ಸುರೇಶ್ ಗೋಪಿ ಹೇಳಿದ್ದಾರೆ
34
ಮೌಲ್ಯವರ್ಧಿತ ತೆರಿಗೆ (ವ್ಯಾಟ್)
‘ಮಾರಾಟದ ವೇಳೆ ಈ ಇಂಧನದ ಬೆಲೆಗೆ ಕೇಂದ್ರದಿಂದ ತೆರಿಗೆ ಮತ್ತು ರಾಜ್ಯದಿಂದ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ತೆರಿಗೆ ವಿಧಿಸಲಾಗುತ್ತದೆ. ವ್ಯಾಟ್‌ಅನ್ನು ರಾಜ್ಯಗಳು ನಿಗದಿಪಡಿಸುತ್ತವೆ.
ಆಂಧ್ರದಲ್ಲಿ ಪೆಟ್ರೋಲ್ ಮೇಲಿನ ವ್ಯಾಟ್ ಅತ್ಯಧಿಕ (ಪ್ರತಿ ಲೀಟರ್‌ಗೆ 29.06 ರು.) ಮತ್ತು ಡೀಸೆಲ್‌ಗೆ 97.57 ರು. ಇದೆ. ಅಂಡಮಾನ್‌ನಲ್ಲಿ ಪೆಟ್ರೋಲ್ ಮೇಲಿನ ವ್ಯಾಟ್ ಅತಿಕಡಿಮೆ, (ಲೀಟರ್‌ಗೆ 0.82 ರು.) ಹಾಗೂ ಡೀಸೆಲ್‌ಗೆ 0.77 ರು. ಇದೆ’ ಎಂದು ತಿಳಿಸಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮುಖ್ಯವಾಗಿ 4 ವಿಷಯಗಳ ಮೇಲೆ ಅವಲಂಬಿತವಾಗಿದೆ. ಕಚ್ಚಾ ತೈಲ ಬೆಲೆ, ರೂಪಾಯಿ ವಿರುದ್ಧ ಯುಎಸ್ ಡಾಲರ್ ಮೌಲ್ಯ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುವ ತೆರಿಗೆಗಳು ಹಾಗೂ ದೇಶದಲ್ಲಿ ಇಂಧನ ಬೇಡಿಕೆ. ಇವುಗಳ ಆಧಾರದಲ್ಲಿ ಬೆಲೆ ಏರಿಕೆ ಆಗುತ್ತದೆ.