D Martನಲ್ಲಿ ಯಾವಾಗ ಶಾಪಿಂಗ್ ಮಾಡಿದ್ರೆ ಹೆಚ್ಚು ಲಾಭ ಸಿಗುತ್ತೆ? ಇಲ್ಲಿದೆ ಸೂಪರ್ ಟಿಪ್ಸ್

Published : Sep 24, 2025, 03:49 PM IST

ಮಧ್ಯಮ ವರ್ಗದ ನೆಚ್ಚಿನ ಶಾಪಿಂಗ್ ತಾಣವಾದ ಡಿಮಾರ್ಟ್, ಹಬ್ಬದ ಸೀಸನ್‌ಗಳಲ್ಲಿ ವಿಶೇಷ ಆಫರ್‌ಗಳನ್ನು ನೀಡುತ್ತದೆ. ಕೆಲವು ಸಲಹೆಗಳನ್ನು ಪಾಲನೆ ಮಾಡುವ ಮೂಲಕ ನೀವು ಹೆಚ್ಚಿನ ಹಣವನ್ನು ಉಳಿಸಬಹುದು ಎಂದು ಈ ಲೇಖನವು ವಿವರಿಸುತ್ತದೆ.

PREV
15
ಮಧ್ಯಮ ವರ್ಗದ ನೆಚ್ಚಿನ ಶಾಪಿಂಗ್ ತಾಣ

ಡಿಮಾರ್ಟ್ ಮಧ್ಯಮ ವರ್ಗದ ನೆಚ್ಚಿನ ತಾಣವಾಗಿದೆ. ಈ ಶಾಪಿಂಗ್ ತಾಣದಲ್ಲಿ ಅಡುಗೆ ಸಾಮಾಗ್ರಿ, ಬಟ್ಟೆ, ಗೃಹೋಪಯೋಗಿ ವಸ್ತುಗಳು ಕಡಿಮೆ ಬೆಲೆಯಲ್ಲಿ ಸಿಗುತ್ತವೆ. ಈಗ ದಸರಾ, ದೀಪಾವಳಿ, ಕ್ರಿಸ್‌ಮಸ್, ಸಂಕ್ರಾಂತಿ ಸಾಲು ಸಾಲು ಹಬ್ಬಗಳು ಬರುತ್ತಿದ್ದು, ಗ್ರಾಹಕರನ್ನು ಆಕರ್ಷಿಸಲು ಡಿಮಾರ್ಟ್ ಮತ್ತಷ್ಟು ಆಫರ್‌ಗಳನ್ನು ನೀಡುತ್ತಿದೆ. ಹಬ್ಬಗಳ ಹಿನ್ನೆಲೆಯಲ್ಲಿ ಸಾಮಾನ್ಯ ಮಧ್ಯಮ ವರ್ಗದ ಸೂಪರ್‌ ಮಾರ್ಕೆಟ್ ಎಂದು ಕರೆಯಲ್ಪಡುವ ಡಿಮಾರ್ಟ್ ಉತ್ತಮ ಆಫರ್‌ಗಳನ್ನು ಪ್ರಕಟಿಸುತ್ತಿದೆ.

25
ಮಾರುಕಟ್ಟೆಯಲ್ಲಿ ನಂಬರ್ ಒನ್ ಆಗಿರುವ ಡಿಮಾರ್ಟ್

ಇಂದು ಜನರು ಡಿಮಾರ್ಟ್‌ನ್ನು ದಿನಸಿ ಅಂಗಡಿಯಂತೆ ಪರಿಗಣಿಸಲಾಗುತ್ತದೆ. ಕೈಗೆಟುಕುವ ಬೆಲೆಯಲ್ಲಿ ವಸ್ತುಗಳನ್ನು ಮಾರಾಟ ಮಾಡೋದರಿಂದ ಡಿಮಾರ್ಟ್ ಗ್ರಾಹಕರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಮೆಟ್ರೋ ನಗರ, ಟಯರ್ 2 ಸಿಟಿಗಳಿಗೂ ಡಿಮಾರ್ಟ್ ಕಾಲಿಟ್ಟಿದೆ. MRP ಗಿಂತ ಕಡಿಮೆ ಬೆಲೆಯಲ್ಲಿ ವಸ್ತುಗಳನ್ನು ನೀಡುತ್ತಿರೋದರಿಂದ ಬಹುದಿನಗಳಿಂದ ಡಿಮಾರ್ಟ್ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ.

35
ಯಾವಾಗ ಶಾಪಿಂಗ್ ಮಾಡಬೇಕು?

ವಾರಂತ್ಯ ಮತ್ತು ತಿಂಗಳ ಆರಂಭದಲ್ಲಿ ಡಿಮಾರ್ಟ್ ಮಾಲ್‌ಗಳು ಹೆಚ್ಚು ಜನಸಂದಣಿಯನ್ನು ಹೊಂದಿರುತ್ತವೆ. ವಾರಂತ್ಯಗಳನ್ನು ಹೊರತುಪಡಿಸಿ ಇತರೆ ದಿನಗಳಲ್ಲಿ ಅತ್ಯಂತ ಕಡಿಮೆ ಬೆಲೆಗೆ ವಸ್ತುಗಳನ್ನು ನೀಡಲಾಗುತ್ತದೆ. ವಾರಂತ್ಯಕ್ಕೆ ಹೋಲಿಸಿದ್ರೆ ಸಾಮಾನ್ಯ ದಿನಗಳಲ್ಲಿ ಬೆಲೆ ಕೊಂಚ ಕಡಿಮೆಯಾಗಿರುತ್ತದೆ. expiry date ಸಮೀಪಿಸುತ್ತಿರುವ ವಸ್ತುಗಳ ಮೇಲೆ ಡಿಮಾರ್ಟ್ ಹೆಚ್ಚಿನ ರಿಯಾಯ್ತಿಯನ್ನು ನೀಡುತ್ತವೆ. ಹಾಗಾಗಿ ಹೆಚ್ಚಿನ ರಿಯಾಯ್ತಿ ವಸ್ತು ಖರೀದಿಸುವಾಗ ದಿನಾಂಕಗಳನ್ನು ಗಮನಿಸಿ.

45
ಅತ್ಯಧಿಕ ಲಾಭ ನಿಮ್ಮದಾಗಿಸಿಕೊಳ್ಳಿ

ಡಿಮಾರ್ಟ್‌ನಲ್ಲ ದಿನಸಿ, ಎಲೆಕ್ಟ್ರಾನಿಕ್ಸ್, ಬಟ್ಟೆ ಸೇರಿದಂತೆ ಹಲವು ವಸ್ತುಗಳ ಮೇಲೆ ಹೆಚ್ಚಿನ ರಿಯಾಯ್ತಿ ನೀಡಲಾಗುತ್ತದೆ. ಆನ್‌ಲೈನ್ ಮೂಲಕ ಡಿಮಾರ್ಟ್‌ ನಲ್ಲಿ ಶಾಪಿಂಗ್ ಮಾಡಬಹುದು. ಹಬ್ಬದ ಸೀಸನ್‌ನಲ್ಲಿ ಅತ್ಯಧಿಕ ಶಾಪಿಂಗ್ ಮಾಡಿ ಹೆಚ್ಚಿನ ಹಣ ಉಳಿಸಬಹುದಾಗಿದೆ. ಗುಣಮಟ್ಟ, ಮುಕ್ತಾಯ ದಿನಾಂಕ ಮತ್ತು ರಿಟರ್ನ್ ನೀತಿಯನ್ನು ನೋಡಿ ಶಾಪಿಂಗ್ ಅತ್ಯಧಿಕ ಲಾಭ ನಿಮ್ಮದಾಗುತ್ತದೆ.

ಇದನ್ನೂ ಓದಿ: DMart Business: ಡಿ-ಮಾರ್ಟ್ ಮುಚ್ಚುವಂತೆ ಆಗ್ರಹ; ವ್ಯಾಪಾರಿಗಳ ಹೋರಾಟಕ್ಕೆ ಶಾಸಕರ ಬೆಂಬಲ

55
ಹೆಚ್ಚಿನ ರಿಯಾಯಿತಿಯ ವಸ್ತುಗಳು

ಆಹಾರ ಪದಾರ್ಥಗಳು ಮತ್ತು ಸೌಂದರ್ಯವರ್ಧಕಗಳನ್ನು ಖರೀದಿಸುವಾಗ, ನೀವು ಮುಕ್ತಾಯ ದಿನಾಂಕ ಪರಿಶೀಲಿಸಬೇಕು. ಸೀಮಿತ ಸ್ಟಾಕ್ ಎಂದು ಬೋರ್ಡ್ ಹೊಂದಿರುವ ವಸ್ತುಗಳನ್ನು ಖರೀದಿಸುವ ಮುನ್ನ ಗುಣಮಟ್ಟವನ್ನು ಪರಿಶೀಲಿಸಬೇಕು.ಅವಧಿ ಮುಗಿಯಲಿರುವ ವಸ್ತುಗಳ ಮೇಲೆ ಡಿಮಾರ್ಟ್ ಹೆಚ್ಚಿನ ರಿಯಾಯಿತಿಗಳನ್ನು ನೀಡುತ್ತದೆ. ಅವುಗಳನ್ನು ಖರೀದಿಸುವಾಗ ಜಾಗರೂಕರಾಗಿರಿ.

ಇದನ್ನೂ ಓದಿ: ನಿಮ್ಮ ಸ್ಥಳದಲ್ಲಿ ಡಿ ಮಾರ್ಟ್ ಬ್ರ್ಯಾಂಚ್ ಆರಂಭಿಸಬಹುದು, ಅರ್ಜಿ ಸಲ್ಲಿಸೋದು ಹೇಗೆ?

Read more Photos on
click me!

Recommended Stories