ಕೊನೆಗೂ ಇಳಿಕೆಯಾಯ್ತು ಚಿನ್ನದ ಬೆಲೆ; 9 ದಿನದಲ್ಲಿ 3 ಸಾವಿರ ರೂಪಾಯಿವರೆಗೆ ಇಳಿಕೆಯಾದ ಬಂಗಾರ

First Published | Nov 9, 2024, 12:01 PM IST

ಸತತವಾಗಿ ಏರಿಕೆಯತ್ತಲೇ ಮುಖ ಮಾಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಇಳಿಕೆಯಾಗಿದೆ. ಚಿನ್ನದ ಜೊತೆ ಬೆಳ್ಳಿ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ. 

ಷೇರು ಮಾರುಕಟ್ಟೆಯಲ್ಲಿ ಚಿನ್ನ ಹೂಡಿಕೆಯ ಪ್ರಮುಖ ವಿಚಾರವಾಗಿರುವುದರಿಂದ ಚಿನ್ನದ ದರದಲ್ಲಿ ಪ್ರತಿದಿನವೂ ಏರಿಳಿತಗಳಾಗುತ್ತಲೇ ಇರುತ್ತವೆ. ಇಂದು ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಬೆಂಗಳೂರಿನಲ್ಲಿಯೂ ಚಿನ್ನದ ಬೆಲೆ ಇಳಿಕೆಯಾಗಿದೆ. ನವೆಂಬರ್ ಆರಂಭದಿಂದ ಚಿನ್ನದ ಬೆಲೆ ಹಂತ ಹಂತವಾಗಿ ಇಳಿಕೆಯಾಗುತ್ತಿದೆ. ಕಳೆದ 9 ದಿನಗಳಲ್ಲಿ 22 ಕ್ಯಾರಟ್  ಚಿನ್ನದ ಬೆಲೆಯಲ್ಲಿ 3,000  ರೂ.ವರೆಗೆ ಇಳಿಕೆಯಾಗಿದೆ.

22 ಕ್ಯಾರಟ್ ಚಿನ್ನದ ಬೆಲೆ

1 ಗ್ರಾಂ: 7,275  ರೂಪಾಯಿ (10 ರೂ. ಇಳಿಕೆ)
8 ಗ್ರಾಂ: 58,200 ರೂಪಾಯಿ (80 ರೂ. ಇಳಿಕೆ)
10 ಗ್ರಾಂ: 72,750 ರೂಪಾಯಿ (100 ರೂ. ಇಳಿಕೆ)

Latest Videos


24 ಕ್ಯಾರಟ್ ಚಿನ್ನದ ಬೆಲೆ

1 ಗ್ರಾಂ: 7,936 ರೂಪಾಯಿ (11 ರೂ. ಇಳಿಕೆ)
8  ಗ್ರಾಂ: 63,488 ರೂಪಾಯಿ (88 ರೂ. ಇಳಿಕೆ)
10 ಗ್ರಾಂ: 79,360 ರೂಪಾಯಿ (110 ರೂ. ಇಳಿಕೆ)

ವಿವಿಧ ನಗರಗಳಲ್ಲಿ ಚಿನ್ನದ ಬೆಲೆ

ಬೆಂಗಳೂರು ಸೇರಿದಂತೆ ದೇಶ ಪ್ರಮುಖ ನಗರಗಳಲ್ಲಿಯೂ  ಚಿನ್ನದ ಬೆಲೆ ಇಳಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ.
ಚೆನ್ನೈ: 72,750 ರೂ.
ಮುಂಬೈ: 72,750 ರೂ.
ದೆಹಲಿ: 72,900 ರೂ.

ದೇಶದಲ್ಲಿ ಬೆಳ್ಳಿ ಬೆಲೆ

ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು, ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 10 ಗ್ರಾಂ, 100 ಗ್ರಾಂ ಮತ್ತು 1 ಕೆಜಿ ಬೆಳ್ಳಿ ಕ್ರಮವಾಗಿ 940 ರೂ, 9,400 ರೂ ಮತ್ತು 94,000 ರೂಪಾಯಿ ಆಗಿದೆ. ಚೆನ್ನೈ, ಮುಂಬೈ, ದೆಹಲಿ ಮತ್ತು ಬೆಂಗಳೂರಿನಲ್ಲಿ 10 ಗ್ರಾಂ ಬೆಳ್ಳಿ ಬೆಲೆ ಕ್ರಮವಾಗಿ 1,030 ರೂ., 940  ರೂ., 940 ರೂ. ಮತ್ತು 940 ರೂಪಾಯಿ ಆಗಿದೆ.

ಒಮ್ಮೆ ಚಿನ್ನ ನೀವು ಖರೀದಿಸಿದ್ದೀರಿ ಎಂದಾದರೆ ಅದು ಒಂದು ರೀತಿಯ ಹೂಡಿಕೆಯಂತೆಯೇ. ಅನೇಕರು ಮದುವೆ ಮುಂಜಿಗಳಿಗೆ ಮಾತ್ರವಲ್ಲದೇ ಕಷ್ಟಕಾಲಕ್ಕೆ ನೆರವಿಗೆ ಬರಬಹುದು ಎಂಬ ಕಾರಣಕ್ಕೂ ಚಿನ್ನ ಖರೀದಿಸುತ್ತಾರೆ. ಆಭರಣದ ಬದಲು ಚಿನ್ನದ ಬಿಸ್ಕೆಟ್‌, ಚಿನ್ನದ ಬಾಂಡ್ ಖರೀದಿಸಿದರೆ ಅದು ಒಂದು ರೀತಿಯ ಹೂಡಿಕೆಯಂತೆಯೇ ಇದು ಎಂದಿಗೂ ಸೆಕೆಂಡ್ ಹ್ಯಾಂಡ್ ಆಗುವುದಿಲ್ಲ

click me!