ಯಾವ ಮನೆಯಲ್ಲಿ ಸಂತೋಷ ಇಲ್ಲವೋ, ಯಾರು ನೆಮ್ಮದಿಯಿಂದ ಇರೋದಿಲ್ವೋ ಅವರ ಮನೆಯಲ್ಲಿ ಖಂಡಿತ ಮಹಾಲಕ್ಷ್ಮಿ ಇರೋದಿಲ್ಲ. ಹಾಗಿದ್ದಾಗ ಅಲ್ಲಿ ಸಂಪತ್ತು ಎಂದಿಗೂ ನಿಲ್ಲೋದಿಲ್ಲ. ನೀವು ಹಣ ಉಳಿಸಬೇಕು ಅಂತ ಯೋಚಿಸಿದ್ರೆ ನಿಮ್ಮಲ್ಲಿ ಅಹಂಕಾರ ಇರಬಾರದು. ಹಣದ ಬಗ್ಗೆ ಅಹಂಕಾರ ಬೇಡ. ಹಣದ ಮೋಹ ಎಂದಿಗೂ ಹಣನ ನಿಲ್ಲಗೊಡೋದಿಲ್ಲ. ಹಣ ಸಂಪಾದನೆನ ಹುಚ್ಚು ಹಿಡಿದ ಹಾಗೆ ಮಾಡಬಾರದು. ಗರ್ವ, ಅಹಂಕಾರ ನಿಮ್ಮ ಸಂಪತ್ತನ್ನ ಕಡಿಮೆ ಮಾಡುತ್ತೆ. ಇದನ್ನ ಬಿಟ್ಟರೆ ಖಂಡಿತ ನಿಮ್ಮ ಕೈಯಲ್ಲಿ ಹಣ ನಿಲ್ಲುತ್ತೆ.