Published : Sep 02, 2023, 05:42 PM ISTUpdated : Sep 02, 2023, 05:43 PM IST
ಕೇಂದ್ರ ಹಣಕಾಸು ಇಲಾಖೆ ನೀಡಿದ ಮಾಹಿತಿಯ ಅನ್ವಯ 2023ರ ಆಗಸ್ಟ್‌ನಲ್ಲಿ ದೇಶದ ಜಿಎಸ್‌ಟಿ ಆದಾಯ 1.59 ಲಕ್ಷ ಕೋಟಿ ರೂಪಾಯಿ. 2023ರ ಆಗಸ್ಟ್ ವೇಳೆಗೆ ದೇಶದಲ್ಲಿ ಗರಿಷ್ಠ ಜಿಎಸ್‌ಟಿ ಆದಾಯ ತಂದುಕೊಡುವ ಟಾಪ್ 10 ರಾಜ್ಯಗಳ ಲಿಸ್ಟ್ ಇಲ್ಲಿದೆ.
10. ತೆಲಂಗಾಣ: ದೇಶದ 11ನೇ ಅತಿದೊಡ್ಡ ರಾಜ್ಯ ಎನಿಸಿರುವ ತೆಲಂಗಾಣ, ವಿಶ್ವದ ಪ್ರಸಿದ್ಧ ಸಾಫ್ಟ್‌ವೇರ್ ಕಂಪನಿಗಳಿಗೂ ನೆಲೆಯಾಗಿದೆ. ಆಗಸ್ಟ್ 2023ರಲ್ಲಿ ತೆಲಂಗಾಣದಿಂದ 4303 ಕೋಟಿ ರೂಪಾಯಿ ಜಿಎಸ್‌ಟಿ ಆದಾಯ ಬಂದಿದೆ.
210
09: ಒಡಿಶಾ: ನವೀನ್ ಪಟ್ನಾಯಕ್ ಮುಖ್ಯಮಂತ್ರಿಯಾಗಿರುವ ಒಡಿಶಾ, ದೇಶದ 8ನೇ ಅತಿದೊಡ್ಡ ರಾಜ್ಯ. ನೈಸರ್ಗಿಕ ಸಂಪನ್ಮೂಲಗಳಿಂದ ಸಂಪದ್ಭರಿತವಾಗಿರುವ ಒಡಿಶಾ ಆಗಸ್ಟ್ ತಿಂಗಳಿನಲ್ಲಿ 4408 ಕೋಟಿ ರೂಪಾಯಿಯನ್ನು ಜಿಎಸ್‌ಟಿ ಆದಾಯವಾಗಿ ನೀಡಿದೆ.
310
08: ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ರಾಜ್ಯ 4620 ಕೋಟಿ ರೂಪಾಯಿಯನ್ನು ಜಿಎಸ್‌ಟಿ ಆದಾಯವಾಗಿ ನೀಡಿದೆ. ಜನಸಂಖ್ಯೆಯ ಆಧಾರದಲ್ಲಿ ಟೋಕಿಯೋ ಬಳಿಕ ವಿಶ್ವದ 2ನೇ ಅತಿದೊಡ್ಡ ಮೆಟ್ರೋಪಾಲಿಟಿನ್ ನಗರ ಇದಾಗಿದೆ.
410
07: ಪಶ್ಚಿಮ ಬಂಗಾಳ: ರಾಜಕೀಯದ ನಿಟ್ಟಿನಲ್ಲಿ ದೇಶದ ಪಾಲಿಗೆ ಅತ್ಯಂತ ಪ್ರಮುಖವಾಗಿ ಪಶ್ಚಿಮ ಬಂಗಾಳ, ದೇಶದ 13ನೇ ಅತಿದೊಡ್ಡ ರಾಜ್ಯ. ಆಗಸ್ಟ್‌ನಲ್ಲಿ ಈ ರಾಜ್ಯದಿಂದ ಬಂದ ಜಿಎಸ್‌ಟಿ ಆದಾಯ 4620 ಕೋಟಿ ರೂಪಾಯಿ.
510
06. ಉತ್ತರ ಪ್ರದೇಶ: ದೇಶದ ಅತ್ಯಂತ ಗರಿಷ್ಠ ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶ ನಿಧಾನವಾಗಿ ತನ್ನ ಜಿಎಸ್‌ಟಿ ಆದಾಯವನ್ನು ಏರಿಸಿಕೊಳ್ಳತೊಡಗಿದೆ. ಆಗಸ್ಟ್‌ನಲ್ಲಿ ಉತ್ತರ ಪ್ರದೇಶದ ಜಿಎಸ್‌ಟಿ ಆದಾಯ 7468 ಕೋಟಿ ರೂಪಾಯಿ.
610
05. ಹರಿಯಾಣ: ದೆಹಲಿಯ ಪಕ್ಕದ ರಾಜ್ಯ ಹರಿಯಾಣಕ್ಕೆ ಚಂಡೀಗಢ ಹಾಗೂ ಫರೀದಾಬಾದ್ ಆದಾಯದ ಮೂಲ. ಅದರೊಂದಿಗೆ ಗುರುಗ್ರಾಮ ಸಾಫ್ಟ್‌ವೇರ್ ಕಂಪನಿಗಳ ಆಶ್ರಯತಾಣವಾಗಿದೆ. ಆಗಸ್ಟ್‌ನಲ್ಲಿ ಹರಿಯಾಣದ ಜಿಎಸ್‌ಟಿ ಆದಾಯ 7666 ಕೋಟಿ ರೂಪಾಯಿ.
710
04.ತಮಿಳುನಾಡು: ಡಿಎಂಕೆ ಅಧಿಕಾರದಲ್ಲಿರುವ ತಮಿಳುನಾಡು ಕೂಡ ಭರ್ಜರಿ ಜಿಎಸ್‌ಟಿ ಆದಾಯ ಗಳಿಸುತ್ತಿದೆ. ರಾಜಧಾನಿ ಚೆನ್ನೈ ದೊಡ್ಡ ಮಟ್ಟಕ್ಕೆ ನೆರವು ನೀಡುತ್ತಿದೆ. 9475 ಕೋಟಿ ರೂಪಾಯಿಯನ್ನು ತಮಿಳುನಾಡು ಆಗಸ್ಟ್‌ನಲ್ಲಿ ಜಿಎಸ್‌ಟಿ ಆದಾಯಕ್ಕೆ ನೀಡಿದೆ.
810
03. ಗುಜರಾತ್: ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ. ಗರಿಷ್ಠ ಜಿಎಸ್‌ಟಿ ಆದಾಯ ತರುವ ರಾಜ್ಯಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.ಆಗಸ್ಟ್‌ನಲ್ಲಿ ಗುಜರಾತ್‌ನ ಆದಾಯ 9765 ಕೋಟಿ ರೂಪಾಯಿ.
910
02. ಕರ್ನಾಟಕ: ಎಂದಿನಂತೆ ಕರ್ನಾಟಕ ಗರಿಷ್ಠ ಜಿಎಸ್‌ಟಿ ಆದಾಯ ನೀಡುವ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಐಟಿ ಸಿಟಿ ಬೆಂಗಳೂರನ್ನು ರಾಜಧಾನಿಯನ್ನಾಗ ಹೊಂದಿರುವ ಕರ್ನಾಟಕ ಆಗಸ್ಟ್‌ನಲ್ಲಿ 11116 ಕೋಟಿ ರೂಪಾಯಿ ಜಿಎಸ್‌ಟಿ ಆದಾಯ ಗಳಿಸಿದೆ.
1010
01. ಮಹಾರಾಷ್ಟ್ರ: ದೇಶದ ವಾಣಿಜ್ಯ ನಗರಿ ಮುಂಬೈಯನ್ನು ಹೊಂದಿರುವ ಮಹರಾಷ್ಟ್ರ ನಿರೀಕ್ಷೆಯಂತೆ ದೇಶದ ಜಿಎಸ್‌ಟಿಗೆ ದೊಡ್ಡ ಮಟ್ಟದ ಕೊಡುಗೆ ನೀಡಿದೆ. ಬರೋಬ್ಬರಿ 23282 ಕೋಟಿ ರೂಪಾಯಿ ಹಣವನ್ನು ಜಿಎಸ್‌ಟಿ ಆದಾಯವಾಗಿ ಗಳಿಸಿದೆ.