Published : Sep 01, 2023, 03:10 PM ISTUpdated : Sep 01, 2023, 03:16 PM IST
ಇತ್ತೀಚಿಗೆ ಅಂಬಾನಿ ಬಿಸಿನೆಸ್ ಬಡವಾಯ್ತಾ ಅನ್ನೋ ಪ್ರಶ್ನೆ ಎದುರಾಗಿದೆ. ಯಾಕೆಂದರೆ, ಅಂಬಾನಿ ಒಡೆತನದ ಕಂಪೆನಿಯ ಉದ್ಯೋಗಿಗಳಿಗೆ ಮೂರು ತಿಂಗಳಿಂದ ಸ್ಯಾಲರೀನೆ ಕೊಟ್ಟಿಲ್ಲ. ಅದು ಯಾವ ಕಂಪೆನಿ. ಸ್ಯಾಲರಿ ಪೆಂಡಿಂಗ್ ಇರುವುದು ಯಾಕೆ? ಇಲ್ಲಿದೆ ಮಾಹಿತಿ.
ಭಾರತದ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಮೊದಲ ಸ್ಥಾನದಲ್ಲಿದ್ದಾರೆ. ಅಂಬಾನಿ ಕುಟುಂಬದ ಜೀವನಶೈಲಿ ಎಲ್ಲರನ್ನೂ ಬೆರಗುಗೊಳಿಸುವಂತಿರುತ್ತದೆ. ಅದ್ಧೂರಿ ಕಾರ್ಯಕ್ರಮಗಳು, ಕಾಸ್ಟ್ಲೀ ಕಾರುಗಳು, ಲಕ್ಷ ಲಕ್ಷ ವ್ಯಯಿಸಿ ತಯಾರಿಸುವ ಉಡುಗೆಗಳು, ಹ್ಯಾಂಡ್ ಬ್ಯಾಗ್ಸ್‌ಗೆ ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತದೆ.
28
ಆದ್ರೆ ಇತ್ತೀಚಿಗೆ ಅಂಬಾನಿ ಬಿಸಿನೆಸ್ ಬಡವಾಯ್ತಾ ಅನ್ನೋ ಪ್ರಶ್ನೆ ಎದುರಾಗಿದೆ. ಯಾಕೆಂದರೆ, ಮುಕೇಶ್ ಅಂಬಾನಿ, ಇಶಾ ಅಂಬಾನಿ ಸ್ಟಾರ್ಟ್‌ಅಪ್‌ಗೆ ಮತ್ತೆ ಸಂಬಳ ನೀಡಲು ಸಾಧ್ಯವಾಗಿಲ್ಲ. ಅಂಬಾನಿ ಒಡೆತನದ ಕಂಪೆನಿಯ ಮಾಜಿ ಉದ್ಯೋಗಿಗಳಿಗೆ ಮೂರು ತಿಂಗಳಿಂದ ಸ್ಯಾಲರೀನೆ ಕೊಟ್ಟಿಲ್ಲ. ಅದು ಯಾವ ಕಂಪೆನಿ. ಸ್ಯಾಲರಿ ಪೆಂಡಿಂಗ್ ಇರುವುದು ಯಾಕೆ? ಇಲ್ಲಿದೆ ಮಾಹಿತಿ.
38
ಮುಕೇಶ್ ಅಂಬಾನಿ ಮತ್ತು ಇಶಾ ಅಂಬಾನಿ ಕ್ವಿಕ್-ಗ್ರೋಸರಿ ಡೆಲಿವರಿ ಪ್ರೊವೈಡರ್ ಡಂಜೊ, ಮಾಜಿ ಉದ್ಯೋಗಿಗಳಿಗೆ ಸ್ಯಾಲರಿ ಪಾವತಿಸಿಲ್ಲ. ಮಾಜಿ ಉದ್ಯೋಗಿಗಳ ಸಂಬಳ ಕೊಡುವುದನ್ನು ಮತ್ತೆ ವಿಳಂಬಗೊಳಿಸಲಾಗಿದೆ. ವರದಿಯ ಪ್ರಕಾರ, ಕಂಪನಿಯು ವಿಳಂಬದ ಬಗ್ಗೆ ತಿಳಿಸಲು ಮಾಜಿ ಉದ್ಯೋಗಿಗಳಿಗೆ ಕಂಪೆನಿ ಮೇಲ್ ಕಳುಹಿಸಿದೆ. ಈಗ ಅಕ್ಟೋಬರ್ ತಿಂಗಳಿನಲ್ಲಿ ಸಂಬಳವನ್ನು ಪಾವತಿಸುವುದಾಗಿ ಡಂಜೊ ಹೇಳಿಕೊಂಡಿದೆ.
48
ಈ ಹಿಂದೆ Dunzo ಜುಲೈ 20 ರೊಳಗೆ ಬಾಕಿಗಳನ್ನು ಪಾವತಿಸುವುದಾಗಿ ಭರವಸೆ ನೀಡಿತ್ತು. ನಂತರ ಅದು ಸೆಪ್ಟೆಂಬರ್ 4ಕ್ಕೆ ಹೊಸ ಗಡುವನ್ನು ನಿಗದಿಪಡಿಸಿತು. ದಿನಾಂಕ ಸಮೀಪಿಸುತ್ತಿದ್ದಂತೆ, ನಗದು ಕೊರತೆಯಿರುವ ಕಂಪನಿಯು ಈಗ ದಿನಾಂಕವನ್ನು ಒಂದು ತಿಂಗಳು ವಿಸ್ತರಿಸಿದೆ. ಕಳೆದ ಕೆಲವು ತಿಂಗಳುಗಳಲ್ಲಿ, Dunzo ರಿಲಯನ್ಸ್ ರಿಟೇಲ್ ಸೇರಿದಂತೆ ಕೆಲವು ಹೊಸ ಮತ್ತು ಅಸ್ತಿತ್ವದಲ್ಲಿರುವ ಹೂಡಿಕೆದಾರರೊಂದಿಗೆ ಹಣವನ್ನು ಸಂಗ್ರಹಿಸಲು ಮಾತುಕತೆ ನಡೆಸುತ್ತಿದೆ.
58
'ಸಂಬಳ ವಿಳಂಬಕ್ಕಾಗಿ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ಸಾಧ್ಯವಾದಷ್ಟು ಬೇಗ ನಿಮ್ಮ ಪರಿಹಾರವನ್ನು ನೀವು ಸ್ವೀಕರಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಆದಷ್ಟು ಬೇಗ ಸ್ಯಾಲರಿ ಪಾವತಿ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ. ಆ ಬಳಿಕ ಯಾವುದೇ ವಿಳಂಬವಾಗುವುದಿಲ್ಲ ಎಂದು ನಮಗೆ ವಿಶ್ವಾಸವಿದೆ' ಎಂದು ಡಂಜೊ ಕಳುಹಿಸಿದ ಮೇಲ್‌ನಲ್ಲಿ ತಿಳಿಸಲಾಗಿದೆ.
68
2014ರಲ್ಲಿ ಕಬೀರ್ ಬಿಸ್ವಾಸ್, ಅಂಕುರ್ ಅಗರ್ವಾಲ್, ದಲ್ವಿರ್ ಸೂರಿ ಮತ್ತು ಮುಕುಂದ್ ಝಾ ಸ್ಥಾಪಿಸಿದ ಈ ಸ್ಟಾರ್ಟ್ಅಪ್ ಹಲವು ಸುತ್ತಿನ ಹಣವನ್ನು ಸಂಗ್ರಹಿಸಿತು. ಗೂಗಲ್ ಮತ್ತು ಲೈಟ್‌ಬಾಕ್ಸ್‌ನಂತಹ ದೈತ್ಯ ಬಿಸಿನೆಸ್‌ಗಳ ಗಮನ ಸೆಳೆಯಿತು. ಮುಖೇಶ್ ಅಂಬಾನಿ ಕಳೆದ ವರ್ಷ ಜನವರಿಯಲ್ಲಿ ಸುಮಾರು 1641 ಕೋಟಿ ರೂಪಾಯಿ ಹೂಡಿಕೆ ಮಾಡುವ ಮೂಲಕ ಡಂಜೊದಲ್ಲಿ ಸುಮಾರು 25% ಪಾಲನ್ನು ಖರೀದಿಸಿದರು.
78
ಜೂನ್‌ನಿಂದ ಹಿಂತೆಗೆದುಕೊಂಡ ಸಂಬಳದ ಅಂಶದ ಮೇಲೆ ವಾರ್ಷಿಕ 12% ಬಡ್ಡಿಯನ್ನು ಪಾವತಿಸುವುದಾಗಿ ಡಂಜೊ ಉದ್ಯೋಗಿಗಳಿಗೆ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ. ಸೆಪ್ಟೆಂಬರ್ 4 ರಂದು ಪಾವತಿಸಬೇಕಾದ ಜೂನ್ ಮತ್ತು ಜುಲೈ ತಿಂಗಳ ಬಾಕಿ ಇರುವ ವೇತನವನ್ನು ಅಕ್ಟೋಬರ್ ಮೊದಲ ವಾರದಲ್ಲಿ ಪಾವತಿಸಲಾಗುವುದು. ನೀವು 12 ಪ್ರತಿಶತ p.a ಜೊತೆಗೆ ಸಂಬಳ ಬಾಕಿಯನ್ನು ಸ್ವೀಕರಿಸುತ್ತೀರಿ. ಬಡ್ಡಿಯನ್ನು ಈಗ ಹೆಚ್ಚುವರಿ ತಿಂಗಳಿಗೆ ಲೆಕ್ಕಹಾಕಲಾಗುತ್ತದೆ' ಎಂದು ಮಾಜಿ ಉದ್ಯೋಗಿಗಳಿಗೆ ಕಳುಹಿಸಲಾದ ಇಮೇಲ್‌ನಲ್ಲಿ ತಿಳಿಸಲಾಗಿದೆ.
88
ಒಟ್ಟಾರೆಯಾಗಿ, Dunzoನ ಬಾಕಿ ಉಳಿದಿರುವ ಮಾರಾಟಗಾರರ ಸಾಲಗಳು ಸರಿಸುಮಾರು 11.4 ಕೋಟಿ ರೂ., ಈ ಹಿಂದೆ ಅಂದಾಜಿಸಲಾದ 5-6 ಕೋಟಿ ರೂ.ಗಿಂತ ಸುಮಾರು ದ್ವಿಗುಣವಾಗಿದೆ.