ಅಮೆರಿಕದಲ್ಲಿ 75,000 ಕೋಟಿ ಸಾಮ್ರಾಜ್ಯ ನಿರ್ಮಿಸಿದ ಭಾರತೀಯ ಮಹಿಳೆ: ಕನಸಿನ ಉದ್ಯೋಗ ತೊರೆದು ಸ್ವಂತ ಕಂಪನಿ ಸ್ಥಾಪನೆ!

Published : Sep 02, 2023, 12:22 PM IST

ಒರಾಕಲ್ ಮತ್ತು ಲಿಂಕ್ಡ್‌ಇನ್‌ನಂತಹ ದೈತ್ಯ ಸಂಸ್ಥೆಗಳಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕನಸಿನ ಉದ್ಯೋಗಗಳನ್ನು ಪಡೆದ ನೇಹಾ ನಾರ್ಖೆಡೆ ಭಾರತ ಮೂಲದ ಯಶಸ್ವಿ ಮಹಿಳಾ ಉದ್ಯಮಿ.

PREV
17
ಅಮೆರಿಕದಲ್ಲಿ 75,000 ಕೋಟಿ ಸಾಮ್ರಾಜ್ಯ ನಿರ್ಮಿಸಿದ ಭಾರತೀಯ ಮಹಿಳೆ: ಕನಸಿನ ಉದ್ಯೋಗ ತೊರೆದು ಸ್ವಂತ ಕಂಪನಿ ಸ್ಥಾಪನೆ!

ನೇಹಾ ನಾರ್ಖೆಡೆ ಭಾರತದ ಸ್ವಯಂ ಸೃಷ್ಟಿಕರ್ತ ಉದ್ಯಮಿ. ಆಕೆ ಹುಟ್ಟಿದ್ದು, ಬೆಳೆದಿದ್ದು, ಓದಿದ್ದು ಭಾರತದಲ್ಲಿ. ಜಾರ್ಜಿಯಾ ಟೆಕ್‌ನಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಈಕೆ 2006 ರಲ್ಲಿ ಯುನೈಟೆಡ್ ಸ್ಟೇಟ್ಸ್‌ಗೆ ಹೋಗಿದ್ದಳು. ಅವಳು ಒರಾಕಲ್ ಮತ್ತು ಲಿಂಕ್ಡ್‌ಇನ್‌ನಂತಹ ದೈತ್ಯ ಸಂಸ್ಥೆಗಳಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕನಸಿನ ಉದ್ಯೋಗಗಳನ್ನು ಪಡೆದಳು.
 

27

ಆದರೆ, ಈ ಕಂಪನಿಗಳನ್ನು ತೊರೆದಾಗಲೇ ಅವಳ ಕಥೆ ಪ್ರಾರಂಭವಾಯಿತು. ಅಕೆ ಈಗ  ಯುನೈಟೆಡ್ ಸ್ಟೇಟ್ಸ್‌ನ ಅತ್ಯಂತ ಯಶಸ್ವಿ ಮಹಿಳಾ ಉದ್ಯಮಿಗಳಲ್ಲಿ ಒಬ್ಬರು.
 

37

2014 ರಲ್ಲಿ, ನೇಹಾ ನಾರ್ಖೆಡೆ ತಮ್ಮ ಇಬ್ಬರು ಲಿಂಕ್ಡ್‌ಇನ್ ಸಹೋದ್ಯೋಗಿಗಳೊಂದಿಗೆ ಕನ್ಫ್ಲುಯೆಂಟ್ ಎಂಬ ಕಂಪನಿಯನ್ನು ತೆರೆದರು. ಬಳಿಕ ಸಂಸ್ಥೆಯು ಯಶಸ್ವಿಯಾಯಿತು. ಕಂಪನಿಯು 2021 ರಲ್ಲಿ ಸಾರ್ವಜನಿಕವಾಗಿದ್ದು, 9.1 ಬಿಲಿಯನ್ ಡಾಲರ್ (ರೂ. 75,000 ಕೋಟಿಗೂ ಹೆಚ್ಚು) ಮೌಲ್ಯವನ್ನು ಹೊಂದಿದೆ. ಅವರು ಕಂಪನಿಯ ಆರು ಪ್ರತಿಶತದಷ್ಟು ಮಾಲೀಕತ್ವವನ್ನು ಹೊಂದಿದ್ದಾರೆ.
 

47

ಈಗ 2021 ರಲ್ಲಿ ಸ್ಥಾಪಿಸಿದ ವಂಚನೆ ಪತ್ತೆ ಸಂಸ್ಥೆ ಆಸ್ಸಿಲಾರ್ ಅನ್ನು ಸಹ ನಡೆಸುತ್ತಿದ್ದಾರೆ ನೇಹಾ ನಾರ್ಖೆಡೆ. ಅವರು ಸಂಸ್ಥೆಯಲ್ಲಿ ಸುಮಾರು 160 ಕೋಟಿ ರೂ. ಧನಸಹಾಯ ಮಾಡಿದ್ದು, ಮತ್ತು ಅದರ CEO ಆಗಿದ್ದಾರೆ. 

57

ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾನಿಲಯದಲ್ಲಿ ನೇಹಾ ನಾರ್ಖೆಡೆ ತಮ್ಮ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಲಿಂಕ್ಡ್‌ಇನ್‌ನಲ್ಲಿ, ಅವರು ಅಪಾಚೆ ಕಾಫ್ಕಾ ಎಂಬ ಸಂದೇಶ ಕಳುಹಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಿದ್ದರು. ತನ್ನ ಯಶಸ್ಸಿಗೆ ಈಕೆ ತನ್ನ ತಂದೆಗೆ ಮನ್ನಣೆ ನೀಡಿದ್ದಾಳೆ. 

67

ಆಕೆಯ ತಂದೆ ತನಗಾಗಿ ಪುಸ್ತಕಗಳನ್ನು ಆಯ್ಕೆ ಮಾಡಿ ಕೊಡ್ತಿದ್ರು. ಇಂದಿರಾ ಗಾಂಧಿ ಕುರಿತ ಪುಸ್ತಕಗಳನ್ನು, ಇಂದ್ರಾ ನೂಯಿ ಮತ್ತು ಕಿರಣ್ ಬೇಡಿ ಬೆಳೆಯುತ್ತಿರುವ ಬಗ್ಗೆಯೂ ಓದಿದ್ದೇನೆ ಎಂದು ನೇಹಾ ನಾರ್ಖೆಡೆ ಹೇಳಿದ್ದಾರೆ. ಈ ಕಥೆಗಳನ್ನು ಓದುವುದು ಅವಳಲ್ಲಿ ಮಹಿಳಾ ಸಬಲೀಕರಣದ ಭಾವನೆಯನ್ನು ಬೆಳೆಸಿದೆಯಂತೆ.

77

ನೇಹಾ ನಾರ್ಖೆಡೆ ಕ್ಯಾಲಿಫೋರ್ನಿಯಾದ ಪಾಲೋ ಆಲ್ಟೊದಲ್ಲಿ ವಾಸಿಸುತ್ತಿದ್ದಾರೆ. ಅಮೆರಿಕದ 100 ವ್ಯಾಪಾರ ಮಹಿಳೆಯರ ಫೋರ್ಬ್ಸ್ ಪಟ್ಟಿಯಲ್ಲಿ 50ನೇ ಸ್ಥಾನದಲ್ಲಿದ್ದಾರೆ. ಆಕೆಯ ನಿವ್ವಳ ಆಸ್ತಿ ಮೌಲ್ಯ 4296 ಕೋಟಿ ರೂ. ಎಂಬುದೂ ಗಮನಾರ್ಹ ವಿಚಾರ.

Read more Photos on
click me!

Recommended Stories