ಕೆಲವೇ ತಿಂಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಆಗುತ್ತಾ? ತಜ್ಞರು ಕೊಟ್ಟ ಸೂಚನೆ ಏನು? ಪ್ರತಿ ದಿನ ದಾಖಲೆಯ ಏರಿಕೆ ಕಾಣುತ್ತಿರುವ ಚಿನ್ನದ ಆತಂಕ ಕೆಲವೇ ದಿನಗಳಲ್ಲಿ ದೂರವಾಗುತ್ತಾ? ಖರೀದಿಸಲು ಬಯಸುವವರು ಸ್ವಲ್ಪ ಕಾಯಬೇಕಾ?
ಚಿನ್ನದ ಬೆಲೆ ಪ್ರತಿ ದಿನ ಭಾರಿ ಏರಿಕೆಯಾಗುತ್ತಿದೆ. ಇದೀಗ 10 ಗ್ರಾಂ ಚಿನ್ನದ ಬೆಲೆ 1.6 ಲಕ್ಷ ರೂಪಾಯಿಗೆ ಏರಿಕೆಯಾಗಿದೆ. ಗಣರಾಜ್ಯೋತ್ಸವ ದಿನದಾಚರಣೆ ದಿನವೇ ಭಾರತದಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ದಾಖಲೆ ಬರೆದಿದೆ. ಸೋಮವಾರ (ಜ.26) 24 ಕ್ಯಾರಟ್ ಪ್ರತಿ ಗ್ರಾಂ ಚಿನ್ನದ ಬೆಲೆ 16,271 ರೂಪಾಯಿಗೆ ಏರಿಕೆಯಾಗಿದೆ. ಪ್ರತಿ ಗ್ರಾಂಗೆ 245 ರೂಪಾಯಿ ಏರಿಕೆ ಕಂಡಿದೆ. ಆದರೆ ಖರೀದಿಸಲು ಬಯಸುವರು ಸ್ವಲ್ಪ ಕಾಯಬೇಕಾ? ತಜ್ಞರು ಕೊಟ್ಟ ಸೂಚನೆ ಏನು?
26
ಗೋಲ್ಡ್‌ಮನ್ ಸ್ನಾಚ್ ವರದಿ ಹೇಳುವುದೇನು?
ಗೋಲ್ಡಮನ್ ಸ್ನಾಚ್ ವರದಿ ಪ್ರಕಾರ 2026ರಲ್ಲಿ ಚಿನ್ನದ ಬೆಲೆ 5,400 ಅಮೆರಿಕನ್ ಡಾಲರ್‌ಗೆ ಏರಿಕೆಯಾಗಲಿದೆ ಎಂದಿದೆ. ಅಂದರೆ 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ ಸರಿಸುಮಾರು 1.75 ಲಕ್ಷ ರೂಪಾಯಿ ಅಸುಪಾಸಿನಲ್ಲಿರಲಿದೆ. ಚಿನ್ನದ ಬೆಲೆಯಲ್ಲಿ ಏರಿಕೆ ನಿಜ. ಆದರೆ ಜಾಗತಿಕ ನೀತಿಗಳಲ್ಲಿನ ಬದಲಾವಣೆ, ಸದ್ಯ ಮೂಡಿರುವ ಅನಿಶ್ಚಿತ ವಾತಾವರಣ ದೂರ ಸರಿಯುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ಇಳಿಕೆ ಕಾಣುವ ಸಾಧ್ಯತೆಗಳಿವೆ ಎಂದಿದೆ.
36
ಖಾಸಗಿ ವಲಯಗಳ ಬೇಡಿಕೆ
ಪ್ರಮುಖವಾಗಿ ಬ್ಯಾಂಕ್, ದೇಶಗಳು ಸಂಪತ್ತು ಕ್ರೋಢಿಕರಣ ಹಾಗೂ ದೇಶದ ಸಂಪತ್ತಿನ ಮೌಲ್ಯ, ಹೂಡಿಕೆದಾರರು ಚಿನ್ನದವನ್ನು ಪ್ರಮುಖ ಹೆಡ್ಜ್ ಆಗಿ ಬಳಕೆ ಮಾಡುತ್ತದೆ. ಇದೀಗ ಖಾಸಗಿ ವಲಯಗಳಿಂದಲೂ ಚಿನ್ನದ ಮೇಲೆ ಬೇಡಿಕೆಗಳು ಬರುತ್ತಿದೆ.ಇದರ ಪರಿಣಾಮ ಚಿನ್ನದ ಬೆಲೆ ಏರಿಕೆಯಾಗುತ್ತಾ ಸಾಗುತ್ತಿದೆ. ಚಿನ್ನದ ಮಾರುಕಟ್ಟೆ ಪ್ರತಿ ದಿನ ಗರಿಷ್ಠ ವಹಿವಾಟಿನೊಂದಿಗೆ ಆರಂಭಗೊಂಡು, ಅದೇ ರೀತಿ ದಾಖಲೆ ಬೆಲೆಯಲ್ಲಿ ಅಂತ್ಯಗೊಳ್ಳುತ್ತಿದೆ.
ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಫೆಡರಲ್ ರಿಸರ್ವ್ ಬ್ಯಾಂಕ್ ಬಡ್ಡಿದರಗಳನ್ನು ಸಡಿಲಿಸುವ ಸಾಧ್ಯತೆಗಳಿವೆ. ಹೀಗಾದಲ್ಲಿ ಗೋಲ್ಡ್‌ಮನ್ ಸ್ನಾಚ್ ವರದಿಯಂತೆ ಚಿನ್ನದ ಬೆಲೆಯಲ್ಲಿ ಇಳಿಕೆ ಕಾಣುವ ಸಾಧ್ಯತೆ ಇದೆ. ಆದರೆ ಭಾರಿ ಇಳಿಕೆ ಎಂದಿಗೂ ಸಾಧ್ಯವಿರುವಂತೆ ತೋರುತ್ತಿಲ್ಲ ಎನ್ನುತ್ತಿದೆ ವರದಿ.
56
ಚಿನ್ನದ ಮೌಲ್ಯದ ವ್ಯತ್ಯಾಸ
50 ಬೇಸಿಸ್ ಪಾಯಿಂಟ್ ಇಳಿಕೆ ಸಾಧ್ಯೆತೆಗಳನ್ನು ವರದಿಗಳು ಹೇಳುತ್ತಿದೆ. ಸದ್ಯ ಏರಿಕೆ ಗತಿಯಲ್ಲಿ ಸಾಗುತ್ತಿರುವ ಚಿನ್ನಕ್ಕೆ ಬೇಸಿಸ್ ಪಾಯಿಂಟ್‌ಗಳಲ್ಲಿನ ಬದಲಾವಣೆ ಇಳಿಕೆಗೆ ಮುನ್ನಡಿ ಬರೆಯುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ. ಆದರೆ ಜಾಗತಿಕ ನೀತಿಗಳು, ತೆರಿಗೆ ನೀತಿ, ಡಾಲರ್ ಮೌಲ್ಯ, ರೂಪಾಯಿ ಮೌಲ್ಯಗಳು ಚಿನ್ನದ ಬೆಲೆಯಲ್ಲಿ ವ್ಯತ್ಯಾಸಗಳಿಗೂ ಕಾರಣವಾಗಬಲ್ಲದು.
66
2026ರ ಆರಂಭದಿಂದಲೇ ಏರಿಕೆ ಗತಿ
2026ರ ಆರಂಭದಲ್ಲಿ ಏರಿಕೆಯತ್ತ ಸಾಗಿದ್ದ ಚಿನ್ನ ಇತ್ತೀಚೆಗೆ ಒಂದು ದಿನ ದಿಢೀರ್ ಇಳಿಕೆ ಕಂಡಿತ್ತು. ಆದರೆ ಅಷ್ಟೇ ವೇಗದಲ್ಲಿ ಮತ್ತೆ ಮೈಕೊಡವಿ ನಿಂತ ಚಿನ್ನದ ಮೌಲ್ಯ ಮತ್ತೆ ದಾಖಲೆ ಬರೆದಿತ್ತು. ಚಿನ್ನದ ಮೌಲ್ಯದಲ್ಲಿ ಇಳಿಕೆ ಕಡಿಮೆ, ಆದರೆ ಏರಿಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳನ್ನು ಗೋಲ್ಡ್‌ಮನ್ ಸ್ನಾಚ್ ಹೇಳಿದೆ. ಜಾಗತಿಕ ಮಟ್ಟದಲ್ಲಿನ ಕೆಲ ಬದಾಲವಣೆಗಳು, ತೆರಿಗೆಗಳು ಪ್ರತಿಕೂಲವಾಗಿದ್ದರೆ ಮಾತ್ರ ಚಿನ್ನದ ಬೆಲೆಯಲ್ಲಿ ಇಳಿಕೆ ಕಾಣುವ ಸಾಧ್ಯತೆ ಇದೆ ಎಂದಿದೆ.
2026ರ ಆರಂಭದಿಂದಲೇ ಏರಿಕೆ ಗತಿ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.