ಸುಲಭವಾಗಿ ಕೇವಲ 72 ಗಂಟೆಗಳಲ್ಲಿ ಇಲ್ಲಿ ಸಿಗುತ್ತೆ ₹5 ಲಕ್ಷ ಸಾಲ..! ಬ್ಯಾಂಕ್‌ಗೆ ಹೋಗುವ ಕೆಲಸವೂ ಇಲ್ಲ!

Published : Jan 25, 2026, 03:02 PM IST

ಸಾಲ ಬೇಕಂದ್ರೆ ಒಳ್ಳೆ ಸಿಬಿಲ್ ಸ್ಕೋರ್ ಇರಬೇಕು ಅನ್ನೋದು ಗೊತ್ತೇ ಇದೆ. ಆಮೇಲೆ ಬ್ಯಾಂಕ್‌ಗಳ ಸುತ್ತ ಅಲೆಯಬೇಕು. ಆದರೆ, ಹಾಗಿಲ್ಲದೆ ಫೋನ್‌ನಲ್ಲಿ ಒಂದೇ ಕ್ಲಿಕ್‌ನಲ್ಲಿ ಹಣ ನಿಮ್ಮ ಖಾತೆಗೆ ಬಂದರೆ ಚೆನ್ನಾಗಿರುತ್ತೆ ಅಲ್ವಾ! ಫೋನ್‌ಪೇ ಈಗ ಅಂತಹದ್ದೇ ಒಂದು ಫೀಚರ್ ತಂದಿದೆ. 

PREV
15
ಫೋನ್‌ಪೇನಿಂದ ಸಾಲ. ಬ್ಯಾಂಕ್ ಸುತ್ತ ಓಡಾಡಬೇಕಿಲ್ಲ!

ತುರ್ತಾಗಿ ಹಣ ಬೇಕಾದಾಗ ಬ್ಯಾಂಕ್‌ಗಳ ಸುತ್ತ ಓಡಾಡುವುದು ಹಲವರಿಗೆ ದೊಡ್ಡ ತಲೆನೋವು. ದಾಖಲೆಗಳು, ಗ್ಯಾರಂಟಿ ಅಂತ ತಡವಾಗುತ್ತೆ. ಈ ಪರಿಸ್ಥಿತಿಗೆ ಫೋನ್‌ಪೇ ಈಗ ಸುಲಭ ಪರಿಹಾರ ನೀಡುತ್ತಿದೆ. ದಿನನಿತ್ಯದ ಡಿಜಿಟಲ್ ಪಾವತಿಗಳಿಗೆ ಬಳಸುವ ಫೋನ್‌ಪೇ ಆ್ಯಪ್‌ನಿಂದಲೇ ಸಾಲ ಪಡೆಯುವ ಅವಕಾಶವಿದೆ.

25
ಎಷ್ಟು ಸಾಲ ಪಡೆಯಬಹುದು?

ಫೋನ್‌ಪೇ ವಿವಿಧ ಬ್ಯಾಂಕ್‌ಗಳು ಮತ್ತು NBFCಗಳ ಜೊತೆ ಸೇರಿ ವೈಯಕ್ತಿಕ ಸಾಲಗಳನ್ನು ನೀಡುತ್ತಿದೆ. ಬಳಕೆದಾರರ ಕ್ರೆಡಿಟ್ ಪ್ರೊಫೈಲ್ ಆಧರಿಸಿ 10 ಸಾವಿರದಿಂದ ಗರಿಷ್ಠ 5 ಲಕ್ಷ ರೂ.ವರೆಗೆ ಸಾಲ ಸಿಗುತ್ತದೆ. ಇವು ಅಸುರಕ್ಷಿತ ಸಾಲಗಳಾದ್ದರಿಂದ ಯಾವುದೇ ಆಸ್ತಿ ಅಥವಾ ಚಿನ್ನ ಅಡಮಾನ ಇಡುವ ಅಗತ್ಯವಿಲ್ಲ.

35
ಬಡ್ಡಿ ದರಗಳು ಮತ್ತು ಮರುಪಾವತಿ ಅವಧಿ

ಸಾಲ ಅನುಮೋದನೆಗೊಂಡ ನಂತರ, ಗರಿಷ್ಠ 72 ಗಂಟೆಗಳಲ್ಲಿ ಹಣ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಮರುಪಾವತಿ ಅವಧಿಯನ್ನು 12 ರಿಂದ 60 ತಿಂಗಳವರೆಗೆ ಆಯ್ಕೆ ಮಾಡಬಹುದು. ಬಡ್ಡಿ ದರಗಳು ವಾರ್ಷಿಕವಾಗಿ ಸುಮಾರು 11.30% ರಿಂದ ಪ್ರಾರಂಭವಾಗುತ್ತವೆ. ಸಂಸ್ಕರಣಾ ಶುಲ್ಕ, EMI ವಿವರಗಳನ್ನು ಮೊದಲೇ ಸ್ಪಷ್ಟವಾಗಿ ತೋರಿಸಲಾಗುತ್ತದೆ.

45
ಯಾರು ಅರ್ಹರು? ಬೇಕಾದ ಅರ್ಹತೆಗಳು

ಈ ಸಾಲಕ್ಕೆ ಅರ್ಜಿ ಸಲ್ಲಿಸಲು ವಯಸ್ಸು 21 ರಿಂದ 60 ವರ್ಷಗಳ ನಡುವೆ ಇರಬೇಕು. ಮಾಸಿಕ ಆದಾಯ ಕನಿಷ್ಠ 15,000 ರೂ. ಇರಬೇಕು. ಸಿಬಿಲ್ ಸ್ಕೋರ್ 650ಕ್ಕಿಂತ ಹೆಚ್ಚಿದ್ದರೆ ಅನುಮೋದನೆ ಸಿಗುವ ಸಾಧ್ಯತೆ ಹೆಚ್ಚು. ಸ್ಥಿರ ಆದಾಯ ಇರುವವರಿಗೆ ಆದ್ಯತೆ ನೀಡಲಾಗುತ್ತದೆ.

55
ಅರ್ಜಿ ಸಲ್ಲಿಸುವ ವಿಧಾನ, ಬೇಕಾದ ದಾಖಲೆಗಳು

ಈ ಸಾಲದ ಪ್ರಕ್ರಿಯೆ ಸಂಪೂರ್ಣವಾಗಿ ಡಿಜಿಟಲ್ ಆಗಿದೆ. ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಕಳೆದ ಆರು ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್, ಸಂಬಳದ ಸ್ಲಿಪ್‌ಗಳಿದ್ದರೆ ಸಾಕು. ಅರ್ಜಿ ಸಲ್ಲಿಸಲು, ಮೊದಲು ಫೋನ್‌ಪೇ ಆ್ಯಪ್ ತೆರೆಯಿರಿ. ನಂತರ 'ಲೋನ್ಸ್' ವಿಭಾಗಕ್ಕೆ ಹೋಗಿ, ವೈಯಕ್ತಿಕ ವಿವರಗಳನ್ನು ನಮೂದಿಸಿ. ಸಾಲದ ಮೊತ್ತ ಮತ್ತು ಅವಧಿಯನ್ನು ಆಯ್ಕೆಮಾಡಿ, ಕೊನೆಗೆ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories