ಬೆಳ್ಳಿ-ರೇಷ್ಮೆ ಲೆಹೆಂಗಾ, ವಜ್ರ, ಪಚ್ಚೆ ಆಭರಣದಲ್ಲಿ ಮಿಂಚಿದ ಅನಿಲ್ ಅಂಬಾನಿ ಸೊಸೆ!
First Published | Feb 21, 2022, 6:06 PM ISTರಿಲಯನ್ಸ್ ಗ್ರೂಪ್ (Reliance Group) ಅಧ್ಯಕ್ಷ ಅನಿಲ್ ಅಂಬಾನಿ (Anil Ambani) ಮತ್ತು ಟೀನಾ ಅಂಬಾನಿ (Tina Ambani) ಅವರ ಹಿರಿಯ ಪುತ್ರ ಜೈ ಅನ್ಮೋಲ್ ಅಂಬಾನಿ (Jai Anmol Ambani) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅನ್ಮೋಲ್ ತನ್ನ ದೀರ್ಘ ಕಾಲದ ಗೆಳತಿ ಕ್ರಿಶಾ ಶಾ (Khrisha Shah) ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ. ಕ್ರಿಶಾಳನ್ನು ಮದುವೆಯಾಗುವ ಮೂಲಕ ಅನ್ಮೋಲ್ ಅಂಬಾನಿ ಕುಟುಂಬದ ಸೊಸೆಯಾಗಿದ್ದಾರೆ. ಮದುವೆಯಲ್ಲಿ ಅಂಬಾನಿ ಕುಟುಂಬದ ಸದಸ್ಯರಲ್ಲದೇ, ಅನೇಕ ಬಾಲಿವುಡ್ (Bollywood) ಗಣ್ಯರು ಮತ್ತು ರಾಜಕಾರಣಿಗಳು ಸಹ ಭಾಗವಹಿಸಿದ್ದರು. ಅನ್ಮೋಲ್-ಕ್ರಿಶಾ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗುತ್ತಿವೆ. ವಧುವಾಗಿ ಮಾರ್ಪಟ್ಟಿರುವ ಕ್ರಿಶಾ ಮದುವೆಯಲ್ಲಿ ಕೆಂಪು ಲೆಹೆಂಗಾ ಮತ್ತು ಭಾರೀ ಆಭರಣವನ್ನು ಧರಿಸಿದ್ದರು.