ಲೇಡಿ ಸೂಪರ್‌ಸ್ಟಾರ್ ನಯನತಾರಾ ದಕ್ಷಿಣ ಚಲನಚಿತ್ರೋದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ಅವರು ಟಾಪ್ ನಟಿಯರಲ್ಲಿ ಒಬ್ಬರಾಗಿ ತಮ್ಮ ಸ್ಥಾನ ಮುಂದುವರೆಸುತ್ತಿದ್ದಾರೆ. ನಯನತಾರಾ ಕೊನೆಯದಾಗಿ ಸೂಪರ್‌ಸ್ಟಾರ್ ರಜನಿಕಾಂತ್ ಅವರ 'ಅನ್ನಾತೆ' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ಇತರ ದೊಡ್ಡ ಪ್ರಾಜೆಕ್ಟ್‌ಗಳ ಚಿತ್ರೀಕರಣದಲ್ಲಿದ್ದಾರೆ.
ಇದಲ್ಲದೆ, ಅವರು ತಮ್ಮ ಹಣವನ್ನು ಅನೇಕ ವ್ಯವಹಾರಗಳಲ್ಲಿ ಹೂಡಿಕೆ ಮಾಡಿದ್ದಾರೆ. ಈಗ ವರದಿಯ ಪ್ರಕಾರ, ಅವರು ಯುಎಇ ಮೂಲದ ಹೊಸ ತೈಲ ವ್ಯವಹಾರದಲ್ಲಿ ಹೂಡಿಕೆ ಮಾಡಲು ಸಿದ್ಧರಾಗಿದ್ದಾರೆ. ನಯನಾತಾರಾ ಈ ಹೊಸ ಉದ್ಯಮದಲ್ಲಿ ಸಾಕಷ್ಟು ಮೊತ್ತವನ್ನು ಹೂಡಿಕೆ ಮಾಡಲು ನಿರ್ಧರಿಸಿದ್ದಾರೆ.
ವರದಿಗಳ ಪ್ರಕಾರ, ನಯನತಾರಾ ಅವರು ಲಾಭದಾಯಕ ತೈಲ ವ್ಯವಹಾರದಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದ್ದಾರೆ ಮತ್ತು ಸುಮಾರು ರೂ. 100 ಕೋಟಿ ಹಣ ಖರ್ಚು ಮಾಡಲು ರೆಡಿಯಿದ್ದಾರೆ ಎನ್ನಲಾಗುತ್ತಿದೆ.
ಈ ಉದ್ದೇಶಕ್ಕಾಗಿ ಕಳೆದ ತಿಂಗಳು ತನ್ನ ಭಾವಿ ಪತಿ ವಿಘ್ನೇಶ್ ಜೊತೆ ನಯನತಾರಾ ದುಬೈಗೆ ಭೇಟಿ ನೀಡಿದ್ದರು.ಆದರೆ, ಈ ಸುದ್ದಿಯ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ನಯನತಾರಾ ಉದ್ಯಮದಲ್ಲಿ ಹೂಡಿಕೆ ಮಾಡುತ್ತಿರುವುದು ಇದೇ ಮೊದಲಲ್ಲ.
ನಟಿಯಾಗಿರುವುದರ ಜೊತೆಗೆ, ಅವರು ತಮ್ಮ ಭಾವಿ ಪತಿರ ವಿಘ್ನೇಶ್ ಶಿವನ್ ಅವರೊಂದಿಗೆ ರೌಡಿ ಪಿಕ್ಚರ್ಸ್ (ಪ್ರೊಡಕ್ಷನ್ ಹೌಸ್) ಅನ್ನು ಪ್ರಾರಂಭಿಸಿದರು. ಇದಕ್ಕೂ ಮೊದಲು ನಯನತಾರಾ ಆಹಾರ ಮತ್ತು ಪಾನೀಯ ಕಂಪನಿಯಾದ ಚಾಯ್ ವಾಲೆ ಮತ್ತು ಚೆನ್ನೈ ಮೂಲದ ಕಾಸ್ಮೆಟಿಕ್ ಕಂಪನಿಯಾದ ದಿ ಲಿಪ್ ಬಾಮ್‌ನಲ್ಲಿಯೂ ಹೂಡಿಕೆ ಮಾಡಿದ್ದಾರೆ.
ನಯನತಾರಾ ಅವರ ಕೆಲಸದ ಬಗ್ಗೆ ಹೇಳುವುದಾದರೆ, ಅವರು ಸಮಂತಾ ರುತ್ ಪ್ರಭು ಮತ್ತು ವಿಜಯ್ ಸೇತುಪತಿ ಜೊತೆಗೆ ಕಾತು ವಾಕುಲಾ ಎರಡು ಕಾದಲ್‌ನಲ್ಲಿ, ಗಾಡ್‌ಫಾದರ್, ಕನೆಕ್ಟ್ ಮತ್ತು ಶಾರುಖ್ ಖಾನ್‌ನೊಂದಿಗೆ ಅಟ್ಲೀ ಅವರ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ನಯನತಾರಾ ಅವರು ಕಳೆದ ವರ್ಷ ಅವರ ಹುಟ್ಟುಹಬ್ಬದಂದು ರೌಡಿ ಪಿಕ್ಚರ್ಸ್‌ನ ಚಲನಚಿತ್ರ ನಿರ್ಮಾಣ ಸಂಸ್ಥೆಯನ್ನು ಘೋಷಿಸಿದರು. ಪ್ರತಿ ಚಿತ್ರಕ್ಕೆ 2.5 ರಿಂದ 3 ಕೋಟಿ ರೂ ಪಡೆಯುವ ನಯನತಾರಾ ದಕ್ಷಿಣದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ.
ಇತ್ತಿಚೇಗೆ ನಯನತಾರಾ ಚೆನ್ನೈನ ಐಷಾರಾಮಿ ಪ್ರದೇಶದಲ್ಲಿ 4BKH ಫ್ಲಾಟ್ ಅನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ. ತಮಿಳುನಾಡು ರಾಜ್ಯದ ರಾಜಧಾನಿಯ ಅತ್ಯಂತ ದುಬಾರಿ ಪ್ರದೇಶಗಳಲ್ಲಿ ಒಂದಾದ ಚೆನ್ನೋಸ್ ಗಾರ್ಡನ್' ನಲ್ಲಿ ಅವರ ಹೊಸ ಅಪಾರ್ಟ್ಮೆಂಟ್ ಇದೆ.