ಆ್ಯಕ್ಸೆಂಚರ್‌ನ 11,000 ಬಳಿಕ ಟಿಸಿಎಸ್‌ನಲ್ಲಿ 30,000 ಜನರ ವಜಾ?

Published : Oct 01, 2025, 11:37 AM IST

Global tech layoffs: ವೆಚ್ಚಕಡಿತ ಮತ್ತು ಎಐ ಅಳವಡಿಕೆಯ ಕಾರಣಗಳಿಂದ ಟಿಸಿಎಸ್, ಆ್ಯಕ್ಸೆಂಚರ್, ಗೂಗಲ್‌ನಂತಹ ಐಟಿ ದೈತ್ಯ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುತ್ತಿವೆ. 

PREV
14
ಉದ್ಯೋಗಿಗಳ ವಜಾ

ವೆಚ್ಚಕಡಿತ, ಎಐ ಅಳವಡಿಕೆ ಕಾರಣದಿಂದ ಹಲವು ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಹೊತ್ತಿನಲ್ಲೇ, ಭಾರತದ ಅತಿದೊಡ್ಡ ಐಟಿ ಕಂಪನಿಯಾಗಿರುವ ಟಿಸಿಎಸ್‌ 30000 ಉದ್ಯೋಗಿಗಳನ್ನು ತೆಗೆದುಹಾಕಲಿದೆ ಎಂಬ ಸುದ್ದಿ ಭಾರೀ ತಲ್ಲಣ ಸೃಷ್ಟಿಸಿದೆ.

24
30000 ಉದ್ಯೋಗಿಗಳು

ಟಿಸಿಎಸ್‌ನ ಮುಖ್ಯಸ್ಥ ಕೆ. ಕೀರ್ತಿವಾಸನ್‌ ಇತ್ತೀಚೆಗೆ ಶೇ.2ರಷ್ಟು, ಅಂದರೆ 12000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಹೇಳಿದ್ದರು. ಅತ್ತ ಹಲವರಿಗೆ ರಾಜೀನಾಮೆ ನೀಡುವಂತೆ ಸೂಚಿಸಲಾಗಿರುವುದರಿಂದ ಒಟ್ಟು 30000 ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:  ಸ್ವಿಗ್ಗಿಯಲ್ಲಿ ಬೆಳ್ಳಿ ನಾಣ್ಯ ಆರ್ಡರ್ ಮಾಡಿದವನಿಗೆ ಬಂತು ಮ್ಯಾಗಿ: ಸ್ವಿಗ್ಗಿ ಹೇಳಿದ್ದೇನು?

34
ಆ್ಯಕ್ಸೆಂಚರ್‌

ಕಂಪನಿ ಈ ಸುದ್ದಿಯನ್ನು ತಳ್ಳಿಹಾಕಿರುವುದರಿಂದ ಗೊಂದಲ ಮುಂದುವರೆದಿದೆ. ಐಟಿ ಕಂಪನಿಯಾಗಿರುವ ಆ್ಯಕ್ಸೆಂಚರ್‌ ಇತ್ತೀಚೆಗಷ್ಟೇ 11000 ಉದ್ಯೋಗಿಗಳನ್ನು ವಜಾಗೊಳಿಸಿತ್ತು.

ಇದನ್ನೂ ಓದಿ: ಅ.1 ರಿಂದ ಹೊಸ ನಿಯಮ: ಇಂದಿನಿಂದ ರೈಲ್ವೆ, ಅಂಚೆ, ಬ್ಯಾಂಕಲ್ಲಿ ಹಲವು ಬದಲಾವಣೆ

44
ಇತರೆ ಕಂಪನಿಗಳ ಲೇಆಫ್

ಇಂಟೆಲ್‌ ಕಂಪನಿಯು 25,000, ಪ್ಯಾನಸಾನಿಕ್‌ 10,000, ಮೈಕ್ರೋಸಾಫ್ಟ್‌ 6500, ಮೆಟಾ 3600, ಅಮೆಜಾನ್‌ 14000, ಐಬಿಎಂ 8000, ಗೂಗಲ್‌ 500 ಸಿಬ್ಬಂದಿಯನ್ನು ಕಡಿತಗೊಳಿಸುವ ಘೋಷಣೆ ಮಾಡಿವೆ. ಎಚ್‌ಪಿ 6000, ನಿಸ್ಸಾನ್‌ 20000, ಸ್ಟಾರ್‌ಬಕ್ಸ್‌ 1100 ಹುದ್ದೆ ಕಡಿತ ಮಾಡುವುದಾಗಿ ಘೋಷಿಸಿವೆ.

Read more Photos on
click me!

Recommended Stories