Home investment strategy in india: ದೇಶದಲ್ಲಿ ಸ್ವಂತ ಮನೆ ಅನ್ನೋದು ಬಹುತೇಕರ ಜೀವನದ ಕನಸು. ಅದರಲ್ಲೂ ಒಂದು ಕೋಟಿ ರೂಪಾಯಿ ಬಜೆಟ್ ಇದ್ದರೆ, ಸ್ವಂತ ಮನೆ ಕಟ್ಟಬೇಕಾ ಅಥವಾ ಅಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್ ಖರೀದಿಸಬೇಕಾ ಅನ್ನೋ ಗೊಂದಲ ಅನೇಕರಲ್ಲಿ ಮೂಡುತ್ತದೆ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ಒಂದು ಕೋಟಿ ರೂಪಾಯಿ ಹಾಕಿ ಸ್ವಂತ ಮನೆ ಕಟ್ಟಿದರೆ, ನಿಮ್ಮ ಸಂಪತ್ತಿನ ಬಹುದೊಡ್ಡ ಪಾಲು ಒಂದೇ ಆಸ್ತಿಯಲ್ಲಿ ಲಾಕ್ ಆಗುತ್ತೆ. ಅದರ ಬದಲು 50 ಲಕ್ಷಕ್ಕೆ ಒಂದು ಫ್ಲಾಟ್ ಖರೀದಿಸಿದರೆ, ಸ್ವಂತ ಸೂರು ಸಿಗುತ್ತೆ. ಉಳಿದ 50 ಲಕ್ಷ ರೂಪಾಯಿ ಬೇರೆ ಹೂಡಿಕೆಗೆ ಅಥವಾ ಅಗತ್ಯಗಳಿಗೆ ಲಭ್ಯವಿರುತ್ತೆ. ಇದರಿಂದ ಸುರಕ್ಷತೆ ಮತ್ತು ಲಿಕ್ವಿಡಿಟಿ ಎರಡೂ ಸಿಗುತ್ತೆ.
25
ಹೇಗೆ ಹೂಡಿಕೆ ಮಾಡೋದು?
ಉಳಿದ 50 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಬಹುದು. ಉದಾಹರಣೆಗೆ, 20 ಲಕ್ಷ ಫಿಕ್ಸೆಡ್ ಡೆಪಾಸಿಟ್, 15 ಲಕ್ಷ ಮ್ಯೂಚುವಲ್ ಫಂಡ್, 10 ಲಕ್ಷ ಎಮರ್ಜೆನ್ಸಿ ಫಂಡ್ ಆಗಿ ಮತ್ತು 5 ಲಕ್ಷ ಆರೋಗ್ಯ, ವಿಮೆ ಹಾಗೂ ಇತರೆ ಖರ್ಚುಗಳಿಗೆ ಇಟ್ಟುಕೊಳ್ಳಬಹುದು. ಹೀಗೆ ಹಣವನ್ನು ವಿಂಗಡಿಸಿದರೆ, ಆದಾಯವೂ ಬರುತ್ತೆ, ಹಣವೂ ನಿಂತ ನೀರಾಗಲ್ಲ.
35
ಉಳಿದ ಖರ್ಚಿಗೆ ಏನು ಮಾಡೋದು?
ಉಳಿದ 50 ಲಕ್ಷ ರೂಪಾಯಿಯನ್ನು ಸುರಕ್ಷಿತ ಹೂಡಿಕೆಗಳಲ್ಲಿ ಇಟ್ಟರೆ, ಪ್ರತಿ ತಿಂಗಳು ಆದಾಯ ಗಳಿಸಬಹುದು. ಉದಾಹರಣೆಗೆ, ವಾರ್ಷಿಕ 7% ಬಡ್ಡಿ ಬರುವ ಕಡೆ 50 ಲಕ್ಷ ಹೂಡಿಕೆ ಮಾಡಿದರೆ, ವರ್ಷಕ್ಕೆ ಸುಮಾರು 3.5 ಲಕ್ಷ ರೂ. ಸಿಗುತ್ತೆ. ಅಂದರೆ, ತಿಂಗಳಿಗೆ ಸುಮಾರು 29 ಸಾವಿರ ರೂಪಾಯಿ ಆದಾಯ ಬರುತ್ತೆ. ಇದು ಕರೆಂಟ್ ಬಿಲ್, ನಿರ್ವಹಣೆ, ಔಷಧಿಗಳಂತಹ ಖರ್ಚುಗಳಿಗೆ ಸಾಕಾಗುತ್ತೆ.
ಸ್ವಂತ ಮನೆಗೆ ಹೋಲಿಸಿದರೆ ಅಪಾರ್ಟ್‌ಮೆಂಟ್ ಜೀವನಶೈಲಿ ತುಂಬಾ ಸುಲಭ. 24 ಗಂಟೆಗಳ ಸೆಕ್ಯುರಿಟಿ, ನೀರಿನ ಸೌಲಭ್ಯ, ಪವರ್ ಬ್ಯಾಕಪ್, ಪಾರ್ಕಿಂಗ್, ಮತ್ತು ನಿರ್ವಹಣೆಯ ಜವಾಬ್ದಾರಿಗಳು ಕಡಿಮೆ ಇರುತ್ತವೆ. ಜೊತೆಗೆ ಸಮುದಾಯ ಜೀವನದ ಅನುಭವವೂ ಸಿಗುತ್ತೆ. ಮನೆ ಕಟ್ಟುವಾಗ ಬರುವ ಹೆಚ್ಚುವರಿ ಖರ್ಚು, ಕಾಂಟ್ರಾಕ್ಟರ್‌ಗಳ ತಲೆನೋವು ಇರುವುದಿಲ್ಲ.
55
ಸ್ವಂತ ಮನೆ ಯಾಕೆ?
ನಿಮಗೆ ಜಮೀನು ಬೇಕು, ಭವಿಷ್ಯದಲ್ಲಿ ಇನ್ನಷ್ಟು ಮಹಡಿ ಕಟ್ಟಬೇಕು, ಕುಟುಂಬಕ್ಕೆ ಶಾಶ್ವತ ಆಸ್ತಿ ಮಾಡಬೇಕು ಅಂದುಕೊಂಡರೆ ಸ್ವಂತ ಮನೆ ಒಳ್ಳೆಯ ಆಯ್ಕೆ. ಆದರೆ, ಕಡಿಮೆ ತಲೆನೋವು, ಕೈಯಲ್ಲಿ ಸ್ವಲ್ಪ ಹಣ, ತಿಂಗಳ ಖರ್ಚಿಗೆ ಆದಾಯ ಬೇಕು ಎನ್ನುವವರು 45-50 ಲಕ್ಷ ರೂಪಾಯಿ ಮೌಲ್ಯದ ಫ್ಲಾಟ್ ಖರೀದಿಸಿ ಉಳಿದ ಹಣವನ್ನು ಹೂಡಿಕೆ ಮಾಡುವುದು ಉತ್ತಮ. ಹೈದರಾಬಾದ್‌ನಂತಹ ನಗರಗಳಲ್ಲಿ ಈ ಬಜೆಟ್‌ನಲ್ಲಿ ಉತ್ತಮ ಫ್ಲಾಟ್ ಸಿಗುತ್ತದೆ. ಇದರಿಂದ ಸ್ವಂತ ಮನೆ, ಆರ್ಥಿಕ ಭದ್ರತೆ, ಮಾಸಿಕ ಆದಾಯ ಮೂರೂ ಸಿಕ್ಕಂತಾಗುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.