SIP Investment: ತಿಂಗಳಿಗೆ ಕೇವಲ 2,000 ರೂಪಾಯಿ SIP ಮೂಲಕ ನೀವೂ ಲಕ್ಷಾಧಿಪತಿಯಾಗಬಹುದು. ಮಾರುಕಟ್ಟೆಯ ಏರಿಳಿತಗಳ ನಡುವೆಯೂ ನಿಮ್ಮ ಹಣ ಇಲ್ಲಿ ಸುರಕ್ಷಿತವಾಗಿ ಬೆಳೆಯುತ್ತದೆ. ಇದರ ಸಂಪೂರ್ಣ ಲೆಕ್ಕಾಚಾರದ ವಿವರ ಇಲ್ಲಿದೆ.
ಎರಡು ಸಾವಿರ ರುಪಾಯಿ ಎಷ್ಟು ವರ್ಷ ಹೂಡಿಕೆ ಮಾಡಿದರೆ ಲಕ್ಷ ಗಳಿಸಬಹುದು?
ಸಾಮಾನ್ಯವಾಗಿ, ಅನೇಕರು ಹಣ ಉಳಿಸಲು ಸಣ್ಣ ಮೊತ್ತದ SIP ಕಡೆಗೆ ಗಮನ ಹರಿಸುತ್ತಾರೆ. ಇದು ಶಿಸ್ತುಬದ್ಧ ಉಳಿತಾಯದ ಅಭ್ಯಾಸವನ್ನು ಬೆಳೆಸುತ್ತದೆ. ಸ್ಟಾಕ್ ಮಾರ್ಕೆಟ್‌ಗೆ ಹೋಲಿಸಿದರೆ SIPಗಳಲ್ಲಿ ರಿಸ್ಕ್ ತುಂಬಾ ಕಡಿಮೆ. ಮಾರುಕಟ್ಟೆಯ ಏರಿಳಿತಗಳ ನಡುವೆಯೂ ನಮ್ಮ ಹಣ ಇಲ್ಲಿ ಸುರಕ್ಷಿತವಾಗಿ ಬೆಳೆಯುತ್ತದೆ. ಆದರೆ, ತಿಂಗಳಿಗೆ ಕೇವಲ ₹2,000 SIP ಮಾಡಿದರೆ, ಎಷ್ಟು ವರ್ಷಗಳಲ್ಲಿ ಲಕ್ಷಾಧಿಪತಿಯಾಗಬಹುದು ಎಂಬ ಪ್ರಶ್ನೆ ಹಲವರಲ್ಲಿದೆ. ಆರ್ಥಿಕ ತಜ್ಞರು ಏನಂತಾರೆ ನೋಡೋಣ ಬನ್ನಿ
26
SIP ಲೆಕ್ಕಾಚಾರ
ನೀವು ತಿಂಗಳಿಗೆ ₹2,000 ದೊಂದಿಗೆ ನಿಮ್ಮ SIP ಪಯಣವನ್ನು ಆರಂಭಿಸಿದ್ದೀರಿ ಎಂದುಕೊಳ್ಳಿ. ಮ್ಯೂಚುವಲ್ ಫಂಡ್‌ಗಳಲ್ಲಿ ಸರಾಸರಿ 12% ರಿಟರ್ನ್ಸ್ ಬರುವ ಸಾಧ್ಯತೆ ಇದೆ. SIP ಕ್ಯಾಲ್ಕುಲೇಟರ್ ಪ್ರಕಾರ, ನೀವು 4 ವರ್ಷಗಳ ಕಾಲ ಪ್ರತಿ ತಿಂಗಳು ₹2,000 ಹೂಡಿಕೆ ಮಾಡಿದರೆ, ನಾಲ್ಕನೇ ವರ್ಷದ ಕೊನೆಯಲ್ಲಿ ನಿಮ್ಮ ಕೈಗೆ ₹1,23,670 ಸಿಗುತ್ತದೆ. ಅಂದರೆ, ಕೇವಲ 4 ವರ್ಷಗಳಲ್ಲಿ ನೀವು ಒಂದು ಲಕ್ಷ ರೂಪಾಯಿಗಿಂತ ಹೆಚ್ಚು ಹಣ ಗಳಿಸಬಹುದು.
36
₹2000 ನಾಲ್ಕು ವರ್ಷ ನಿರಂತರ SIP ಮಾಡಿದರೆ?
ಈ 4 ವರ್ಷಗಳ ಹೂಡಿಕೆ ಯೋಜನೆಯ ಸಂಪೂರ್ಣ ಅಂಕಿಅಂಶಗಳನ್ನು ನೋಡೋಣ. ನೀವು ಪ್ರತಿ ತಿಂಗಳು ₹2,000 ಹೂಡಿಕೆ ಮಾಡಿದರೆ, 4 ವರ್ಷಗಳಲ್ಲಿ ನಿಮ್ಮ ಒಟ್ಟು ಹೂಡಿಕೆ ₹96,000 ಆಗುತ್ತದೆ. ಇದರ ಮೇಲೆ 12% ಅಂದಾಜು ರಿಟರ್ನ್ ದರದಂತೆ ನಿಮಗೆ ಸಿಗುವ ಲಾಭ ₹27,670. ಅಂದರೆ, ನಿಮ್ಮ ಹೂಡಿಕೆಯ ಅವಧಿ ಮುಗಿಯುವ ಹೊತ್ತಿಗೆ ನಿಮಗೆ ಸಿಗುವ ಒಟ್ಟು ಮೊತ್ತ ₹1,23,670. ಈ ಲೆಕ್ಕಾಚಾರದ ಪ್ರಕಾರ, ಕೇವಲ 4 ವರ್ಷಗಳ ಅಲ್ಪಾವಧಿಯಲ್ಲಿ ನೀವು ಸುಲಭವಾಗಿ ಲಕ್ಷಾಧಿಪತಿಯಾಗಬಹುದು.
ನೀವು ಕೂಡ SIP ಹೂಡಿಕೆ ಆರಂಭಿಸಲು ಬಯಸಿದರೆ, ಯಾವುದೇ ಸೆಬಿ (SEBI) ನೋಂದಾಯಿತ ಬ್ರೋಕಿಂಗ್ ಆ್ಯಪ್ ಅಥವಾ ಪ್ಲಾಟ್‌ಫಾರ್ಮ್ ಬಳಸಬಹುದು. ನೀವು ಆಯ್ಕೆ ಮಾಡಿದ ಪ್ಲಾಟ್‌ಫಾರ್ಮ್‌ನಲ್ಲಿ ಡಿಮ್ಯಾಟ್ ಖಾತೆಯನ್ನು ತೆರೆಯಬೇಕು. ಈ ಸಂಪೂರ್ಣ ಪ್ರಕ್ರಿಯೆ ಪೇಪರ್‌ಲೆಸ್ ಮತ್ತು ಡಿಜಿಟಲ್ ಆಗಿ ನಡೆಯುತ್ತದೆ. ಖಾತೆ ತೆರೆದ ನಂತರ, ನಿಮ್ಮ ಬಜೆಟ್‌ಗೆ ತಕ್ಕಂತೆ ಉತ್ತಮ ಮ್ಯೂಚುವಲ್ ಫಂಡ್ ಆಯ್ಕೆ ಮಾಡಿಕೊಂಡು, ತಿಂಗಳಿಗೆ ಕನಿಷ್ಠ ₹500 ರಿಂದಲೂ SIP ಆರಂಭಿಸಬಹುದು.
56
ಬೇಕಾದ ದಾಖಲೆಗಳು:
• ಪ್ಯಾನ್ ಕಾರ್ಡ್
• ಗುರುತಿನ ಚೀಟಿ (ID ಪ್ರೂಫ್)
• ವಿಳಾಸದ ಪುರಾವೆ (Address ಪ್ರೂಫ್)
• ಬ್ಯಾಂಕ್ ಖಾತೆ
• ಮೊಬೈಲ್ ಸಂಖ್ಯೆ, ಇಮೇಲ್ ಐಡಿ
66
ಮಾಸಿಕ SIP ಮೊತ್ತವನ್ನು ಹೆಚ್ಚಿಸಬಹುದು
ಅನೇಕರು ತಮ್ಮ ವೃತ್ತಿಜೀವನದ ಆರಂಭದಲ್ಲಿ ₹500 ಅಥವಾ ₹1,000 ದೊಂದಿಗೆ SIP ಹೂಡಿಕೆ ಆರಂಭಿಸುತ್ತಾರೆ. ಭವಿಷ್ಯದಲ್ಲಿ ಸಂಬಳ ಹೆಚ್ಚಾದಾಗ ಅಥವಾ ಆರ್ಥಿಕ ಸ್ಥಿತಿ ಸುಧಾರಿಸಿದಾಗ ಈ SIP ಮೊತ್ತವನ್ನು ಹೆಚ್ಚಿಸಬಹುದೇ ಎಂಬ ಅನುಮಾನ ಹಲವರಲ್ಲಿದೆ. ಇದಕ್ಕೆ ಉತ್ತರ, ಹೌದು, ಖಂಡಿತವಾಗಿಯೂ ಹೆಚ್ಚಿಸಬಹುದು. ನಿಮ್ಮ ಅಗತ್ಯಕ್ಕೆ ತಕ್ಕಂತೆ, ಯಾವಾಗ ಬೇಕಾದರೂ ನಿಮ್ಮ ಮಾಸಿಕ SIP ಮೊತ್ತವನ್ನು ಹೆಚ್ಚಿಸುವ ಅವಕಾಶವಿರುತ್ತದೆ. ಆದರೆ, ಪ್ರತಿ ತಿಂಗಳು ಸರಿಯಾದ ಸಮಯಕ್ಕೆ SIP ಕಂತು ಕಡಿತವಾಗುವಂತೆ ನೋಡಿಕೊಳ್ಳಬೇಕು, ಇಲ್ಲದಿದ್ದರೆ ದಂಡ ಬೀಳುವ ಸಾಧ್ಯತೆ ಇದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.