ಅಂಬಾನಿ ಕುಟುಂಬದ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳೋ ಬ್ಯೂಟಿ ಕ್ವೀನ್ ದಿಯಾ ಮೆಹ್ತಾ, ಯಾರು ಈ ಲೇಡಿ ಓರಿ?

First Published | Jan 11, 2024, 11:06 AM IST

ಅಂಬಾನಿ ಕುಟುಂಬದ ಎಲ್ಲಾ ಕಾರ್ಯಕ್ರಮಗಳಲ್ಲಿ, ಪಾರ್ಟಿಗಳಲ್ಲಿ ಈ ಸುಂದರಿ ಕಾಣಿಸಿಕೊಳ್ಳುತ್ತಾರೆ. ಯಾವ ಸೆಲೆಬ್ರಿಟಿಗೂ ಕಮ್ಮಿಯಿಲ್ಲ ಅನ್ನೋವಂತಿರೋ ಈ ಬೆಡಗಿ ಲೇಡಿ ಓರಿ ಅಂತಾನೇ ಎಲ್ರೂ ಅಂದ್ಕೊಂಡಿದ್ದಾರೆ. ಆದ್ರೆ ಈ ಬ್ಯೂಟಿಕ್ವೀನ್‌ಗೂ ಅಂಬಾನಿ ಕುಟುಂಬಕ್ಕೂ ಇರೋ ನಂಟೇನು?

ಮುಕೇಶ್ ಅಂಬಾನಿ ಭಾರತದ ಬಿಲಿಯನೇರ್‌ಗಳ ಲಿಸ್ಟ್‌ನಲ್ಲಿ ಮೊದಲ ಸ್ಥಾನದಲ್ಲಿರುವವರು. ಬರೋಬ್ಬರಿ 831769 ಕೋಟಿ ರೂ.ಗಿಂತ ಹೆಚ್ಚಿನ ನಿವ್ವಳ ಮೌಲ್ಯದೊಂದಿಗೆ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯೆಂದು ಗುರುತಿಸಿಕೊಂಡಿದ್ದಾರೆ.

ಅಲ್ಟ್ರಾ ಲಕ್ಸುರಿಯಸ್ ಬಂಗಲೆ, ಐಷಾರಾಮಿ ಕಾರುಗಳು, ಪಾರ್ಟಿ, ಹೈಫೈ ಲೈಫ್‌ಸ್ಟೈಲ್‌ನಿಂದಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ. ದೇಶದ ಹಲವು ರಾಜಕಾರಣಿಗಳು, ದೊಡ್ಡ ಕೈಗಾರಿಕೋದ್ಯಮಿಗಳು, ಸೆಲೆಬ್ರಿಟಿಗಳು ಅಂಬಾನಿ ಫ್ಯಾಮಿಲಿ ಜೊತೆ ನಂಟನ್ನು ಹೊಂದಿದ್ದಾರೆ.

Tap to resize

ಮುಕೇಶ್ ಅಂಬಾನಿ ಅವರೊಂದಿಗೆ ನಿಕಟ ಬಾಂಧವ್ಯ ಹೊಂದಿರುವ ಅಂಥಾ ಒಂದು ಕುಟುಂಬವೆಂದರೆ ರಸೆಲ್ ಮೆಹ್ತಾ ಕುಟುಂಬ. ಮುಕೇಶ್ ಅಂಬಾನಿ ಅವರ ಹಿರಿಯ ಮಗ ಆಕಾಶ್ ಅಂಬಾನಿ ರಸೆಲ್ ಮೆಹ್ತಾ ಮಗಳನ್ನು ಮದುವೆಯಾಗಿದ್ದಾರೆ. 

ಆಕಾಶ್‌ ಅಂಬಾನಿ, ರಸೆಲ್ ಮೆಹ್ತಾ ಮಗಳು ಶ್ಲೋಕಾ ಮೆಹ್ತಾರನ್ನು ಮದುವೆಯಾಗಿದ್ದರು. ಆದರೆ ಇದಲ್ಲದೆಯೂ ಈ ಕುಟುಂಬ ಮೊದಲೇ ಆಪ್ತವಾಗಿತ್ತು. ಶ್ಲೋಕಾ ಮೆಹ್ತಾ ಅವರ ಸಹೋದರಿ ದಿಯಾ ಮೆಹಾ. ಇಶಾ ಅಂಬಾನಿಯ ಬಾಲ್ಯದ ಗೆಳತಿ. ಇಬ್ಬರೂ ತಮ್ಮ ಬಾಲ್ಯವನ್ನು ಒಟ್ಟಿಗೆ ಕಳೆದಿದ್ದಾರೆ.

ದಿಯಾ ಮೆಹ್ತಾ, ಏಪ್ರಿಲ್ 2017ರಲ್ಲಿ ಆಯುಷ್ ಜಟಿಯಾರನ್ನು ವಿವಾಹವಾಗಿದ್ದಾರೆ. ಆಯುಷ್ ಜಟಿಯಾ ಅವರು ಹಾರ್ಡ್‌ಕ್ಯಾಸಲ್ ರೆಸ್ಟೋರೆಂಟ್‌ಗಳ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ, ಇದು ಭಾರತದ ಪಶ್ಚಿಮ ಮತ್ತು ದಕ್ಷಿಣಕ್ಕೆ ಮೆಕ್‌ಡೊನಾಲ್ಡ್ಸ್ ಫ್ರ್ಯಾಂಚೈಸ್ ಅನ್ನು ಹೊಂದಿರುವ ಕಂಪನಿಯಾಗಿದೆ. ದಿಯಾ ಒಂದು ಹೆಣ್ಣು ಮತ್ತು ಗಂಡು ಮಗುವಿಗೆ ತಾಯಿ.  

ದಿಯಾ ಮೆಹ್ತಾ ವರ್ಷಗಳಲ್ಲಿ ಸ್ಟೈಲ್ ಐಕಾನ್ ಆಗಿ ಹೊರಹೊಮ್ಮಿದ್ದಾರೆ. ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಿಂದ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ದಿಯಾ ಮೆಹ್ತಾ ಲಂಡನ್‌ನಲ್ಲಿ ಫ್ಯಾಷನ್ ಕೋರ್ಸ್ ಪೂರ್ಣಗೊಳಿಸಿದರು. ಪ್ರಸ್ತುತ Instagram ನಲ್ಲಿ 140000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.

ದಿಯಾ ಮೆಹ್ತಾ ಫ್ಯಾಶನ್ ಕನ್ಸಲ್ಟೆಂಟ್ ಆಗಿ ಜನಪ್ರಿಯವಾಗಿದ್ದರೂ, ಕುಟುಂಬದ ವ್ಯವಹಾರವನ್ನೂ ನೋಡಿಕೊಳ್ಳುತ್ತಾರೆ. ದಿಯಾ ಮೆಹ್ತಾ ಅವರ ತಂದೆ ರಸೆಲ್ ಮೆಹ್ತಾ ಅವರು ಡೈಮಂಡ್ ತಯಾರಕ ರೋಸಿ ಬ್ಲೂನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಇವರ ಒಟ್ಟು ಆಸ್ತಿ ಮೌಲ್ಯ ಸುಮಾರು 1800 ಕೋಟಿ ರೂ.

Latest Videos

click me!