ರತನ್ ಟಾಟಾ ಜಗತ್ತಿನಾದ್ಯಂತ ಅತ್ಯಂತ ಪ್ರಸಿದ್ಧ ಭಾರತೀಯ ಬಿಲಿಯನೇರ್‌ಗಳಲ್ಲಿ ಒಬ್ಬರು. ಟಾಟಾ ಗ್ರೂಪ್‌ನ ಅಧ್ಯಕ್ಷರು. ತಮ್ಮ ಸಮಾಜ ಸೇವೆಗಳಿಂದಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ. ಹಲವು ಬ್ರಿಲಿಯೆಂಟ್ ವ್ಯಕ್ತಿಗಳು ರತನ್ ಟಾಟಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾರೆ. ಹೀಗೆ ರತನ್ ಟಾಟಾ ನಂಬಿಕಸ್ಥ, ಆಪ್ತ ವಲಯಗಳಲ್ಲಿ ಗುರುತಿಸಿಕೊಂಡಿರುವವರಲ್ಲಿ ಒಬ್ಬರು ಶಂತನು ನಾಯ್ಡು.
ಶಂತನು ನಾಯ್ಡು, ಬಿಲಿಯನೇರ್ ರತನ್ ಟಾಟಾ ಅವರ ಹತ್ತಿರದ ಸಹಾಯಕರಲ್ಲಿ ಒಬ್ಬರು. ಶಂತನು ನಾಯ್ಡು ರತನ್ ಟಾಟಾ ಅವರ ಜನ್ಮದಿನವನ್ನು ಆಚರಿಸುವ ವೀಡಿಯೊ ವೈರಲ್ ಆದ ನಂತರ ಹೆಚ್ಚು ಸುದ್ದಿಯಾದರು.
ರತನ್ ಟಾಟಾ ಮದುವೆಯಾಗಿಲ್ಲ ಮತ್ತು ಮಕ್ಕಳಿಲ್ಲದ ಕಾರಣ ಶಂತನುನನ್ನು ತಮ್ಮ ಮಗನಂತೆ ನೋಡಿಕೊಂಡಿದ್ದಾರೆ. ಶಂತನು ನಾಯ್ಡು ಅವರಿಗೆ 29 ವರ್ಷ. ಮೇ 2022ರಲ್ಲಿ ರತನ್ ಟಾಟಾ ಜೊತೆ ಕೆಲಸ ಮಾಡಲು ಪ್ರಾರಂಭಿಸಿದರು.
ಶಂತನು ನಾಯ್ಡು, ಪುಣೆಯಲ್ಲಿ ಹುಟ್ಟಿ ಬೆಳೆದರು. 2014 ರಲ್ಲಿ ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾನಿಲಯದಿಂದ ತಮ್ಮ ಎಂಜಿನಿಯರಿಂಗ್ ಪದವಿಯನ್ನು ಪಡೆದರು.
ಪದವಿಯ ನಂತರ, ನಾಯ್ಡು ಅವರು 2016 ರಲ್ಲಿ ಕಾರ್ನೆಲ್ ಜಾನ್ಸನ್ ಗ್ರಾಜುಯೇಟ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.
ಪದವಿಯ ಬಳಿಕ ಪುಣೆಯ ಟಾಟಾ ಎಲ್ಕ್ಸಿಯಲ್ಲಿ ಆಟೋಮೊಬೈಲ್ ಡಿಸೈನ್ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿದರು. ಶಂತನು ನಾಯ್ಡು ಅವರು ವೇಗವಾಗಿ ಬರುವ ವಾಹನಗಳಿಗೆ ಸಿಲುಕಿ ನಾಯಿಗಳು ಸಾಯುವುದಕ್ಕೆ ಪರಿಹಾರ ಕಂಡುಕೊಳ್ಳಲು ಬಯಸಿದ್ದರು. ಈ ಸಮಸ್ಯೆಯನ್ನು ಪರಿಹರಿಸಲು, ನಾಯಿಗಳಿಗೆ ರಾತ್ರಿಯಲ್ಲಿ ಗೋಚರಿಸುವ ಕಾಲರ್‌ಗಳನ್ನು ಮಾಡುವ ಆಲೋಚನೆಯನ್ನು ಆರಂಭಿಸಿದರು.
ಈ ಆಲೋಚನೆಗೆ ಬೆಂಬಲವನ್ನು ಪಡೆಯಲು, ನಾಯ್ಡು, ರತನ್ ಟಾಟಾ ಅವರಿಗೆ ತಮ್ಮ ವ್ಯಾಪಾರ ಉದ್ಯಮದ ವಿವರಗಳೊಂದಿಗೆ ಪತ್ರ ಬರೆದರು. ಆಶ್ಚರ್ಯಕರವಾಗಿ, ರತನ್ ಟಾಟಾ ಅವರನ್ನು ಭೇಟಿಯಾಗಲು ಮತ್ತು ಯೋಜನೆಯ ಬಗ್ಗೆ ಚರ್ಚಿಸಲು ಆಹ್ವಾನಿಸಿದರು. ಇಬ್ಬರು ಶ್ವಾನ ಪ್ರೇಮಿಗಳ ಭೇಟಿಯು ಅವರ ಸ್ನೇಹಕ್ಕೆ ಕಾರಣವಾಯಿತು
ಇದು ರತನ್ ಟಾಟಾ ಅವರ ಸಹಾಯಕರಾಗಿ ಕೆಲಸ ಮಾಡಲು ನಾಯ್ಡುಗೆ ಸಹಾಯ ಮಾಡಿತು. ಅವರು ಜನರಲ್ ಮ್ಯಾನೇಜರ್ ಆಗಿ ಕೆಲಸವನ್ನೂ ಪಡೆದರು ಮತ್ತು ಬಿಲಿಯನೇರ್ ನಾಯ್ಡು ಅವರ ಹೊಸ ಸ್ಟಾರ್ಟ್ಅಪ್ ಗುಡ್‌ಫೆಲೋಸ್‌ನಲ್ಲಿ ಹೂಡಿಕೆ ಮಾಡಿದರು. ಅದು ಹಿರಿಯ ನಾಗರಿಕರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಈ ಸ್ಟಾರ್ಟಪ್ ಸುಮಾರು 5 ಕೋಟಿ ರೂ ಮೌಲ್ಯವನ್ನು ಹೊಂದಿದೆ.