ಅಂಬಾನಿ ಮನೆಯಲ್ಲಿ ರೊಟ್ಟಿ ಮಾಡಿದ್ರೆ ಸಿಗತ್ತೆ 24 ಲಕ್ಷ ರೂ. ಸಂಬಳ: ಇದೊಂದು ಕ್ವಾಲಿಫಿಕೇಷನ್​ ಇದ್ರೆ ಸಾಕು ನೋಡಿ

Published : Apr 12, 2026, 06:57 PM IST

ಮುಖೇಶ್ ಅಂಬಾನಿ ಮನೆಯಲ್ಲಿ ರೊಟ್ಟಿ ಮಾಡುವ ಬಾಣಸಿಗನಿಗೆ ತಿಂಗಳಿಗೆ 2 ಲಕ್ಷ ರೂಪಾಯಿ ಸಂಬಳವಿದೆ. 600ಕ್ಕೂ ಹೆಚ್ಚು ಸಿಬ್ಬಂದಿ ಮತ್ತು ಅತಿಥಿಗಳಿಗಾಗಿ ದಿನಕ್ಕೆ ಸುಮಾರು 4,000 ರೊಟ್ಟಿಗಳನ್ನು ತಯಾರಿಸುವುದೇ ಈ ಭಾರೀ ಸಂಬಳಕ್ಕೆ ಕಾರಣವಾಗಿದೆ.

PREV
16
ಕಟ್ಟುನಿಟ್ಟಾದ ಆಹಾರ

ಮುಖೇಶ್ ಅಂಬಾನಿ (Mukesh Ambani) ಮತ್ತು ನೀತಾ ಅಂಬಾನಿ (Nita Ambani) ಅವರು ಐಷಾರಾಮಿ ಜೀವನಶೈಲಿಗೆ ಹೆಸರುವಾಸಿ. ಸಸ್ಯಾಹಾರಿಗಳಾಗಿರುವ ಅಂಬಾನಿಯವರು ಸದಾ ಮನೆಯಲ್ಲಿಯೇ ಊಟ ಮಾಡುತ್ತಾರೆ. ಡಯೆಟ್​ ಫುಡ್​ ಸೇವನೆ ಮಾಡುತ್ತಾರೆ. ಆಹಾರದ ವಿಷಯದಲ್ಲಿ ಅಂಬಾನಿ ಕುಟುಂಬ ಸಕತ್​ ಚ್ಯೂಸಿ. ಕಟ್ಟುನಿಟ್ಟಾದ ಆಹಾರಕ್ರಮವನ್ನು ಅನುಸರಿಸುತ್ತಾರೆ. ಮುಕೇಶ್​ ಅಂಬಾನಿ ಅವರು ಹಿಂದೊಮ್ಮೆ ತಮಗೆ ದಾಲ್, ರೊಟ್ಟಿ ಮತ್ತು ಅನ್ನ ಇಷ್ಟ ಎಂದಿದ್ದರು. ಥಾಯ್ ಪಾಕಪದ್ಧತಿಯನ್ನು ಸಹ ಇಷ್ಟ ಎಂದಿದ್ದರು. ಆದರೆ ಅವರು ಪ್ರತಿ ಭಾನುವಾರ ಮಾತ್ರ ಇಡ್ಲಿ-ಸಾಂಬಾರ್ ತಿನ್ನುತ್ತಾರಂತೆ.

26
ಇದು ರೊಟ್ಟಿ ವಿಷ್ಯ

ಅವರ ಮಾತು ಬಿಡಿ. ಇದೀಗ ಇಂಟರೆಸ್ಟಿಂಗ್​ ವಿಷ್ಯ ಕೇಳಿ. ಇದು ಅಂಬಾನಿ ಮನೆಯಲ್ಲಿ ರೊಟ್ಟಿ ಮಾಡುವವರ ಸ್ಟೋರಿ. ಇಲ್ಲಿ ರೊಟ್ಟಿ ಮಾಡುವವರಿಗೆ ಎರಡು ಲಕ್ಷ ರೂಪಾಯಿ ಸಂಬಳವಿದೆ. ಇಷ್ಟು ಹೇಳುತ್ತಿದ್ದಂತೆಯೇ ಬರೀ ರೀಲ್​ ಬಿಡಬೇಡಿ, ಇವೆಲ್ಲಾ ಸುಳ್ಳು, ವಾಟ್ಸ್​ಆ್ಯಪ್​ ಯೂನಿವರ್ಸಿಟಿ ಎಂದೆಲ್ಲಾ ಮಾತನಾಡುವುದು ಇದೆ. ಆದ್ರೆ, ಎರಡು ಲಕ್ಷ ರೂಪಾಯಿ ಸಂಬಳ ಇರೋದು ನಿಜ. ಇದು ಕಳೆದ ವರ್ಷದ ಸ್ಯಾಲರಿ. ಈ ವರ್ಷ ಇನ್ನೂ ಹೆಚ್ಚಾಗಿರಲಿಕ್ಕೆ ಸಾಕು. ಅಷ್ಟಕ್ಕೂ ಯಾಕೆ ಇಷ್ಟೊಂದು ಸಂಬಳ ಕೊಡ್ತಾರೆ ಎನ್ನೋದನ್ನು ಮೊದಲು ನೋಡಿ.

36
ಹೋಟೆಲ್ ಮ್ಯಾನೇಜ್‌ಮೆಂಟ್ ಬೇಕು

ಹೋಟೆಲ್ ಮ್ಯಾನೇಜ್‌ಮೆಂಟ್ ಪೂರ್ಣಗೊಳಿಸಿದವರಿಗಷ್ಟೇ ಇಲ್ಲಿ ಕೆಲಸ ಮಾಡುವ ಅವಕಾಶ ಇದ್ದು, ಮಾಧ್ಯಮ ವರದಿಗಳ ಪ್ರಕಾರ, ರೊಟ್ಟಿ ತಯಾರಕರಿಗೆ ಕೂಡಾ ತಿಂಗಳಿಗೆ 2 ಲಕ್ಷ ರೂಪಾಯಿ ವೇತನವಿದೆ. ಅಂದರೆ ವರ್ಷಕ್ಕೆ 24 ಲಕ್ಷ ರೂ. ಅಷ್ಟಕ್ಕೂ 3 ಹೆಲಿಪ್ಯಾಡ್, 168 ಕಾರುಗಳನ್ನ ಏಕಕಾಲದಲ್ಲಿ ಪಾರ್ಕ್ ಮಾಡಬಲ್ಲ ಪಾರ್ಕಿಂಗ್, ಲಕ್ಸುರಿಯ, ಥರಾವರಿ ಸೌಲಭ್ಯ ಇರುವ ಅಂಬಾನಿ ಮನೆಯಲ್ಲಿ 600ಕ್ಕೂ ಹೆಚ್ಚು ನೌಕರರು ದುಡಿಯುತ್ತಿದ್ದಾರೆ. ಇವರಿಗೆ ಅಡುಗೆ ಮಾಡಿ ಹಾಕಲು ಪ್ರತ್ಯೇಕ ಶೆಫ್ ತಂಡವೇ ಇದೆ. ಇದರ ಅರ್ಥ ಸಾಮಾನ್ಯ ಜನರು ಒಂದು ಫಂಕ್ಷನ್​ ಮಾಡಿದ್ರೆ ಎಷ್ಟು ಮಂದಿ ಬರಬಹುದೋ ಅಷ್ಟೇ ದಿನವೂ ಇಲ್ಲಿ ಅಡುಗೆ ಮಾಡಬೇಕು.

46
ನಾಲ್ಕು ಸಾವಿರ ರೋಟಿ

ಇವರೆಲ್ಲರಿಗೂ ರೋಟಿ ಮಾಡಲಾಗುತ್ತದೆ. ಏನಿಲ್ಲವೆಂದರೂ ದಿನಕ್ಕೆ ನಾಲ್ಕು ಸಾವಿರ ರೋಟಿ ಮಾಡಬೇಕು. ಅಂಬಾನಿಯವರು ತಮ್ಮ ಸಿಬ್ಬಂದಿಗೆ ಒಂದು ಮಹಡಿಯನ್ನೇ ಮೀಸಲಿಟ್ಟಿದ್ದು, 27 ಅಂತಸ್ತುಗಳಾದ ಈ ಮನೆ ಮೌಲ್ಯ ಸುಮಾರು 15 ಸಾವಿರ ಕೋಟಿ ಇದೆ. 4,000 ರೊಟ್ಟಿಗಳನ್ನು ತಯಾರಿಸಿ, ನೌಕರರಿಗೆ ಮತ್ತು ಅತಿಥಿಗಳಿಗೆ ಸಮಾನ ವಿತರಣೆ ಮಾಡಲಾಗುತ್ತದೆ. ಅದಕ್ಕಾಗಿ ರೋಟಿ ಮಾಡುವವರಿಗೆ ಈ ಪರಿಯ ಸಂಬಳವಿದೆ!

56
ಮುಖ್ಯಸ್ಥನಿಗೆ 2 ಲಕ್ಷ ಸಂಬಳ

ಹಾಗೆಂದು ಈ ರೋಟಿ ಕೇವಲ ಬೆಳಗಿನ ಉಪಾಹಾರಕ್ಕೆ ಮಾತ್ರ. ಅಲ್ಲಿರುವ 600 ಸಿಬ್ಬಂದಿ ಜೊತೆ ಬರುವ ಅತಿಥಿಗಳಿಗೂ ಇದೇ ಆಹಾರ ನೀಡಲಾಗುತ್ತದೆ. ಅಂಬಾನಿ ಕುಟುಂಬಕ್ಕೆ, ಅಂಬಾನಿ ಮನೆಯ ಸಿಬ್ಬಂದಿಗಳಿಗೆ ಅಡುಗೆ ಮಾಡಲು ಅತೀ ದೊಡ್ಡ ಕುಕಿಂಗ್ ತಂಡವಿದೆ. ರೋಟಿ ಮಾಡುವ ಷೆಫ್ ಈ ವಿಭಾಗದ ಹೆಡ್. ಇನ್ನುಳಿದ ಸಿಬ್ಬಂದಿಗಳು ಈ ಚೆಫ್ ಕೈಕೆಳಗೆ ಕೆಲಸ ಮಾಡುತ್ತಾರೆ. ಈ ಬಾಣಸಿಗನಿಗೆ 2 ಲಕ್ಷ ರೂ ಸಂಬಳ. ಈತನ ಕೆಳಗೆ ಕೆಲಸ ಮಾಡುವ ಸಿಬ್ಬಂದಿಗಳಿಗೂ ಅವರ ಜವಾಬ್ದಾರಿ ಹಾಗೂ ಅನುಭವಕ್ಕೆ ತಕ್ಕಂತೆ ವೇತನ ನೀಡಲಾಗುತ್ತಿದೆ.

66
ಮಷಿನ್​ನಲ್ಲಿ ರೋಟಿ

ಹಾಗೆಂದು ಅವರೇನೂ ನಮ್ಮ ಹಾಗೆ ಕೈಯಿಂದ ರೋಟಿ ಮಾಡಲ್ವಂತೆ. ಬದಲಿಗೆ, ಅವರ ಮನೆ ಆ್ಯಂಟಿಲಿಯಾದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ರೋಟಿ ಮಷಿನ್​ ಇದೆ. ಹಲವು ಮಷಿನ್ ಬಳಸಿ ಇಷ್ಟೊಂದು ರೋಟಿ ಮಾಡ್ತಾರೆ. ಮಷಿನ್​ ಇದ್ರೆ ನಾವೂ ಮಾಡ್ಬೋದಲ್ವಾ ಎಂದು ಹಲವರಿಗೆ ಅನ್ನಿಸಿರಲೂಬಹುದು ಎನ್ನಿ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories