ವಿಶ್ವದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿರುವುದರಿಂದ, ದೇಶಗಳು ಸುರಕ್ಷಿತ ಹೂಡಿಕೆಯಾಗಿ ಚಿನ್ನವನ್ನು ಖರೀದಿಸುತ್ತಿವೆ. ಅಚ್ಚರಿಯ ವಿಷಯವೆಂದರೆ, ಫೆಬ್ರವರಿ ತಿಂಗಳಿನಲ್ಲಿ 2 ಸಣ್ಣ ದೇಶಗಳು ಚಿನ್ನ ಖರೀದಿಯಲ್ಲಿ ಭಾರತ ಮತ್ತು ಚೀನಾವನ್ನು ಹಿಂದಿಕ್ಕಿವೆ.
ವಿಶ್ವದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದ್ದು, ದೇಶಗಳು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಇಡೀ ಜಗತ್ತು ಸುರಕ್ಷಿತ ಹೂಡಿಕೆಗಳತ್ತ ಮುಖ ಮಾಡಿಕೊಂಡಿದ್ದು, ಬೃಹತ್ ಪ್ರಮಾಣದಲ್ಲಿ ಚಿನ್ನ ಖರೀದಿಗೆ ಮುಂದಾಗಿವೆ. ಇನ್ನು ಕೆಲವು ದೇಶಗಳು ಚಿನ್ನದ ಉತ್ಪಾದನೆಯನ್ನು ಹೆಚ್ಚಳ ಮಾಡಿಕೊಂಡಿವೆ. ಈ ಹಿಂದೆ ದೊಡ್ಡ ರಾಷ್ಟ್ರಗಳು ಚಿನ್ನ ಖರೀದಿಗೆ ಮುಂದಾಗುತ್ತಿದ್ದವು. ಇದೀಗ ಎರಡು ಸಣ್ಣ ದೇಶಗಳು ಭಾರತ ಮತ್ತು ಚೀನಾದಂತಹ ದೈತ್ಯ ರಾಷ್ಟ್ರಗಳನ್ನು ಹಿಂದಿಕ್ಕೆ ತನ್ನ ಖಜಾನೆಯಲ್ಲಿ ಚಿನ್ನವನ್ನು ತುಂಬಿಸಿಕೊಳ್ಳುತ್ತಿವೆ.
26
ಎರಡು ಪುಟ್ಟ ದೇಶಗಳು
ಸಾಮಾನ್ಯವಾಗಿ ವಿಶ್ವದಲ್ಲಿ ಅಂದ್ರೆ ಜಾಗತೀಕ ಮಾರುಕಟ್ಟೆಯಲ್ಲಿ ಹಲ್ ಚಲ್ ಸೃಷ್ಟಿಯಾದ್ರೆ ದೇಶಗಳು ಸುರಕ್ಷಿತ ಹೂಡಿಕೆಗಳತ್ತ ಗಮನ ಹರಿಸುತ್ತವೆ. ಇದೀಗ ಒಂದೇ ತಿಂಗಳಲ್ಲಿ ಎರಡು ಪುಟ್ಟ ದೇಶಗಳು ಚೀನಾವನ್ನು ಚಿನ್ನ ಖರೀದಿಯಲ್ಲಿ ಹಿಂದಿಕ್ಕಿವೆ. ಹಾಗೆಯೇ ಈ ಎರಡು ದೇಶಗಳು ಚಿನ್ನ ಖರೀದಿ ಪ್ರಮಾಣ ವೇಗವನ್ನು ಹೆಚ್ಚಿಸುವ ಮೂಲಕ ಭಾರತ ಮತ್ತು ಚೀನಾ ಹಿಂದಿಕ್ಕಿ ಮುನ್ನುಗ್ಗುತ್ತಿವೆ. ಹೆಚ್ಚು ಚಿನ್ನ ಖರೀದಿ ಮಾಡುತ್ತಿರುವ ಆ ಎರಡು ದೇಶಗಳು ಯಾವವು ಎಂಬುದನ್ನು ನೋಡೋಣ ಬನ್ನಿ.
36
ಪೋಲೆಂಡ್ ಮತ್ತು ಉಜ್ಬೇಬಿಕಾಸ್ತಾನ್
ಪುಟ್ಟ ದೇಶಗಳಾದ ಪೋಲೆಂಡ್ ಮತ್ತು ಉಜ್ಬೇಬಿಕಾಸ್ತಾನ್ ಚಿನ್ನ ಖರೀದಿಯ ವೇಗವನ್ನು ಹೆಚ್ಚಿಸಿಕೊಂಡಿವೆ. ಫೆಬ್ರವರಿ ತಿಂಗಳಲ್ಲಿ ಈ ಎರಡು ದೇಶಗಳು ಖರೀದಿಸಿದ ಚಿನ್ನದ ಪ್ರಮಾಣ ಚೀನಾ ಮತ್ತು ಭಾರತಕ್ಕಿಂತ ಹೆಚ್ಚಾಗಿವೆ. ಹಾಗೆಯೇ ಕಳೆದ ಕೆಲವು ವರ್ಷಗಳಲ್ಲಿ ನಿಕ್ಷೇಪಗಳಲ್ಲಿ ಚಿನ್ನದ ಉತ್ಪಾದನೆಯನ್ನು ಸಹ ಹೆಚ್ಚಳ ಮಾಡಿಕೊಂಡಿವೆ.
ಫೆಬ್ರವರಿಯಲ್ಲಿ ಪೋಲೆಂಡ್ ಬರೋಬ್ಬರಿ 20 ಟನ್ ಚಿನ್ನ ಖರೀದಿ ಮಾಡಿದ್ದು, ಇದು ಒಂದೇ ತಿಂಗಳಲ್ಲಿ ಅತ್ಯಧಿಕ ಪ್ರಮಾಣದ ಖರೀದಿಯಾಗಿದೆ. ದೇಶದ ನಿಕ್ಷೇಪಗಳಲ್ಲಿ ಚಿನ್ನದ ಉತ್ಪಾದನೆ 570 ಟನ್‌ಗೆ ತಲುಪಿದೆ. ಒಂದೇ ವರ್ಷದಲ್ಲಿ ಪೋಲೆಂಡ್ ಸುಮಾರು 102 ಚಿನ್ನ ಖರೀದಿಸಿದೆ ಎಂದು ವರದಿ ಮಾಡಿದೆ.
56
ಉಜ್ಬೇಕಿಸ್ತಾನ ಚಿನ್ನದ ಖರೀದಿ
ಪೋಲೆಂಡ್ ಜೊತೆಯಲ್ಲಿಯೇ ಉಜ್ಬೇಕಿಸ್ತಾನ ಸಹ ಚಿನ್ನ ಖರೀದಿ ಪ್ರಮಾಣ ಹೆಚ್ಚಿಸಿಕೊಂಡಿದೆ. ಚಿನ್ನ ಖರೀದಿಯಲ್ಲಿ ಸಕ್ರಿಯವಾಗಿರುವ ಉಜ್ಬೇಕಿಸ್ತಾನ ಫೆಬ್ರವರಿಯಲ್ಲಿ ಸುಮಾರು 8 ಟನ್‌ನಷ್ಟು ಬಂಗಾರ ಖರೀದಿ ಮಾಡಿದೆ. ನಿಕ್ಷೇಪಗಳಿಂದ ಉತ್ಪಾದನೆಯೂ ಸೇರಿದಂತೆ ಉಜ್ಬೇಕಿಸ್ತಾನ 407 ಟನ್ ಚಿನ್ನ ಹೊಂದಿದೆ. 2025ರ ವೇಳೆಗೆ ಉಜ್ಬೇಕಿಸ್ತಾನ ಸುಮಾರು 10-15 ಟನ್ ಚಿನ್ನ ಸಂಗ್ರಹಿಸಿತ್ತು.
ವರದಿಗಳ ಪ್ರಕಾರ, ಭಾರತ ಫೆಬ್ರವರಿಯಲ್ಲಿ ಹೆಚ್ಚು ಚಿನ್ನ ಖರೀದಿ ಮಾಡಿಲ್ಲ. ಫೆಬ್ರವರಿಯಲ್ಲಿ ಭಾರತದ ಕೇವಲ 0.2 ಟನ್ ಚಿನ್ನ ಖರೀದಿ ಮಾಡಿದೆ. 2025ರವರೆಗೆ ಭಾರತದ ಚಿನ್ನದ ನಿಧಿ 880 ಟನ್‌ಗೆ ತಲುಪಿತ್ತು. ಒಂದು ವರ್ಷದಲ್ಲಿ ಭಾರತದ ಚಿನ್ನ ಖರೀದಿ 27 ಟನ್ ಆಗಿತ್ತು.
ಇನ್ನು ಚೀನಾ ಒಂದು ವರ್ಷದಲ್ಲಿ 225 ಟನ್ ಚಿನ್ನ ಸಂಗ್ರಹಿಸಿಕೊಂಡಿತ್ತು. ಚೀನಾದ ಗೋಲ್ಡ್ ರಿಸರ್ವ್ 2305 ಟನ್‌ಗೆ ತಲುಪಿದೆ. ಚೀನಾ ಫೆಬ್ರವರಿಯಲ್ಲಿ 1 ಟನ್ ಚಿನ್ನ ಖರೀದಿಸಿದೆ. ಇಡೀ ವಿಶ್ವ ಫೆಬ್ರವರಿಯಲ್ಲಿ ಬರೋಬ್ಬರಿ 27 ಟನ್ ಚಿನ್ನದ ವಹಿವಾಟು ನೆಡೆಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.