ಈ ಕಾರಣಕ್ಕೆ ಚಲಾವಣೆಯಿಂದ ಮಾಯವಾಗ್ತಿರುವ ಹಳೆ 5 ರೂಪಾಯಿ ನಾಣ್ಯ

First Published | Nov 14, 2024, 12:59 PM IST

ಭಾರತದಲ್ಲಿ ಹಳೆಯ 5 ರೂ. ನಾಣ್ಯಗಳ ಚಲಾವಣೆ ಇತ್ತೀಚೆಗೆ ಕಡಿಮೆಯಾಗಿದೆ.ಹೊಸ ತಾಮ್ರದ ಬಣ್ಣದ ನಾಣ್ಯಗಳು ಹೆಚ್ಚಾಗ್ತಿವೆ. ಹೀಗಾಗಿ ಹಳೆಯ 5 ರೂ. ನಾಣ್ಯ ಚಲಾವಣೆಯಲ್ಲಿ ಇರುವುದಿಲ್ಲವೇ ಎಂಬ ಪ್ರಶ್ನೆ ಮೂಡಿದೆ.

ಭಾರತದಲ್ಲಿ 1,2,5,10,20 ರೂ. ನಾಣ್ಯಗಳು ಚಲಾವಣೆಯಲ್ಲಿವೆ. ಆದರೆ ಈಗ ಹಳೆಯ 5 ರೂ. ನಾಣ್ಯಗಳು ಕಮ್ಮಿ ಆಗ್ತಿವೆ. ಹೊಸ ತಾಮ್ರದ ಬಣ್ಣದ 5 ರೂ. ನಾಣ್ಯಗಳು ಜಾಸ್ತಿ ಆಗ್ತಿವೆ. ಹೀಗಾಗಿ ಹಳೆಯ 5 ರೂ. ನಾಣ್ಯ ಕ್ರಮೇಣ ಚಲಾವಣೆಯಿಂದ ದೂರ ಆಗಲಿದೆಯ ಎಂಬ ಪ್ರಶ್ನೆ ಮೂಡಿದೆ. ಆದ್ರೆ  ಹಳೆಯ ಈ 5 ರೂ ನಾಣ್ಯ ಕಡಿಮೆ ಆಗೋದಕ್ಕೆ ನಿಜವಾದ ಕಾರಣ ಏನು ಅಂತ ಈಗ ನೋಡೋಣ.

ಹಳೆಯ 5 ರೂ. ನಾಣ್ಯಗಳು ಸ್ವಲ್ಪ ದಪ್ಪ ಹಾಗೂ ಭಾರವಾಗಿದ್ದವು . ಅವು ಕುಪ್ರೊ-ನಿಕಲ್ ಅನ್ನೋ ದುಬಾರಿ ಲೋಹದಿಂದ ಮಾಡಲ್ಪಟ್ಟಿದ್ದವು. ಅವುಗಳ ತೂಕ ಸುಮಾರು 9 ಗ್ರಾಂ. ಆದರೆ ಕೆಲವರು ಅವುಗಳನ್ನು ಬಾಂಗ್ಲಾದೇಶಕ್ಕೆ ಕಳ್ಳ ಸಾಗಣೆ ಮಾಡುತ್ತಿದ್ದಾರೆ. ಈ ನಾಣ್ಯಗಳನ್ನು ಕರಗಿಸಿ ಬ್ಲೇಡ್‌ಗಳನ್ನು ತಯಾರಿಸಲಾಗುತ್ತದೆ. ಇದರಿಂದ  ಆ ಐದು ರೂ ನಾಣ್ಯಕ್ಕೆ ಅಲ್ಲಿ ಇಲ್ಲಿಗಿಂತ ಹೆಚ್ಚು ಹಣ ಸಿಗುತ್ತದೆ ಎಂಬ ಮಾಹಿತಿ ಇದೆ.

Tap to resize

ಒಂದು 5 ರೂ. ನಾಣ್ಯದಿಂದ ಆರು ಬ್ಲೇಡ್‌ಗಳನ್ನು ತಯಾರಿಸಬಹುದು. ಪ್ರತಿ ಬ್ಲೇಡನ್ನು 2 ರೂ.ಗೆ ಮಾರಿದರೆ ಒಂದು 5 ರೂ. ನಾಣ್ಯದಿಂದ 12 ರೂ. ಸಿಗುತ್ತದೆ. ಈ ವ್ಯಾಪಾರ ಲಾಭದಾಯಕವಾಗಿರುವುದರಿಂದ ಭಾರತದಿಂದ 5 ರೂಪಾಯಿಯ ಬಹಳಷ್ಟು ನಾಣ್ಯಗಳನ್ನು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿದೆ. ಇದು ರಿಸರ್ವ್ ಬ್ಯಾಂಕ್ ಗಮನಕ್ಕೂ ಬಂದಿದ್ದು ಹೀಗಾಗಿ ಈ ಕಳ್ಳಸಾಗಣೆ ತಡೆಗೆ ಹಳೆಯ 5 ರೂ. ನಾಣ್ಯಗಳನ್ನು ಮುದ್ರಿಸುವುದನ್ನು ನಿಲ್ಲಿಸಿದ ಆರ್‌ಬಿಐ ಹೊಸ ನಾಣ್ಯಗಳನ್ನು ಮುದ್ರಿಸಲು ಶುರು ಮಾಡಿದೆ.

ಈ ಹೊಸ 5 ರೂ. ನಾಣ್ಯಗಳು ತೆಳುವಾಗಿ ಮತ್ತು ಕಡಿಮೆ ತೂಕದಲ್ಲಿ ಮುದ್ರಿತವಾಗಿವೆ. ಅವುಗಳನ್ನು ಅಗ್ಗದ ಲೋಹದಿಂದ ತಯಾರಿಸಲಾಗುತ್ತಿದೆ. ಇದರಿಂದ ಹಳೆಯ 5 ರೂ. ನಾಣ್ಯಗಳು ಕಡಿಮೆಯಾಗಿ ಹೊಸ ನಾಣ್ಯಗಳು ಹೆಚ್ಚಾಗಿವೆ.

ಹಳೆಯ 5 ರೂ. ನಾಣ್ಯಗಳನ್ನು ಮುದ್ರಿಸುವುದನ್ನು ನಿಲ್ಲಿಸುವುದರಿಂದ ನಾಣ್ಯಗಳ ಕಳ್ಳಸಾಗಣೆ ನಿಲ್ಲುತ್ತದೆ ಎಂದು ಅಧಿಕಾರಿಗಳು ಭಾವಿಸಿದ್ದಾರೆ. ಹಳೆಯ 5 ರೂ. ನಾಣ್ಯಗಳು ಕಡಿಮೆಯಾಗಲು ಇದೇ ಕಾರಣ.

Latest Videos

click me!