ವಿಶ್ವದ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿಯ ಕುಟುಂಬ ವಾಸಿಸೋದು 15000 ಕೋಟಿ ರೂಪಾಯಿಯ ಐಷಾರಾಮಿ ಬಂಗಲೆಯಲ್ಲಿ. ಅಂಟಿಲಿಯಾ ಎಂದು ಕರೆಯಲ್ಪಡುವ ಈ ಮನೆ ಹಲವು ವಿಶೇಷತೆಗಳಿಂದ ಕೂಡಿದೆ. ಆದರೆ ಮಳೆಗಾಲದಲ್ಲಿ ಈ ಐಷಾರಾಮಿ ಬಂಗಲೆನೂ ಸೋರುತ್ತಾ?
ಅಂಬಾನಿ ಕುಟುಂಬ ವಾಸಿಸೋದು 15000 ಕೋಟಿ ರೂಪಾಯಿಯ ಅಂಟಿಲಿಯಾ ಬಗ್ಗೆ ತಿಳಿದುಕೊಳ್ಳುವಂಥಾ ಹಲವಾರು ಹೊಸ ವಿಚಾರಗಳಿವೆ. ಕಟ್ಟಡವು ಸಂಪೂರ್ಣ ಭವ್ಯ ಹೋಟೆಲ್‌ಗಿಂತ ಕಡಿಮೆಯಿಲ್ಲ.
ಹಲವಾರು ಈಜುಕೊಳಗಳು, ಸ್ಪಾ, ಹಲವಾರು ಸೌಲಭ್ಯಗಳ ನಡುವೆ ವೈಯಕ್ತಿಕ ಚಿತ್ರಮಂದಿರಗಳನ್ನು ಹೊಂದಿದೆ. ಆದರೆ ಆಂಟಿಲಿಯಾ ವೈರಲ್ ಚಿತ್ರವನ್ನು ನೋಡಿದರೆ, ಜನರು ನಿರಾಶೆಗೊಳ್ಳುವುದು ಖಂಡಿತ.
ಸದ್ಯ ಮುಕೇಶ್ ಅಂಬಾನಿ ಅವರ ಐಷಾರಾಮಿ ಬಂಗಲೆ ಮತ್ತು ವಿಶ್ವದ ಅತ್ಯಂತ ದುಬಾರಿ ಕಟ್ಟಡದ ಫೋಟೋ ವೈರಲ್ ಆಗಿದ್ದು, ಇದನ್ನು ನೀಲಿ ಟಾರ್ಪಾಲಿನ್‌ನಿಂದ ಮುಚ್ಚಿರುವುನ್ನು ಫೋಟೋದಲ್ಲಿ ನೋಡಬಹುದು. ಹೀಗಾಗಿಯೇ ಇದು ನೆಟ್ಟಿಗರೆಲ್ಲರ ಹುಬ್ಬೇರುವಂತೆ ಮಾಡ್ತಿದೆ. ಇಷ್ಟು ಐಷಾರಾಮಿ ಕಟ್ಟಡ ಸೋರುತಿದ್ಯಾ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ವೈರಲ್ ಆಗ್ತಿರೋ ಈ ಫೋಟೋ ಹಲವಾರು ಟೀಕೆಗಳು ಮತ್ತು ವಿವಾದಗಳನ್ನು ಹುಟ್ಟುಹಾಕಿದೆ. ಅನೇಕರು ಇದನ್ನು ಮುಖೇಶ್ ಅಂಬಾನಿಯ ಸಂಪತ್ತಿನ ಅಧಃಪತನ ಎಂದು ಕರೆದಿದ್ದಾರೆ. ಇನ್ನು ಕೆಲವರು ಇದು ಅಸಲಿ ಫೋಟೋವಲ್ಲ, ಫೇಕ್ ಫೋಟೋ ಎಂದು ಹೇಳುತ್ತಿದ್ದಾರೆ.
ವರದಿಯೊಂದರ ಪ್ರಕಾರ, ಇದು ಆಂಟಿಲಿಯಾ ನಿರ್ಮಾಣದ ಸಂದರ್ಭ ತೆಗೆದಿರುವ ಪೋಟೋವಾಗಿದೆ. ನಿರ್ಮಾಣ ಹಂತದ ಕಾಮಗಾರಿಯ ಸಂದರ್ಭ ಮಳೆ ಬಂದಾಗ ಕಟ್ಟಡವನ್ನು ಟಾರ್ಪಾಲಿನ್‌ನಿಂದ ಮುಚ್ಚಲಾಗಿತ್ತು. ಆ ಫೋಟೋ ಸದ್ಯ ವೈರಲ್ ಆಗ್ತಿದೆ ಎಂದು ತಿಳಿದುಬಂದಿದೆ.
ಐಷಾರಾಮಿ ಮನೆಯು 173 ಮೀಟರ್ ಎತ್ತರ ಮತ್ತು 37,000 ಚದರ ಮೀಟರ್‌ಗಳಲ್ಲಿ ಹರಡಿಕೊಂಡಿದೆ. ಎತ್ತರದ ಕಟ್ಟಡವು ಬಹು ಅಂತಸ್ತಿನ ಕಾರ್ ಪಾರ್ಕಿಂಗ್, 9 ಹೈ ಸ್ಪೀಡ್ ಎಲಿವೇಟರ್‌ಗಳು ಮತ್ತು ಸಿಬ್ಬಂದಿಗೆ ವಿಶೇಷ ಸೂಟ್‌ಗಳನ್ನು ಹೊಂದಿದೆ. 2012ರಿಂದ ಈವರೆಗೂ ಕೂಡಾ ಈ ಅಂಟಿಲಿಯಾ ಮನೆಯು ತನ್ನ ಐಷಾರಾಮಿ ವ್ಯವಸ್ಥೆಯಿಂದಲೇ ಅತೀ ಜನಪ್ರಿಯವಾಗಿದೆ.