ನಮ್ಮ ಕರೆನ್ಸಿ ನೋಟುಗಳಿಗೆ ಸ್ಪೂರ್ತಿ ಈ ಐತಿಹಾಸಿಕ ಸ್ಮಾರಕಗಳು: ಫೋಟೋಗಳಲ್ಲಿ ನೋಡಿ..
First Published | Apr 30, 2023, 2:52 PM ISTಕಳೆದೆರಡು ವರ್ಷಗಳಲ್ಲಿ ನಮ್ಮಲ್ಲಿ ಹೆಚ್ಚಿನವರು ಆನ್‌ಲೈನ್ ಪಾವತಿ ವಿಧಾನಗಳಿಗೆ ಬದಲಾಗಿದ್ದೇವೆ. ಆದರೂ, ಈಗಲೂ ಸಹ ಅನೇಕರು ಕರೆನ್ಸಿ ನೋಟುಗಳನ್ನೇ ಹೆಚ್ಚಾಗಿ ಬಳಸುತ್ತಾರೆ. ಕರೆನ್ಸಿ ನೋಟು ಇಟ್ಟುಕೊಂಡರೆ ಅದರ ಭಾವನೆನೇ ಬೇರೆ ಎನ್ನುತ್ತಾರೆ. ಅದು ವಿನ್ಯಾಸವಾಗಿರಬಹುದು ಅಥವಾ ಹಣದ ಭೌತಿಕ ಉಪಸ್ಥಿತಿಯಾಗಿದೆ. ಕರೆನ್ಸಿ ನೋಟುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ನೋಟುಗಳು ದೇಶದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯ ನೋಟವನ್ನು ಸಹ ಪ್ರದರ್ಶಿಸುತ್ತವೆ. ನಮ್ಮ ಕರೆನ್ಸಿ ನೋಟುಗಳು ಭಾರತದ ಪ್ರಸಿದ್ಧ ಸ್ಮಾರಕಗಳು ಮತ್ತು ಹೆಗ್ಗುರುತುಗಳ ಚಿತ್ರಗಳನ್ನು ಒಳಗೊಂಡಿರುತ್ತವೆ.
ನೋಟುಗಳ ಮೇಲೆ ಮುದ್ರಿತವಾಗಿರುವ ಐತಿಹಾಸಿಕ ಸ್ಥಳಗಳನ್ನು ಅನ್ವೇಷಿಸುವ ಟ್ವಿಟ್ಟರ್ ಪೋಸ್ಟ್‌ವೊಂದು ಇತ್ತೀಚೆಗೆ ವೈರಲ್ ಆಗಿದೆ. ದೇಸಿ ಥಗ್ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಇದನ್ನು ಪೋಸ್ಟ್ ಮಾಡಲಾಗಿದೆ. "ಭಾರತೀಯ ಕರೆನ್ಸಿ ನೋಟುಗಳಲ್ಲಿ ಮುದ್ರಿತ ಐತಿಹಾಸಿಕ ಸ್ಮಾರಕಗಳು ಮತ್ತು ಘಟನೆಗಳು" ಎಂದು ಅವರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.