ಉಗ್ರರ ದಾಳಿ ಕಾರ್ಯಾಚರಣೆ ವೇಳೆ ಸ್ಥಳದಲ್ಲೇ ರತನ್‌ ಟಾಟಾ ಮೊಕ್ಕಾಂ: ಇನ್ನೊಂದು ವಿಶೇಷವೆಂದರೆ...

First Published | Oct 11, 2024, 9:55 AM IST

160ಕ್ಕೂ ಹೆಚ್ಚು ಜನರನ್ನು ಬಲಿಪಡೆದ ದಾಳಿಯ ಸುದ್ದಿ ತಿಳಿಯುತ್ತಲೇ 70 ವರ್ಷದ ರತನ್‌ ಟಾಟಾ ಸ್ಥಳಕ್ಕೆ ಧಾವಿಸಿದ್ದರು. ಇಡೀ ತಾಜ್‌ ಹೋಟೆಲ್‌ ತುಂಬಾ ಉಗ್ರರ ಗುಂಡಿನ ದಾಳಿ, ಗ್ರೆನೇಡ್‌ ಸ್ಫೋಟ, ಬೆಂಕಿ ಹತ್ತಿಕೊಂಡ ಬಳಿಕ ಒಳಗಡೆ ಸ್ಫೋಟದ ಸದ್ದು ಭೀಕರ ಚಿತ್ರಣ ಸೃಷ್ಟಿತ್ತು. 

2008ರಂದು ಪಾಕ್‌ ಮೂಲದ ಉಗ್ರರ ತಂಡ ಮುಂಬೈನಲ್ಲಿ ಟಾಟಾ ಗ್ರೂಪ್‌ಗೆ ಸೇರಿದ ತಾಜ್‌ ಹೋಟೆಲ್‌ ಸೇರಿ ಹಲವು ಕಡೆ ಭೀಕರ ದಾಳಿ ನಡೆಸಿತ್ತು. 160ಕ್ಕೂ ಹೆಚ್ಚು ಜನರನ್ನು ಬಲಿಪಡೆದ ದಾಳಿಯ ಸುದ್ದಿ ತಿಳಿಯುತ್ತಲೇ 70 ವರ್ಷದ ರತನ್‌ ಟಾಟಾ ಸ್ಥಳಕ್ಕೆ ಧಾವಿಸಿದ್ದರು. ಇಡೀ ತಾಜ್‌ ಹೋಟೆಲ್‌ ತುಂಬಾ ಉಗ್ರರ ಗುಂಡಿನ ದಾಳಿ, ಗ್ರೆನೇಡ್‌ ಸ್ಫೋಟ, ಬೆಂಕಿ ಹತ್ತಿಕೊಂಡ ಬಳಿಕ ಒಳಗಡೆ ಸ್ಫೋಟದ ಸದ್ದು ಭೀಕರ ಚಿತ್ರಣ ಸೃಷ್ಟಿತ್ತು. 

ಈ ವೇಳೆ ಭದ್ರತಾ ಪಡೆಗಳು ನಡೆಸಿದ ಉಗ್ರರ ತೆರವು ಕಾರ್ಯಾಚರಣೆಯನ್ನು ತಾಜ್‌ ಹೋಟೆಲ್‌ನ ಕೊಲಾಬಾ ಎಂಡ್‌ನಲ್ಲಿ ನಿಂತೇ ರತನ್‌ ವೀಕ್ಷಿಸಿದ್ದರು. ನಂತರ ಘಟನೆಯಲ್ಲಿ ಮಡಿದವರ ಕುಟುಂಬ, ಸಿಬ್ಬಂದಿಗಳನ್ನು ರತನ್‌ ವೈಯಕ್ತಿಕವಾಗಿ ಭೇಟಿ ಮಾಡಿ ಸಾಂತ್ವನ ಹೇಳಿದ್ದರು. ಉಗ್ರ ದಾಳಿಗೆ ಹೋಟೆಲ್‌ ಇದ್ದ ಸ್ಥಿತಿ ನೋಡಿದರೆ ಅದು ತಕ್ಷಣಕ್ಕೆ ಪುನಾರಂಭ ಸಾಧ್ಯತೆ ದೂರವಾಗಿಸಿತ್ತು. 

Latest Videos


ಆದರೆ ರತನ್‌ರ ಛಲದಿಂದಾಗಿ ಕೇವಲ ಒಂದೇ ತಿಂಗಳಲ್ಲಿ ಹೋಟೆಲ್‌ ಪುನಾರಂಭವಾಗಿ ಉಗ್ರರ ವಿರುದ್ಧ ಸೆಟೆದಿದ್ದು ನಿಂತಿತ್ತು. ಇನ್ನೊಂದು ವಿಶೇಷವೆಂದರೆ ಅಂಥದ್ದೊಂದು ದಾಳಿ ನಡೆಸಿದ್ದ ಪಾಕಿಸ್ತಾನ ದೇಶದ ಜಿಡಿಪಿಯನ್ನೇ ಟಾಟಾ ಸಮೂಹ ದಾಳಿ ನಡೆದ 6 ವರ್ಷಗಳಲ್ಲಿ ಮೀರಿಸಿತ್ತು.

ತಾಜ್‌ ಹೋಟೆಲ್‌ಗಳಿಗೆ ಬೀದಿ ನಾಯಿಗಳಿಗೂ ಪ್ರವೇಶ: ರತನ್‌ ಟಾಟಾ ಅವರಿಗೆ ನಾಯಿಗಳೆಂದರೆ ಅಚ್ಚುಮೆಚ್ಚು. ಶ್ವಾನಪ್ರಿಯರಾದ ಟಾಟಾ ಅವರು ತಮ್ಮ ಬಳಿ ಇದ್ದ 3-4 ನಾಯಿಗಳೊಂದಿಗೆ ಸುತ್ತಾಡುವುದು, ಪ್ರವಾಸ ಹೋಗುವುದನ್ನು ಮಾಡುತ್ತಿದ್ದರು. 

ಅಂತಹ ರತನ್‌ ಟಾಟಾ ಅವರು ತಮ್ಮ ಟಾಟಾ ಸಮೂಹ ತಾಜ್‌ ಗ್ರೂಪ್‌ ಹೋಟೆಲ್‌ಗಳಿಗೆ ಬೀದಿ ನಾಯಿಗಳನ್ನು ಪ್ರವೇಶಿಸಲು ಅನುಮತಿಸಿದ್ದರು. ಪ್ರಮುಖವಾಗಿ ಭಾರತದಾದ್ಯಂತ ಈ ಐಷಾರಾಮಿ ತಾಜ್‌ ಹೋಟೆಲ್‌ಗಳು ಇದ್ದು, ಹೋಟೆಲ್‌ನ ಆವರಣದಲ್ಲಿ ಬೀದಿ ನಾಯಿಗಳೇನಾದರೂ ಬಂದರೆ ಅವುಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಹೋಟೆಲ್‌ ಸಿಬ್ಬಂದಿಗೆ ಕಟ್ಟುನಿಟ್ಟಾಗಿ ಸೂಚಿಸಿದ್ದರು.

click me!