ಹಂತಹಂತವಾಗಿ ಹಲವು ಕಾರ್ಖಾನೆಗಳನ್ನು ಆರಂಭಿಸಿದರು. ಟಾಟಾ ಸ್ಟೀಲ್ , ಟಾಟಾ ಪವರ್ ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಗಳನ್ನು ಹುಟ್ಟುಹಾಕಿದರು. ಮುಂಬೈಯ ಕೊಲಾಬೊ ಜಿಲ್ಲೆಯಲ್ಲಿ ಐಷಾರಾಮಿ ತಾಜ್ ಹೋಟೆಲ್ ಸ್ಥಾಪಿಸಿದರು. ಎಲ್ಲಾ ವಲಯಗಳನ್ನೂ ಒಂದೇ ಸಂಸ್ಥೆಯಡಿ ಬರುವಂತೆ ಮಾಡಲು ಟಾಟಾ ಗ್ರೂಪ್ ಸ್ಥಾಪಿಸಿ ವಿಶ್ವದಲ್ಲೇ ಯಶಸ್ವಿ ಉದ್ದಿಮೆದಾರ ಎನಿಸಿಕೊಂಡರು.