ಮಾರ್ಕೆಟಿಂಗ್, ಫೈನಾನ್ಸ್, ಕನೆಕ್ಷನ್ಸ್ಗಳ ಹೊರತಾಗಿಯೂ, ವ್ಯಾಪಾರದ ಯಶಸ್ಸಿಗೆ ಮೂಲ ಮಂತ್ರ ಯಾವುದು ಗೊತ್ತಾ? ಈ ಮೂಲಮಂತ್ರವೊಂದು ನಿಮಗೆ ತಿಳಿದ್ರೆ ವ್ಯಾಪಾರದಲ್ಲಿ ಬೆಳವಣಿಗೆ ಕಾಣಬಹುದಾಗಿದೆ. ಈ ಯಶಸ್ಸಿ ಮಂತ್ರವನ್ನು ವ್ಯಾಪಾರಿಗಳು ಮೊದಲು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.
ಜಾಸ್ತಿ ಓದ್ಬೇಕಿಲ್ಲ, MBA ಬೇಕಿಲ್ಲ, ಕೋಟಿ ಹಣ ಬೇಕಿಲ್ಲ ಒಂದು ಸಿಂಪಲ್ ಸತ್ಯ ಗೊತ್ತಿದ್ರೆ, ಅದನ್ನ ಫಾಲೋ ಮಾಡಿದ್ರೆ ಯಾವ ಬ್ಯುಸಿನೆಸ್ನಲ್ಲೂ ಗೆಲ್ಲಬಹುದು. ಆ ಸೀಕ್ರೆಟ್ ಸತ್ಯ ಗುಣಮಟ್ಟ!
ಈ ಒಂದು ವಿಷಯ ಗೊತ್ತಾದ್ರೆ ಯಾವುದೇ ಡಿಗ್ರಿ ಇಲ್ಲದಿದ್ರೂ ವ್ಯಾಪಾರದಲ್ಲಿ ಹೆಚ್ಚು ಹೆಚ್ಚು ಹಣ ಸಂಪಾದಿಸಬಹುದು. ಗ್ರಾಹಕರು ನೀಡುವ ಹಣದ ಮೌಲ್ಯಕ್ಕೆ ಗುಣಮಟ್ಟದ ವಸ್ತು/ಸೇವೆಯನ್ನು ನೀಡಬೇಕಾಗುತ್ತದೆ.
28
ಗುಣಮಟ್ಟ ಅಂದ್ರೆ ಏನು?
ಗುಣಮಟ್ಟ ಅಂದ್ರೆ ಗ್ರಾಹಕ ಕೊಟ್ಟ ಹಣಕ್ಕೆ ತಕ್ಕ ರಿಯಲ್ ವ್ಯಾಲ್ಯೂ. ಗ್ರಾಹಕರ ₹10 ಕೊಟ್ರೂ ಅಥವಾ ₹300 ಕೊಟ್ರೂ, ವ್ಯಾಲ್ಯೂ ಇರಬೇಕು. ಗುಣಮಟ್ಟ ಅಂದ್ರೆ ದುಬಾರಿ ಕಂಪನಿ ಅಥವಾ ಶ್ರೀಮಂತರಿಗೆ ಮಾತ್ರ ಅಲ್ಲ. ನ್ಯಾಯವಾದ ಬೆಲೆಗೆ ಒಳ್ಳೆ ಸೇವೆ/ಪ್ರಾಡಕ್ಟ್ ಕೊಡೋದು ವ್ಯಾಪಾರದ ಮೊದಲ ಪಾಠವಾಗಿದೆ.
38
ಗುಣಮಟ್ಟ ಯಾಕೆ ಮುಖ್ಯ?
ಗ್ರಾಹಕ ಒಮ್ಮೆ ನಿಮ್ಮ ಅಂಗಡಿಗೆ ಬಂದು ಖರೀದಿ ಮಾಡಬಹುದು, ಆದ್ರೆ ಆ ಗ್ರಾಹಕ ಮತ್ತೆ ನಿಮ್ಮ ಬಳಿ ಅಥವಾ ಅಂಗಡಿಗೆ ಬರ್ತಾರಾ ಅನ್ನೋದು ನೀವು ನೀಡುವ ಗುಣಮಟ್ಟದ ಸೇವೆ ಮೇಲೆ ಅವಲಂಬಿತವಾಗಿರುತ್ತದೆ..
ಗ್ರಾಹಕರ ಮೌಖಿಕ ಪ್ರಚಾರ ನಿಮ್ಮ ವ್ಯವಹಾರದ ನಂಬಿಕೆಯನ್ನು ಹೆಚ್ಚಿಸುತ್ತದೆ. ಇದು ನಿಮ್ಮ ವ್ಯಾಪಾರ ಹೆಚ್ಚಾಗಲು ಕಾರಣವಾಗುತ್ತದೆ ಕ್ವಾಲಿಟಿ ಇಲ್ಲದಿದ್ರೆ 'ಮನ ಬದಲಾಯ್ತು' ಅಂತಾರೆ. ಒಳ್ಳೆಯದಲ್ಲದ ಪ್ರಾಡಕ್ಟ್ನ್ನ ಒಮ್ಮೆ ಮಾತ್ರ ಮಾರಬಹುದು, ಮತ್ತೆ ಗ್ರಾಹಕರು ಬರಲ್ಲ.
ಹೊಸ ಬಿಸಿನೆಸ್ನಲ್ಲಿ 2 ವರ್ಷ ಲಾಭ ಬೇಡ. ಆ ಸಮಯದಲ್ಲಿ ಸೇವೆಯ ಗುಣಮಟ್ಟ, ನಂಬಿಕೆ ಬೆಳೆಸಬೇಕು. ಮೊದಲ ಗ್ರಾಹಕ ಸಂತೃಪ್ತರಾಗಿದ್ರೆ, ಅದು ನಿಮ್ಮ ಗೆಲುವಿನ ಮೊದಲ ಹೆಜ್ಜೆ. ಗುಣಮಟ್ಟ ಬಿಟ್ಟು ಬೆಲೆ ಜಾಸ್ತಿ ಮಾಡಿದ್ರೆ, ಬಿಸಿನೆಸ್ ಹಾಳಾಗುತ್ತೆ ಅಂತ ಅರ್ಥ.
58
ಕಸ್ಟಮರ್ ಎಕ್ಸ್ಪೀರಿಯನ್ಸ್ ಮುಖ್ಯ
ಒಳ್ಳೆ ಪ್ರಾಡಕ್ಟ್ ಜೊತೆ ಒಳ್ಳೆ ಅನುಭವವೂ ಮುಖ್ಯ. ಹೋಟೆಲ್ನಲ್ಲಿ ಸ್ವಚ್ಛ ಶೌಚಾಲಯ ಇಲ್ಲದಿದ್ರೆ, ಊಟ ರುಚಿಯಾಗಿದ್ರೂ ಜನ ಮತ್ತೆ ಬರಲ್ಲ. ಇಂಟರ್ನೆಟ್ 4 ದಿನ ಕಟ್ ಆದ್ರೆ, ಮುಂದಿನ ತಿಂಗಳು ಬಿಲ್ ಕಟ್ಟಲ್ಲ. ಕಸ್ಟಮರ್ ಎಕ್ಸ್ಪೀರಿಯನ್ಸ್ ಅಂದ್ರೆ ನಮ್ಮ ಸೇವೆಯ ಪರಿಣಾಮ. ಇದ್ರೆ ಬಿಸಿನೆಸ್ ಓಡುತ್ತೆ, ಇಲ್ಲದಿದ್ರೆ ಮುಳುಗುತ್ತೆ.
68
ಸಿಂಪಲ್ ಟೆಸ್ಟ್ - ನೀವು ಕೊಳ್ಳುತ್ತೀರಾ?
ನೀವು ಮಾರಾಟ ಮಾಡುತ್ತಿರೋ ಪ್ರಾಡಕ್ಟ್/ಸೇವೆಯನ್ನ ನೀವೇ ಗ್ರಾಹಕರಾಗಿ ಕೊಳ್ಳುತ್ತೀರಾ? ಅದಕ್ಕೆ ಹಣ ಕೊಡೋಕೆ ರೆಡಿ ಇದ್ದೀರಾ? 'ಹೌದು' ಅಂದ್ರೆ ನಿಮ್ಮ ಗುಣಮಟ್ಟ ಸರಿಯಾದ ದಾರಿಯಲ್ಲಿದೆ. ಇಲ್ಲ ಅಂದ್ರೆ ಬದಲಾವಣೆ ಬೇಕು.
78
ಕ್ವಾಲಿಟಿ ಇಲ್ಲದ ಬಿಸಿನೆಸ್
ತಲೆ ಬೋಳಾಗೋಕೆ ಕಾರಣ – ಹೊಸ ಕೂದಲು ಬಂದ್ರೂ ಹಳೆ ಕೂದಲು ಜಾಸ್ತಿ ಉದುರಿದ್ರೆ. ಬಿಸಿನೆಸ್ನಲ್ಲಿ ಹೊಸ ಗ್ರಾಹಕರು ಬಂದ್ರೂ ಹಳೆಯವರು ಹೋದ್ರೆ ಅದು ಬೆಳವಣಿಗೆ ಅಲ್ಲ, ಅದು ನಿಮ್ಮ ಅಂಗಡಿ ಮುಚ್ಚುವಿಕೆ ಮೊದಲ ಹಂತ ಎಂದು ನೀವು ಅರಿತುಕೊಳ್ಳಬೇಕಾಗುತ್ತದೆ.
88
ಕ್ಲಿಯರ್ ಮೆಸೇಜ್
• “ಗುಣಮಟ್ಟ ಇಲ್ಲ ಅಂದ್ರೆ ಬೆಳವಣಿಗೆ ಇಲ್ಲ… ಬೆಳವಣಿಗೆ ಇಲ್ಲ ಅಂದ್ರೆ ಬಿಸಿನೆಸ್ ಇಲ್ಲ!”
• ಗುಣಮಟ್ಟನ ಕಾಪಾಡಿದ್ರೆ, ಅದೇ ನಿಮ್ಮನ್ನ ಬೆಳೆಸುತ್ತೆ.
• ಒಳ್ಳೆ ಬೆಲೆ + ಒಳ್ಳೆ ಗುಣಮಟ್ಟ + ಒಳ್ಳೆ ಅನುಭವ = ದೀರ್ಘಕಾಲದ ನಂಬಿಕೆ, ಬೆಳವಣಿಗೆ!
• ಜಾಸ್ತಿ ಓದ್ಬೇಕಿಲ್ಲ… ಸಿಂಪಲ್ ಆಗಿಯೂ ಸಾಮ್ರಾಜ್ಯ ಕಟ್ಟಬಹುದು! ಗುಣಮಟ್ಟನೇ ಆ ಸಿಂಪಲ್ ದಾರಿ!