ಅಂಬಾನಿ ನಡೆಗೆ ಹಲವು ಕಂಪನಿಗಳಿಗೆ ನಡುಕ, ಇನ್ಶೂರೆನ್ಸ್ ಕ್ಷೇತ್ರಕ್ಕೆ ಜಿಯೋ ಎಂಟ್ರಿ

Published : Jul 19, 2025, 07:51 PM ISTUpdated : Jul 21, 2025, 09:43 AM IST

ಜಿಯೋ ಫಿನಾನ್ಶಿಯಲ್ ಇದೀಗ ಭಾರತೀಯ ವಿಮಾ ಕ್ಷೇತ್ರಕ್ಕೆ ಎಂಟ್ರಿಕೊಟ್ಟಿದೆ. ಅಲಯಂಜ್ ಸಮೂಹದ ಪಾಲುದಾರಿಕೆ ಮಾಡಿಕೊಂಡಿರುವ ಜಿಯೋ ಭಾರತದಲ್ಲಿ ದೇಶಿಯ ಮರುವಿಮೆ ಘೋಷಣೆ ಮಾಡಿದೆ.

PREV
15

ಅಂಬಾನಿ ಒಡೆತನದ ಜಿಯೋ ಫಿನಾನ್ಶಿಯಲ್ ಇದೀಗ ಭಾರತೀಯ ವಿಮೆ ಕ್ಷೇತ್ರಕ್ಕೆ ಎಂಟ್ರಿಕೊಡುವ ಮೂಲಕ ಹಲವು ಕಂಪನಿಗಳಿಗೆ ನಡುಕು ಹುಟ್ಟಿಸಿದೆ. ಅಲಯಂಜ್ ಸಮೂಹ (Allianz)ದ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಅಲಯಂಜ್ ಯುರೋಪ್ ಬಿ.ವಿ ಹಾಗೂ ಜಿಯೋ ಫಿನಾನ್ಶಿಯಲ್ ಇದೀಗ ಭಾರತೀಯ ವಿಮಾ ಮಾರುಕಟ್ಟೆಗೆ ಪ್ರವೇಶ ಪಡೆದಿದೆ. 50:50 ಅನುಪಾತದಲ್ಲಿ ಎರಡೂ ಕಂಪನಿಗಳು ಮರುವಿಮಾ ಜಂಟಿ ಉದ್ಯಮವನ್ನು ರಚನೆ ಮಾಡುವುದಾಗಿ ಘೋಷಿಸಿವೆ.

25

ಜಿಯೋ ಫಿನಾನ್ಶಿಯಲ್ ಸ್ಥಳೀಯ ಡೇಟಾ ಮತ್ತು ಬಲವಾದ ಡಿಜಿಟಲ್ ಉಪಸ್ಥಿತಿಯನ್ನು ಹೊಂದಿದ್ದರೆ, ಅಲಯಂಜ್ ಬಲವಾದ ಅಂಡರ್‌ರೈಟಿಂಗ್ ಹಾಗೂ ಜಾಗತಿಕ ಮರುವಿಮಾ ಸಾಮರ್ಥ್ಯಗಳನ್ನು ಹೊಂದಿದೆ. ಈ ಜಂಟಿ ಉದ್ಯಮವು ಭಾರತದಲ್ಲಿ ಅಲಯಂಜ್ ನ ಅಸ್ತಿತ್ವದಲ್ಲಿರುವ ಅಲಯಂಜ್- ಮರು ವಿಮೆ ಮತ್ತು ಅಲಯಂಜ್ ವಾಣಿಜ್ಯ ಪೋರ್ಟ್‌ಫೋಲಿಯೊಗಳನ್ನು ಸಹ ಬಳಸಿಕೊಳ್ಳುತ್ತದೆ.

35

ಅಲಯಂಜ್ -ಮರು ವಿಮೆ ಭಾರತದಲ್ಲಿ 25 ವರ್ಷಗಳಿಗೂ ಹೆಚ್ಚು ಕಾಲ ಮರುವಿಮೆ ಮಾಡುತ್ತಾ ಬಂದಿದೆ. ನಿಯಮಬದ್ಧ ಮತ್ತು ನಿಯಂತ್ರಕ ಅನುಮೋದನೆಗಳನ್ನು ಪಡೆದ ನಂತರ ಜಂಟಿ ಉದ್ಯಮವು ಕಾರ್ಯಾಚರಣೆ ಪ್ರಾರಂಭಿಸುತ್ತದೆ. ಇದೀಗ ಜಿಯೋ ಸೇರಿಕೊಳ್ಳುವ ಮೂಲಕ ಮತ್ತಷ್ಟು ಪರಿಣಾಮಕಾರಿಯಾಗಿ ಸೇವೆ ನೀಡಲಿದೆ.

45

ಮಹತ್ವದ ಒಪ್ಪಂದ ಹಾಗೂ ವ್ಯವಹಾರ ಕುರಿತು ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್‌ ನಿರ್ದೇಶಕಿ ಇಶಾ ಅಂಬಾನಿ ಪ್ರತಿಕ್ರಿಯಿಸಿದ್ದಾರೆ. ಬೆಳೆಯುತ್ತಿರುವ ಆರ್ಥಿಕ ಅರಿವು ಹಾಗೂ ವ್ಯಾಪಕ ಆಗುತ್ತಿರುವ ಡಿಜಿಟಲ್ ಪರಿಸರದಿಂದ ವಿಮಾ ಬೇಡಿಕೆಯಲ್ಲಿ ಏರಿಕೆಯನ್ನು ಕಾಣುತ್ತಿದೆ ಎಂದಿದ್ದಾರೆ. ಈ ಪಾಲುದಾರಿಕೆಯು ಅಲಯಂಜ್ ನ ಜಾಗತಿಕ ಮರುವಿಮಾ ಪರಿಣತಿ ಜೊತೆಗೆ ಜೆಎಫ್‌ಎಸ್‌ಎಲ್‌ನ ಭಾರತೀಯ ಮಾರುಕಟ್ಟೆಯ ಆಳವಾದ ತಿಳಿವಳಿಕೆ ಸೇರುತ್ತದೆ ಎಂದು ಇಶಾ ಅಂಬಾನಿ ಹೇಳಿದ್ದಾರೆ. ಇದರಿಂದಾಗಿ ವಿಮಾದಾರರಿಗೆ ನವೀನ ಮತ್ತು ಕಸ್ಟಮೈಸ್ ಮಾಡಿದ ಮರುವಿಮಾ ಪರಿಹಾರಗಳನ್ನು ಒದಗಿಸುವ ಗುರಿಯನ್ನು ಹೊಂದಿರುವ ದೃಢವಾದ ಡಿಜಿಟಲ್ ಮೂಲಸೌಕರ್ಯ ಸಂಯೋಜಿಸುತ್ತದೆ. '2047ನೇ ಇಸವಿ ವೇಳೆಗೆ ಎಲ್ಲರಿಗೂ ವಿಮೆ' ಎಂಬ ರಾಷ್ಟ್ರೀಯ ಗುರಿಗೆ ಅನುಗುಣವಾಗಿ, ಪ್ರತಿ ಭಾರತೀಯರಿಗೂ ರಕ್ಷಣೆಯನ್ನು ಖಚಿತಪಡಿಸುವ ಬಲವಾದ ಮತ್ತು ಹೆಚ್ಚು ಅಂತರ್ಗತ ವಿಮಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ನಾವು ಬದ್ಧರಾಗಿದ್ದೇವೆ ಎಂದಿದ್ದಾರೆ.

55

ಭಾರತದಲ್ಲಿ ಜಿಯೋ ಫೈನಾನ್ಷಿಯಲ್ ಸರ್ವೀಸಸ್‌ನೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲು ನಾವು ಹೆಮ್ಮೆ ಪಡುತ್ತೇವೆ ಮತ್ತು ತಮ್ಮ ಕುಟುಂಬಗಳು ಮತ್ತು ಅವರ ವ್ಯವಹಾರಗಳಿಗೆ ಸರಿಯಾದ ರಕ್ಷಣೆಯನ್ನು ಬಯಸುವ ಗ್ರಾಹಕರಿಗೆ ಸೇವೆ ಸಲ್ಲಿಸುವ ಅವಕಾಶವನ್ನು ಹೊಂದಿದ್ದೇವೆ ಎಂದು ಅಲಯಂಜ್ ಮುಖ್ಯ ಕಾರ್ಯನಿರ್ವಾಹಕ ಆಲಿವರ್ ಬೆಟ್ ಹೇಳಿದ್ದಾರೆ. ಅಲಯಂಜ್ ಮತ್ತು ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಗ್ರಾಹಕ ಶ್ರೇಷ್ಠತೆಗೆ ಖ್ಯಾತಿಯನ್ನು ಹೊಂದಿರುವ ಎರಡು ವಿಶ್ವಾಸಾರ್ಹ ಬ್ರ್ಯಾಂಡ್‌ಗಳಾಗಿವೆ ಮತ್ತು ಈ ರೋಮಾಂಚಕಾರಿ ಪ್ರಯಾಣದಲ್ಲಿ ಸಕ್ರಿಯವಾಗಿ ಕೊಡುಗೆ ನೀಡಲು ಮತ್ತು ಭಾಗವಹಿಸಲು ನಾವು ಎದುರು ನೋಡುತ್ತಿದ್ದೇವೆ ಎಂದಿದ್ದಾರೆ.

Read more Photos on
click me!

Recommended Stories