ಕೇವಲ ಒಂದು ಲಕ್ಷಯಿದ್ರೆ ಸಾಕು, ಈ ಬ್ಯುಸಿನೆಸ್ ಆರಂಭಿಸಿ ಕೈತುಂಬಾ ಹಣ ಗಳಿಸಿ!

Published : Apr 20, 2026, 12:56 PM ISTUpdated : Apr 20, 2026, 01:27 PM IST

ಕಡಿಮೆ ಖರ್ಚಿನಲ್ಲಿ ಸ್ವಂತ ಬ್ಯುಸಿನೆಸ್ ಶುರು ಮಾಡಬೇಕಾ? 1 ಲಕ್ಷ ರೂಪಾಯಿಗಿಂತ ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದಾದ ಲಾಭದಾಯಕ ಬ್ಯುಸಿನೆಸ್ ಐಡಿಯಾಗಳ ಬಗ್ಗೆ ಇಲ್ಲಿ ತಿಳಿಯೋಣ.

PREV
16
ಡ್ರಾಪ್‌ಶಿಪಿಂಗ್ (Drop Shipping)
ಯಾವುದೇ ಸ್ಟಾಕ್ ಇಟ್ಟುಕೊಳ್ಳದೆ, ಆನ್‌ಲೈನ್‌ನಲ್ಲಿ ಗ್ರಾಹಕರು ಮತ್ತು ಮಾರಾಟಗಾರರ ನಡುವೆ ಸೇತುವೆಯಾಗಿ ಕೆಲಸ ಮಾಡಿ ಕಮಿಷನ್ ಗಳಿಸಬಹುದು. ಇದಕ್ಕೆ ಡಿಜಿಟಲ್ ಮಾರ್ಕೆಟಿಂಗ್ ಬಗ್ಗೆ ಜ್ಞಾನ ಇರುವುದು ಬಹಳ ಮುಖ್ಯ.
26
ಹೋಮ್ ಬೇಕರಿ (Home Bakery)
ಮನೆಯಲ್ಲಿರುವ ಓವನ್, ಫ್ರಿಡ್ಜ್ ಬಳಸಿ ಬೇಕರಿ ಐಟಂಗಳನ್ನು ತಯಾರಿಸಿ ಮಾರಾಟ ಮಾಡಬಹುದು. ಪಾರ್ಟಿ, ಹುಟ್ಟುಹಬ್ಬಗಳಿಗೆ ಕಸ್ಟಮೈಸ್ಡ್ ಕೇಕ್‌ಗಳನ್ನು ತಯಾರಿಸಿಕೊಡುವ ಮೂಲಕ ಬ್ಯುಸಿನೆಸ್ ವಿಸ್ತರಿಸಬಹುದು.
36
ವಾಟರ್ ಬಾಟಲ್ ಬ್ಯುಸಿನೆಸ್ (Water Bottle Business)

ವಾಟರ್ ಪ್ಲಾಂಟ್‌ಗಳ ಜೊತೆ ಒಪ್ಪಂದ ಮಾಡಿಕೊಂಡು ನಿಮ್ಮದೇ ಬ್ರ್ಯಾಂಡಿಂಗ್‌ನಲ್ಲಿ ವಾಟರ್ ಬಾಟಲ್‌ಗಳನ್ನು ಪೂರೈಕೆ ಮಾಡಬಹುದು. ಇಲ್ಲವೇ, ಸಣ್ಣ ಜಾಗದಲ್ಲಿ 80,000 ರೂ. ಒಳಗೆ ವಾಟರ್ ಪ್ಲಾಂಟ್ ಸ್ಥಾಪಿಸಿ, ಸುತ್ತಮುತ್ತಲಿನವರಿಗೆ ವಾಟರ್ ಕಾಯಿನ್ ಸೇವೆ ನೀಡಬಹುದು.

46
ಫೋಟೋಗ್ರಫಿ (Photography)

ಒಂದು ಒಳ್ಳೆ ಕ್ಯಾಮೆರಾ ಖರೀದಿಸಿ ಫೋಟೋಗ್ರಫಿ ಸೇವೆಗಳನ್ನು ಆರಂಭಿಸಬಹುದು. ಆರಂಭದಲ್ಲಿ ಪ್ರೊಫೆಷನಲ್ ಕೋರ್ಸ್ ಮಾಡಿದರೆ ಅಥವಾ ಯಾರದ್ದಾದರೂ ಬಳಿ ಇಂಟರ್ನ್‌ಶಿಪ್ ಮಾಡಿದರೆ ಈ ಕ್ಷೇತ್ರದ ಬಗ್ಗೆ ಹೆಚ್ಚು ಕಲಿಯಬಹುದು.

56
ಈವೆಂಟ್ ಮ್ಯಾನೇಜ್ಮೆಂಟ್(Event Management)

ಸಣ್ಣಪುಟ್ಟ ಫಂಕ್ಷನ್‌ಗಳು, ಬರ್ತ್‌ಡೇ ಪಾರ್ಟಿಗಳನ್ನು ಆಯೋಜಿಸುವ ಜವಾಬ್ದಾರಿ ಹೊತ್ತು ಈ ಬ್ಯುಸಿನೆಸ್ ಶುರು ಮಾಡಬಹುದು. ಲೈಟಿಂಗ್, ಸೌಂಡ್, ಡೆಕೋರೇಟರ್‌ಗಳ ಜೊತೆ ನೆಟ್‌ವರ್ಕ್ ಮಾಡಿಕೊಂಡು ಈವೆಂಟ್‌ಗಳನ್ನು ನಡೆಸಿಕೊಡಬಹುದು.

66
**ಪ್ರಮುಖ ಸೂಚನೆ:**

ಯಾವುದೇ ಬ್ಯುಸಿನೆಸ್ ಆಗಲಿ, ಒಂದೇ ಬಾರಿಗೆ ದೊಡ್ಡ ಮಟ್ಟದಲ್ಲಿ ಬಂಡವಾಳ ಹಾಕಬೇಡಿ. ಸಣ್ಣ ಮಟ್ಟದಲ್ಲಿ ಆರಂಭಿಸಿ, ನಿಧಾನವಾಗಿ ಬೆಳೆಸುವುದು ಉತ್ತಮ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories