ಕೇವಲ ತಿಂಗಳಿಗೆ 2000 ರೂಪಾಯಿ ಹೂಡಿಕೆ 1.42 ಲಕ್ಷ ರೂಪಾಯಿ ರಿಟರ್ನ್ಸ್, ಪೋಸ್ಟ್ ಅಫೀಸ್ RD ಸ್ಕೀಮ್

Published : Jul 08, 2026, 04:21 PM ISTUpdated : Jul 08, 2026, 04:23 PM IST

ಪೋಸ್ಟ್ ಆಫೀಸ್ ಹೂಡಿಕೆ ಎಂದಿಗೂ ಸುರಕ್ಷಿತ. ವಿಶೇಷ ಅಂದರೆ ಅತೀ ಕಡಿಮೆ ಹಣ ಹೂಡಿಕೆ ಮಾಡಿ ಲಕ್ಷ ಲಕ್ಷ ರೂಪಾಯಿ ರಿಟರ್ನ್ಸ್ ಪಡೆಯುವ ಹಲವು ಯೋಜನೆಗಳಿವೆ. ಈ ಪೈಕಿ ಆರ್‌ಡಿ ಸಣ್ಣ ಹಣದಲ್ಲಿ ದೊಡ್ಡ ಲಾಭ ಪಡೆಯಲು ಸಾಧ್ಯವಿದೆ.

PREV
15
1.42 ಲಕ್ಷ ರೂಪಾಯಿ ರಿಟನ್ಸ್

ಪೋಸ್ಟ್ ಆಫೀಸ್‌ನಲ್ಲಿ ಉಳಿತಾಯ ಯೋಜನೆ, ಹೂಡಿಕೆ ಸೇರಿದಂತೆ ಹಲವು ಸ್ಕೀಮ್‌ಗಳು ಲಭ್ಯವಿದೆ. ಈ ಪೈಕಿ ಪೋಸ್ಟ್ ಆಫೀಸ್ ಆರ್‌ಡಿ ಸ್ಕೀಮ್ ಉತ್ತಮ ಉಳಿತಾಯ ಯೋಜನೆಯಾಗಿ ಗುರುತಿಸಿಕೊಂಡಿದೆ. ಅತೀ ಸಣ್ಣ ಮೊತ್ತ ಹೂಡಿಕೆ ಮಾಡಿದ ದೊಡ್ಡ ರಿಟರ್ನ್ಸ್ ಪಡೆಯಲು ಸಾಧ್ಯವಿದೆ. ಹೀಗೆ ಪ್ರತಿ ತಿಂಗಳು 2000 ರೂಪಾಯಿ ಹೂಡಿಕೆ ಮಾಡಿ 1.42 ಲಕ್ಷ ರೂಪಾಯಿ ರಿಟನ್ಸ್ ಪಡೆಯುವ ಯೋಜನೆ ವಿವರ ಇಲ್ಲಿದೆ.

25
5 ವರ್ಷಗಳ ಅವಧಿ

ಸಣ್ಣ ಉಳಿತಾಯ ಯೋಜನೆಗಳಿಗೆ 6.7 ರಷ್ಟು ಬಡ್ಡಿದರ ನೀಡುತ್ತಿದೆ. ಪೋಸ್ಟ್ ಆಫೀಸ್ ಆರ್‌ಡಿ ಸ್ಕೀಮ್ ಮೂಲಕ ಪ್ರತಿ ತಿಂಗಳು 2000 ರೂಪಾಯಿ ಹೂಡಿಕೆ ಮಾಡಬೇಕು. 5 ವರ್ಷಗಳ ಅವಧಿಯಲ್ಲಿ ಈ ಮೊತ್ತಕ್ಕೆ ಬಡ್ಡಿ ಸೇರಿಸಿ ಪೋಸ್ಟ್ ಆಫೀಸ್ 1.42 ಲಕ್ಷ ರೂಪಾಯಿ ಹಿಂದಿರುಗಿಸಿ ನೀಡಲಿದೆ. ಈ ಮೂಲಕ ಸಣ್ಣ ಮೊತ್ತ ಉಳಿತಾಯ ಮಾಡಿ ದೊಡ್ಡ ಮೊತ್ತ ರಿಟರ್ನ್ಸ್ ಮೂಲಕ ಪಡೆಯಲು ಸಾಧ್ಯವಿದೆ.

35
ಮಾರುಕಟ್ಟೆ ಏರಿಳಿತ ಹೂಡಿಕೆ ಮೇಲೆ ಪರಿಣಾಮ ಬೀರುವುದಿಲ್ಲ

5 ವರ್ಷಗಳು ಅಂದರೆ 60 ತಿಂಗಳು. ಪ್ರತಿ ತಿಂಗಳು 2000 ರೂಪಾಯಿ ಹೂಡಿಕೆ ಮಾಡಿದೆರ ಒಟ್ಟು ಹೂಡಿಕೆ ಮೊತ್ತ 1.20 ಲಕ್ಷ ರೂಪಾಯಿ. ಇದಕ್ಕೆ ಬಡ್ಡಿ ರೂಪದಲ್ಲಿ 22,732 ರೂಪಾಯಿ ಸಿಗಲಿದೆ.ಹೂಡಿಕೆ ಮೆಚ್ಯೂರಿಟಿ ವೇಳೆ ಒಟ್ಟು 1,42,732 ರೂಪಾಯಿ ಸಿಗಲಿದೆ. ಮಾರುಕಟ್ಟೆಯಲ್ಲಿ ಯಾವುದೇ ಏರಿಳಿತ ಎದುರಾದರೂ ಹೂಡಿಕೆ ಹಾಗೂ ರಿಟರ್ನ್ಸ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

45
100 ರೂಪಾಯಿ ಹೂಡಿಕೆ ಸಾಧ್ಯ

ಪೋಸ್ಟ್ ಆಫೀಸ್ ಆರ್‌ಡಿ ಯೋಜನೆಯಲ್ಲಿ ಕೇವಲ 100 ರೂಪಾಯಿಯಿಂದ ಹೂಡಿಕೆ ಆರಂಭಿಸಲು ಸಾಧ್ಯವಿದೆ 12 ತಿಂಗಳು ಕಂತು ಪಾವತಿಸಿದ ಬಳಿಕ ಹೂಡಿಕೆ ಮೊತ್ತದಲ್ಲಿ ಶೇಕಡಾ 50ರಷ್ಟು ಸಾಲ ಪಡೆಯಲು ಅವಕಾಶವಿದೆ. ಸಾಲಕ್ಕೆ ಆರ್‌ಡಿ ಬಡ್ಡಿಗಿಂತ ಶೇಕಡಾ 2ರಷ್ಟು ಹೆಚ್ಚುವರಿ ಬಡ್ಡಿ ವಿಧಿಸಲಾಗುತ್ತದೆ.

55
ಪೋಸ್ಟ್ ಆಫೀಸ್ ಹೂಡಿಕೆ

ಪೋಸ್ಟ್ ಆಫೀಸ್‌ಗಳಲ್ಲಿ ಅತೀ ಸುಲಭವಾಗಿ ಹಾಗೂ ಸುರಕ್ಷಿತವಾಗಿ ಹಣ ಹೂಡಿಕೆ ಮಾಡಬಹುತು. ಮಾರುಕಟ್ಟೆ ಏರಿಳಿತ, ಷೇರು ಮಾರುಕಟ್ಟೆಗಳ ಕುಸಿತ ನಿಮ್ಮ ಸುರಕ್ಷಿತ ಹೂಡಿಕೆ ಮೊತ್ತದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನಿಗದಿತ ಸಮಯದಲ್ಲಿ ಬಡ್ಡಿ ಸೇರಿ ಉತ್ತಮ ಮೊತ್ತ ರಿಟರ್ನ್ಸ್ ಪಡೆಯಲು ಸಾಧ್ಯವಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories