ತಿಂಗಳ ರೀಚಾರ್ಜ್ ಮಾಡಿದ ಬಳಿಕವೂ ಕೆಲವೊಮ್ಮೆ ಡೇಟಾ ಮುಗಿದು ಪರದಾಡುವ ಪರಿಸ್ಥಿತಿ ಎದುರಾಗುತದೆ. ಇತರರಿಗೆ ಹೇಳಿ ಹೆಚ್ಚುವರಿ ಡೇಟಾ ರೀಚಾರ್ಜ್ ಮಾಡಿದವರೇ ಹಲವರು. ಆದರೆ ಜಿಯೋ ಉಚಿತವಾಗಿ ಬೋನಸ್ ಡೇಟಾ ನೀಡುತ್ತಿದೆ.
ತಿಂಗಳ ರೀಚಾರ್ಜ್ ಮಾಡುವ ಬಹುತೇಕರು ಕೆಲವು ದಿನ ಹಲವು ಕಾರಣಗಳಿಂದ ಅಥವಾ ಹೆಚ್ಚು ಫ್ರಿಯಾಗಿದ್ದಾಗ ಡೇಟಾ ಬಳಕೆಯೂ ಹೆಚ್ಚಾಗುತ್ತದೆ. ಕೊನೆಯಲ್ಲಿ ಡೇಟಾ ಮುಗಿದು ಪರಿದಾಡುವ ಪರಿಸ್ಥಿತಿ ಎದುರಾಗುವುದು ಸಹಜ. ಕಂಪನಿ ಇಮೇಲ್, ವ್ಯಾಟ್ಸಾಪ್ ಗ್ರೂಪ್ ಸೇರಿದಂತೆ ಯಾವ ಅಪ್‌ಡೇಟ್ ಇಲ್ಲದೆ ಹಲವರು ಸಮಸ್ಯೆ ಎದುರಿಸುತ್ತಾರೆ. ಕೊನೆಗೆ ಆಪ್ತರಿಗೆ ಹೇಳಿ ಹೆಚ್ಚುವರಿ ಡೇಟಾ ರೀಚಾರ್ಜ್ ಮಾಡಿಸುವ ಅನಿವಾರ್ಯತೆ ಎದುರಾಗಲಿದೆ. ಈ ಸಮಸ್ಯೆಗಳಿಗಾಗಿಯೇ ಜಿಯೋ ಹೆಚ್ಚುವರಿ ಬೋನಸ್ ಡೇಟಾವನ್ನು ಉಚಿತವಾಗಿ ನೀಡುತ್ತಿದೆ. ನಿಮ್ಮ ರೀಚಾರ್ಜ್‌ನಲ್ಲೇ ಹೆಚ್ಚುವರಿ ಉಚಿತ ಡೇಟಾ ನೀಡಲಾಗುತ್ತದೆ. ಇದಕ್ಕಾಗಿ ಬೇರೆ ರೀಚಾರ್ಜ್ ಮಾಡಬೇಕಿಲ್ಲ.
25
56 ಜಿಬಿ ಜೊತೆಗೆ ಹೆಚ್ಚುವರಿ 5 ಜಿಬಿ ಡೇಟಾ ಉಚಿತ
ಜಿಯೋ ಗ್ರಾಹಕರು ಪ್ರತಿ ದಿನ 2 ಜಿಬಿ ಡೇಟಾ ಪ್ಲಾನ್ ರೀಚಾರ್ಜ್ ಮಾಡಿಕೊಂಡರೆ, ಅಂದರೆ 459 ರೂಪಾಯಿ ರೀಚಾರ್ಜ್‌ನಲ್ಲಿ ಪ್ರತಿ ದಿನ 2 ಜಿಬಿ ಡೇಟಾ ಸಿಗಲಿದೆ. 28 ದಿನಗಳ ವ್ಯಾಲಿಟಿಡಿ ಇರಲಿದೆ. ಆದರೆ ಈ ಪ್ಲಾನ್‌ನಲ್ಲಿ ಜಿಯೋ ಬೋನಸ್ ರೂಪದಲ್ಲಿ 5 ಜಿಬಿ ಉಚಿತವಾಗಿ ನೀಡಲಿದೆ. 100 ಎಸ್ಎಂಎಸ್, ಜಿಯೋ ಟಿವಿ, ಜಿಯೋ ಕ್ಲೌಡ್ ಸ್ಟೋರೇಜ್, ಗೂಗಲ್ ಜೆಮಿನಿ ಪ್ರೋ, ಜಿಯೋ ಹಾಟ್‌ಸ್ಟಾರ್ ಸೇರಿದಂತೆ ಹಲವು ಪ್ರಯೋಜನ ಸಿಗಲಿದೆ.
35
20 ಜಿಬಿ ಉಚಿತ ಬೋನಸ್
ಜಿಯೋ ಗ್ರಾಹಕರು 749 ರೂಪಾಯಿ ಅಥವಾ 899 ರೂಪಾಯಿ ರೀಚಾರ್ಜ್ ಮಾಡಿದರೆ 3 ತಿಂಗಳ ವ್ಯಾಲಿಟಿಡಿ ಅಂದರೆ ಮೂರು ತಿಂಗಳ ವ್ಯಾಲಿಟಿಡಿ ಸಿಗಲಿದೆ. ಪ್ರತಿ ದಿನ 2 ಜಿಬಿ ಉಚಿ ಡೇಡಾ ಈ ಪ್ಲಾನ್‌ನಲ್ಲಿ ಇರಲಿದೆ. ವಿಶೇಷ ಅಂದರೆ ಪ್ರತಿ ದಿನದ ಡೇಟಾ ಮುಗಿದರೂ ಚಿಂತೆ ಇಲ್ಲ ಕಾರಣ ಹೆಚ್ಚುವರಿಯಾಗಿ 20 ಜಿಬಿ ಡೇಟಾ ನೀಡಲಾಗಿರುತ್ತದೆ. ಈ ಡೇಟಾ ಬಳಕೆ ಮಾಡಬಹುದು.
ಜಿಯೋ ಗ್ರಾಹಕರು 495 ರೂಪಾಯಿ ಅಥವಾ 545 ರೂಪಾಯಿ ರೀಚಾರ್ಜ್ ಮಾಡಿದರೆ ಪ್ರತಿ ದಿನ 1.5 ಜಿಬಿ ಹಾಗೂ 2 ಜಿಬಿ ಡೇಟಾ ಪ್ರತಿ ದಿನ ಲಭ್ಯವಿದೆ. ಆದರೆ ನಿಮ್ಮ ಪ್ರತಿ ದಿನ ಕೋಟಾ ಮುಗಿದ ಬಳಿಕ 5 ಜಿಬಿ ಉಚಿತ ಡೇಟಾ ನೆರವಾಗಲಿದೆ. 28 ದಿನಗಳ ವ್ಯಾಲಿಟಿ ಹೊಂದಿರುವ ಈ ಪ್ಲಾನ್‌ನಲ್ಲಿ ಹಲವು ಸೌಲಭ್ಯಗಳನ್ನು ಗ್ರಾಹಕರು ಪಡೆಯಬಹುದು.
55
ಡೇಟಾ ರೀಚಾರ್ಜ್ ಕಿರಿಕಿರಿ ಇಲ್ಲ
ವ್ಯಾಲಿಟಿಡಿ ಇದೆ ಆದರೆ ಡೇಟಾ ಮುಗಿದಿದೆ. ಈ ಸಮಸ್ಯೆ ಎದುರಿಸುವ ಮಂದಿ ಬೋನಸ್ ಡೇಟಾ ಇರುವ ಪ್ಲಾನ್ ರೀಚಾರ್ಜ್ ಮಾಡಿಕೊಳ್ಳಬಹುದು. ಇದರಿಂದ ಡೇಟಾ ಕುರಿತು ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಆಪ್ತರಿಗೆ, ಇತರರಿಗೆ ಕರೆ ಮಾಡಿ ಡೇಟಾ ರೀಚಾರ್ಜ್ ಮಾಡಿೊಳ್ಳುವ ಕಿರಿಕಿರಿ ತಪ್ಪಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.