ಮಹಿಳೆಯರಿಗೆ ಸಿಗಲಿದೆ ಬ್ಯಾಂಕ್​ಗಿಂತಲೂ ಅಧಿಕ ಬಡ್ಡಿ: PM Mahila Samman ಯೋಜನೆ ಡಿಟೇಲ್ಸ್​ ಇಲ್ಲಿದೆ

Published : Oct 04, 2025, 06:34 PM IST

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯು ಮಹಿಳೆಯರಿಗೆ ವಾರ್ಷಿಕ 7.5% ಬಡ್ಡಿದರವನ್ನು ನೀಡುತ್ತದೆ. ಈ ಯೋಜನೆಯಡಿ ಗರಿಷ್ಠ 2 ಲಕ್ಷ ರೂಪಾಯಿ ಠೇವಣಿ ಇಟ್ಟರೆ, ಎರಡು ವರ್ಷಗಳ ನಂತರ ₹2,32,044 ಹಿಂಪಡೆಯಬಹುದು. ಈ ಖಾತೆಯನ್ನು ಯಾವುದೇ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ತೆರೆಯಬಹುದಾಗಿದೆ.

PREV
15
ಮಹಿಳೆಯರ ಹೆಸರಿನಲ್ಲಿ ಖಾತೆ

ಈ ಯೋಜನೆ ಅಡಿಯಲ್ಲಿ ಮಹಿಳೆಯರು ಅಥವಾ ಅವರ ಹೆಸರಿನಲ್ಲಿ ಖಾತೆ ತೆರೆದರೆ, ಶೇಕಡಾ 7.5 ಬಡ್ಡಿ ಹಣ ಸಿಗುತ್ತದೆ. ಇದು ಇತರ ಯಾವುದೇ ಬ್ಯಾಂಕ್​ಗಳ ಸಾಮಾನ್ಯ ಬಡ್ಡಿದರಗಳಿಗಿಂತಲು ಹೆಚ್ಚಾಗಿದೆ. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯಡಿಯಲ್ಲಿ, ನೀವು 2 ಲಕ್ಷ ರೂಪಾಯಿ ಹಣ ಇಡಬೇಕಾಗುತ್ತದೆ. ಇದಕ್ಕಿಂತ ಹೆಚ್ಚು ಠೇವಣಿ ಇಡಲು ಸಾಧ್ಯವಿಲ್ಲ. ಎರಡು ವರ್ಷಗಳ ಅವಧಿಯಲ್ಲಿ ಶೇಕಡಾ 7.5ರ ಬಡ್ಡಿದರದಂತೆ ನಿಮ್ಮ ಕೈಗೆ ಒಟ್ಟು 2 ಲಕ್ಷದ 32,044 ರೂಪಾಯಿಗಳು ಸಿಗುತ್ತವೆ. ಎಂದರೆ 32 ಸಾವಿರ ರೂಪಾಯಿಗಳು ಹೆಚ್ಚುವರಿಯಾಗಿ ನಿಮಗೆ ಸಿಗಲಿದೆ. ಮಹಿಳೆಯರೇ ಖುದ್ದಾಗಿಯೂ ಈ ಅಕೌಂಟ್​ ತೆರೆಯಬಹುದು ಇಲ್ಲವೇ ಕುಟುಂಬಸ್ಥರು ತಮ್ಮ ಮನೆಯ ಮಹಿಳೆಯರ ಪರಿವಾಗಿ ಅಕೌಂಟ್​ ಖಾತೆ ಓಪನ್​ ಮಾಡಬಹುದು.

25
2003ರಲ್ಲಿ ಯೋಜನೆ

ಅಂದಹಾಗೆ ಈ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವು 2023 ರಲ್ಲಿ ಜಾರಿಗೆ ತಂದಿದೆ. ಆದರೆ ಈ ಬಗ್ಗೆ ಹಲವರಿಗೆ ಇದರ ಅರಿವು ಇಲ್ಲ. ಅಷ್ಟಕ್ಕೂ ಎರಡು ಲಕ್ಷ ರೂಪಾಯಿ ಇಡುವುದು ಹಲವರಿಗೆ ಸಾಧ್ಯವಾಗದ ಮಾತು. ಆದ್ದರಿಂದ ಈ ಯೋಜನೆಗೆ ಕನಿಷ್ಠ 1 ಸಾವಿರ ರೂಪಾಯಿ ಫಿಕ್ಸ್​ ಮಾಡಲಾಗಿದೆ. ಗರಿಷ್ಠ 2 ಲಕ್ಷ ರೂಪಾಯಿಗಳನ್ನು ಠೇವಣಿ ಇಡಬಹುದು.

35
ಎರಡು ವರ್ಷಗಳಲ್ಲಿ ಮುಕ್ತಾಯ

ಈ ಯೋಜನೆಯು 2 ವರ್ಷಗಳಲ್ಲಿ ಮುಕ್ತಾಯಗೊಳ್ಳುತ್ತದೆ. ಆದಾಗ್ಯೂ, ಖಾತೆ ತೆರೆದ ದಿನಾಂಕದಿಂದ ಒಂದು ವರ್ಷದ ನಂತರ ನೀವು ಅರ್ಹ ಬ್ಯಾಲೆನ್ಸ್‌ನ 40 ಪ್ರತಿಶತವನ್ನು ಹಿಂಪಡೆಯಬಹುದು.

45
ಯಾರ ಹೆಸರಲ್ಲಿ ಬೇಕಾದರೂ...

ಈ ಯೋಜನೆಯಡಿಯಲ್ಲಿ, ನೀವು ಯಾವುದೇ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಮಹಿಳೆಯರ ಹೆಸರಿನಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಖಾತೆಯನ್ನು ತೆರೆಯಬಹುದು. ಪತ್ನಿ, ತಾಯಿ, ಸಹೋದರಿ, ಮಗಳು ಯಾರ ಹೆಸರಿನಲ್ಲಿ ಬೇಕಾದರೂ ಇದನ್ನು ತೆರೆಯಬಹುದು.

55
ಖಾತೆ ತೆರೆಯುವುದು ಹೇಗೆ?

ಇದಕ್ಕಾಗಿ ಮೊದಲು ನೀವು ಬ್ಯಾಂಕ್ ಶಾಖೆಯಲ್ಲಿ ಖಾತೆ ತೆರೆಯಬೇಕು. ಅರ್ಜಿ ನಮೂನೆ, KYC ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ. ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ ಅಥವಾ ಪ್ಯಾನ್ ಕಾರ್ಡ್‌ನಂತಹ KYC ದಾಖಲೆಯನ್ನು ಒದಗಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗೆ ನಿಮ್ಮ ಸಮೀಪದ ಬ್ಯಾಂಕ್​ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ. ನೀವು ಠೇವಣಿ ಮೊತ್ತ ಅಥವಾ ಚೆಕ್‌ನೊಂದಿಗೆ ಪೇ-ಇನ್-ಸ್ಲಿಪ್ ಅನ್ನು ಸಹ ಒದಗಿಸಬೇಕಾಗುತ್ತದೆ.

Read more Photos on
click me!

Recommended Stories