ಭಾರತದ ಟಾಪ್ 5 ಶ್ರೀಮಂತರು ಓದಿದ್ದೆಷ್ಟು? ಡ್ರಾಪ್‌ಔಟ್, ಸೀಟು ಸಿಗದವರಿಗೆ ಅದಾನಿ ಸ್ಪೂರ್ತಿ

Published : Oct 04, 2025, 03:54 PM IST

ಭಾರತದ ಟಾಪ್ 5 ಶ್ರೀಮಂತರು ಓದಿದ್ದೆಷ್ಟು? ಡ್ರಾಪ್‌ಔಟ್, ಸೀಟು ಸಿಗದವರಿಗೆ ಅದಾನಿ ಸ್ಪೂರ್ತಿ, ಭಾರತದ ಶ್ರೀಮಂತರ ಲಿಸ್ಟ್‌ನಲ್ಲಿ ಮುಕೇಶ್ ಅಂಬಾನಿ, ಗೌತಮ್ ಅದಾನಿ ಸೇರಿದಂತೆ ಹಲವರು ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರ ವಿದ್ಯಾಭ್ಯಾಸ ಏನು? 

PREV
16
ಶ್ರೀಮಂತರ ವಿದ್ಯಾರ್ಹತೆ

ಶ್ರೀಮಂತರ ವಿದ್ಯಾರ್ಹತೆ

ಭಾರತದಲ್ಲಿ ಶ್ರೀಮಂತರ ಪಟ್ಟಿ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ. ಆದರೆ ಟಾಪ್ ಫೈವ್ ಪಟ್ಟಿಯಲ್ಲಿ ಮುಕೇಶ್ ಅಂಬಾನಿ, ಗೌತಮ್ ಅದಾನಿ ಸೇರಿದಂತೆ ಪ್ರಮುಖರು ಸ್ಥಾನ ಪಡೆದಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಆದಾಯ, ಐಷಾರಾಮಿ ಲೈಫ್‌ಸ್ಟೈಲ್, ಕೋಟಿ ಕೋಟಿ ರೂಪಾಯಿ ಬೆಲೆಬಾಳುವ ಕಾರು ಸೇರಿದಂತೆ ಹಲವು ಕಾರಣಗಳಿಂದ ಶ್ರೀಮಂತ ಜೀವನ ಪ್ರತಿ ದಿನ ಸುದ್ದಿಯಾಗುತ್ತದೆ. ಇದೀಗ ಭಾರತದ ಶ್ರೀಮಂತರ ವಿದ್ಯಾರ್ಹತೆ ಏನು ಅನ್ನೋದು ಚರ್ಚೆಯಾಗುತ್ತಿದೆ. ಈ ಪೈಕಿ ಅದಾನಿ ಹಲವರಿಗೆ ಸ್ಪೂರ್ತಿಯಾಗಿದ್ದಾರೆ.

26
ಮುಕೇಶ್ ಅಂಬಾನಿ

ಮುಕೇಶ್ ಅಂಬಾನಿ

ರಿಲಯನ್ಸ್ ಇಂಡಸ್ಟ್ರಿ ಚೇರ್ಮೆನ್ ಮುಕೇಶ್ ಅಂಬಾನಿ ಭಾರತದ ಮಾತ್ರವಲ್ಲ ಏಷ್ಯಾದ ಅತೀ ಶ್ರೀಮಂತ ಉದ್ಯಮಿ. 119.5 ಬಿಲಿಯನ್ ಡಾಲರ್ ಆಸ್ತಿ ಹೊಂದಿರುವ ಮುಕೇಶ್ ಅಂಬಾನಿ, ಅತ್ಯಂತ ಸರಳ ವ್ಯಕ್ತಿ. ಮುಕೇಶ್ ಅಂಬಾನಿ ಉತ್ತಮ ವಿದ್ಯಾರ್ಹತೆ ಹೊಂದಿದ್ದಾರೆ. ಮುಕೇಶ್ ಅಂಬಾನಿ ಕೆಮಿಕಲ್ ಎಂಜಿನೀಯರ್. ಮುಂಬೈನ ಯುನಿವರ್ಸಿಟಿ ಇನ್ಸ್‌ಸ್ಟಿಟ್ಯೂಬ್ ಆಫ್ ಕೆಮಿಕಲ್ ಟೆಕ್ನಾಲಜಿಯಲ್ಲಿ ಪದವಿ ಪಡೆದಿದ್ದಾರೆ. ಬಳಿಕ ಅಮರಿಕದ ಸ್ಟಾಂಡ್‌ಪೋರ್ಡ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದಿದ್ದಾರೆ.

36
ಗೌತಮ್ ಅದಾನಿ ಹಲವರಿಗೆ ಸ್ಪೂರ್ತಿ

ಗೌತಮ್ ಅದಾನಿ ಹಲವರಿಗೆ ಸ್ಪೂರ್ತಿ

ಗೌತಮ್ ಅದಾನಿ ಭಾರತದ 2ನೇ ಶ್ರೀಮಂತ ವ್ಯಕ್ತಿ. ಅಂಬಾನಿ ಹಾಗೂ ಅದಾನಿಗೆ ಶ್ರೀಮಂತಿಕೆಯಲ್ಲಿ ಭಾರಿ ಪೈಪೋಟಿ ಇದೆ. ಗೌತಮ್ ಅದಾನಿ ಸಾಮಾನ್ಯ ವಿದ್ಯಾರ್ಥಿಯಂತೆ ಶಾಲೆ ಪೂರೈಸಿದ್ದರು. ಬಳಿಕ ಮುಂಬೈ ಕಾಲೇಜಿಗೆ ಅರ್ಜಿ ಹಾಕಿದ್ದರು. ಆದರೆ ಅದಾನಿ ಅರ್ಜಿ ತರಿಸ್ಕೃತಗೊಂಡಿತ್ತು. ಮುಂಬೈ ಕಾಲೇಜಿನಲ್ಲಿ ಅದಾನಿಗೆ ಸೀಟು ಸಿಗಲಿಲ್ಲ. ಬಳಿಕ ಗುಜರಾತ್ ವಿಶ್ವವಿದ್ಯಾಲಯದಲ್ಲಿ ಬ್ಯಾಚುಲರ್ ಆಫ್ ಕಾಮರ್ಸ್‌ಗೆ ಅಡ್ಮಿಷನ್ ಮಾಡಿಕೊಂಡಿದ್ದರು. ಆದರೆ ಸೆಕೆಂಡ್ ಇಯರ್‌ಗೆ ಡ್ರಾಪ್ಔಟ್ ಆಗಿದ್ದಾರೆ. ಹೀಗೆ ಡ್ರಾಪ್ಔಟ್ ಆದ ಗೌತಮ್ ಅದಾನಿ ಇದೀಗ ಅತೀ ದೊಡ್ಡ ಉದ್ಯಮ ಸಾಮ್ರಾಜ್ಯ ಕಟ್ಟಿದ್ದಾರೆ.

46
ಶಿವ್ ನಾಡರ್

ಶಿವ್ ನಾಡರ್

ಹೆಚ್‌ಸಿಎಲ್ ಸಂಸ್ಥೆಯ ಸಂಸ್ಥಾಪ ಶಿವ್ ನಾಡರ್ ಸಂಪತ್ತು 31.6 ಬಿಲಿಯನ್ ಡಾಲರ್. ಕುಂಬಕೋಣಂದಲ್ಲಿ ಹೈಸ್ಕೂಲ್, ಮದುರೈನ ಅಮೆರಿಕನ್ ಕಾಲೇಜಿನಲ್ಲಿ ಪಿಯುಸಿ, ಕೊಯಂಬತ್ತೂರಿನ ಪಿಎಸ್‌ಜಿ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಿಕಲ್ ಎಂಜಿನೀಯರಿಂಗ್ ಪದವಿ ಪಡೆದಿದ್ದಾರೆ.

56
ಸಾವಿತ್ರಿ ಜಿಂದಾಲ್

ಸಾವಿತ್ರಿ ಜಿಂದಾಲ್

ಜಿಂದಾಲ್ ಗ್ರೂಪ್ ಚೇರ್ಮೆನ್ ಆಗಿರುವ ಸಾವಿತ್ರಿ ಜಿಂದಾಲ್ ಪತಿ ಓಂ ಪ್ರಕಾಶ್ ಜಿಂದಾಲ್ ಅಕಾಲಿಕ ಮರಣದ ಬಲಿಕ ಕಂಪನಿಯ ಜವಾಬ್ದಾರಿ ಹೊತ್ತುಕೊಂಡರು. ಪದವಿ ವಿದ್ಯಾಭ್ಯಾಸ ಪೂರೈಸಿರುವ ಸಾವಿತ್ರಿ ಜಿಂದಾಲ್ ಮಹಾರಾಜ ಅಗ್ರಸೆನ್ ಮೆಡಿಕಲ್ ಕಾಲೇಜಿನ ಅದ್ಯಕ್ಷರಾಗಿದ್ದಾರೆ. ಸಾವಿತ್ರಿ ಜಿಂದಾಲ್ ಆಸ್ತಿ 40 ಬಿಲಿಯನ್ ಅಮೆರಿಕನ್ ಡಾಲರ್.

66
ದಿಲೀಪ್ ಸಾಂಘ್ವಿ

ದಿಲೀಪ್ ಸಾಂಘ್ವಿ

ಫಾರ್ಮಾಸಿಟಿಕಲ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ದಿಲೀಪ್ ಸಾಂಘ್ವಿ, ಕೋಲ್ಕತಾದ ಭವಾನಿಪುರ ಎಜುಕೇಶನ್ ಸೊಸೈಟಿಯ ವಿಶ್ವವಿದ್ಯಾಲಯದಲ್ಲಿ ಕಾಮರ್ಸ್ ಪದವಿ ಪಡೆದಿದ್ದಾರೆ. ಭಾರತದ ಪ್ರತಿಷ್ಠಿತ ಹಾಗೂ ನಂಬಿಕಸ್ಥ ಫಾರ್ಮಾ ಕಂಪನಿ ಮುನ್ನಡೆಸುತ್ತಿದ್ದಾರೆ.

Read more Photos on
click me!

Recommended Stories