ಜಿಯೋ, ಏರ್‌ಟೈಲ್, ವೊಡಾಫೋನ್‌ಗೆ ಗುನ್ನಾ ಕೊಟ್ಟ BSNL: ಅಚ್ಚರಿಯ ಸೇವೆಗೆ ಗ್ರೀನ್ ಸಿಗ್ನಲ್

Published : Oct 04, 2025, 12:23 PM IST

Amazing service from BSNL: ಈ ಸೌಲಭ್ಯವು ಸೆಲ್ಯುಲಾರ್ ಕವರೇಜ್ ಕಡಿಮೆ ಇರುವ ಪ್ರದೇಶಗಳಲ್ಲಿ ವೈ-ಫೈ ನೆಟ್‌ವರ್ಕ್ ಮೂಲಕ ಸ್ಪಷ್ಟವಾದ ವಾಯ್ಸ್ ಕಾಲ್‌ಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ. ಈ ಹೊಸ ಹೆಜ್ಜೆಯು ಖಾಸಗಿ ಟೆಲಿಕಾಂ ಕಂಪನಿಗಳಿಗೆ ಸ್ಪರ್ಧೆ ನೀಡುವ BSNLನ ಪ್ರಯತ್ನವಾಗಿದೆ.

PREV
16
ವಾಯ್ಸ್ ಓವರ್ ವೈ-ಫೈ

ದೇಶದ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಭಾರತದ ಹೊಸ ಸರ್ಕಲ್‌ಗಳಲ್ಲಿನ ಬಳಕೆದಾರರಿಗಾಗಿ ವಾಯ್ಸ್ ಓವರ್ ವೈ-ಫೈ (VoWiFi) ಸೇವೆಯನ್ನು ಪರಿಚಯಿಸಿದೆ. ಸೆಲ್ಯುಲಾರ್ ಕವರೇಜ್ ಇಲ್ಲದಿದ್ದರೂ ಗ್ರಾಹಕರಿಗೆ ವೈ-ಫೈ ನೆಟ್‌ವರ್ಕ್ ಮೂಲಕ ವಾಯ್ಸ್ ಕಾಲ್‌ಗಳನ್ನು ಮಾಡಲು ಮತ್ತು ಸ್ವೀಕರಿಸಲು ಅನುವು ಮಾಡಿಕೊಡುವುದೇ ವಾಯ್ಸ್ ಓವರ್ ವೈ-ಫೈ (VoWiFi) ಸೇವೆಯಾಗಿದೆ.

26
BSNL

ಜಿಯೋ, ಏರ್‌ಟೆಲ್‌ನಂತಹ ಖಾಸಗಿ ಟೆಲಿಕಾಂ ಆಪರೇಟರ್‌ಗಳು ಬಹಳ ಹಿಂದಿನಿಂದಲೂ ವಾಯ್ಸ್ ವೈ-ಫೈ ಸೌಲಭ್ಯವನ್ನು ನೀಡುತ್ತಿವೆ. ಈಗ ಸಾರ್ವಜನಿಕ ವಲಯದ BSNL ಕೂಡ ಈ ವ್ಯವಸ್ಥೆಯನ್ನು ಪರಿಚಯಿಸುತ್ತಿರುವುದು ವಿಶೇಷ. ಈ ಮೂಲಕ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಬಿಎಸ್ಎನ್ಎಲ್ ತೀವ್ರ ಸ್ಪರ್ಧೆ ನೀಡಲು ಮುಂದಾಗಿದೆ. ಇತ್ತೀಚೆಗಷ್ಟೇ ಬಿಎಸ್‌ಎನ್ಎಲ್ 4ಜಿ ನೆಟ್‌ವರ್ಕ್‌ಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು.

36
ಏನಿದು ವಾಯ್ಸ್ ಓವರ್ ವೈ-ಫೈ?

ಅಕ್ಟೋಬರ್ 2 ರಂದು ನಡೆದ ರಜತ ಮಹೋತ್ಸವದ ಅಂಗವಾಗಿ ಡಿಒಟಿ ಕಾರ್ಯದರ್ಶಿ ನೀರಜ್ ಮಿತ್ತಲ್ ಅವರು ಪಶ್ಚಿಮ ಮತ್ತು ದಕ್ಷಿಣ ವಲಯದ ಸರ್ಕಲ್‌ಗಳಲ್ಲಿ BSNLನ VoWiFi ಸೇವೆಗಳ ಸಾಫ್ಟ್ ಲಾಂಚ್ ಘೋಷಿಸಿದರು. BSNL ಮುಂಬೈನಲ್ಲಿ 4G ಸೇವೆಗಳನ್ನು ಪ್ರಾರಂಭಿಸಿದ್ದು, ಭಾರತದಾದ್ಯಂತ ಇ-ಸಿಮ್ ಸೇವೆಗಳನ್ನು ವಿಸ್ತರಿಸಿದೆ. ಈ ಹೊಸ ಘೋಷಣೆ BSNLನ ಡಿಜಿಟಲ್ ಅಭಿವೃದ್ಧಿಯಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.

46
ವೈ-ಫೈ ಕಾಲಿಂಗ್ ಸೌಲಭ್ಯ

ವೈ-ಫೈ ಕಾಲಿಂಗ್ ಸೌಲಭ್ಯದಿಂದ BSNL ಬಳಕೆದಾರರು ಕಡಿಮೆ ಸೆಲ್ಯುಲಾರ್ ಸಿಗ್ನಲ್ ಇರುವ ಪ್ರದೇಶಗಳಲ್ಲೂ ಸಾಮಾನ್ಯ ವಾಯ್ಸ್ ಕಾಲ್‌ಗಳನ್ನು ಮಾಡಬಹುದಾಗಿದೆ. ಮೊಬೈಲ್ ಸಿಗ್ನಲ್ ದುರ್ಬಲವಾದಾಗ ಕರೆಗಳನ್ನು ರೂಟ್ ಮಾಡಲು ಸ್ವಯಂಚಾಲಿತವಾಗಿ ವೈ-ಫೈಗೆ ಬದಲಾಗುವುದೇ ಈ ತಂತ್ರಜ್ಞಾನ. ಭಾರತಿ ಏರ್‌ಟೆಲ್, ರಿಲಯನ್ಸ್ ಜಿಯೋ, ಮತ್ತು ವೊಡಾಫೋನ್ ಐಡಿಯಾ (Vi) ನಂತಹ ಪ್ರಮುಖ ಟೆಲಿಕಾಂ ಆಪರೇಟರ್‌ಗಳು ಕಳೆದ ಕೆಲವು ವರ್ಷಗಳಿಂದ ವೈ-ಫೈ ಕಾಲಿಂಗ್ ಸಪೋರ್ಟ್ ನೀಡುತ್ತಿವೆ. ಇದಕ್ಕೆ ಸಾಮಾನ್ಯವಾಗಿ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ.

ಇದನ್ನೂ ಓದಿ: ಜಿಯೋದಿಂದ ದಿನಕ್ಕೆ 3 ರೂ.ಗಿಂತಲೂ ಕಡಿಮೆ ಬೆಲೆಯ ಪ್ರಿಪೇಯ್ಡ್ ಪ್ಲಾನ್

56
ಹಲವು ಹೊಸ ಸೇವೆಗಳೊಂದಿಗೆ BSNL

ಇತ್ತೀಚೆಗೆ BSNL ತಮಿಳುನಾಡು ಸರ್ಕಲ್‌ನಲ್ಲಿ ಇ-ಸಿಮ್ ಸೇವೆಗಳನ್ನು ನೀಡಲು ಪ್ರಾರಂಭಿಸಿದೆ. ಟಾಟಾ ಕಮ್ಯುನಿಕೇಷನ್ಸ್‌ನೊಂದಿಗೆ ಕೈಜೋಡಿಸಿ BSNL ಇ-ಸಿಮ್ ಸೇವೆಗಳನ್ನು ಒದಗಿಸುತ್ತಿದೆ. ಟಾಟಾ ಕಮ್ಯುನಿಕೇಷನ್ಸ್‌ನ 'ಮೂವ್' ಪ್ಲಾಟ್‌ಫಾರ್ಮ್ ಇ-ಸಿಮ್ ಸೇವೆಗಳನ್ನು ತಲುಪಿಸುತ್ತಿದೆ. ಆಗಸ್ಟ್‌ನಲ್ಲಿ BSNL ದೆಹಲಿಯಲ್ಲಿ 4G ನೆಟ್‌ವರ್ಕ್ ಅನ್ನು ಪ್ರಾರಂಭಿಸಿತ್ತು.

ಇದನ್ನೂ ಓದಿ: ಪಾಕಿಸ್ತಾನದಲ್ಲಿಲ್ಲ Jio, Vi, Airtel; ಇಲ್ಲಿಯ ನೆಟ್‌ವರ್ಕ್ ಟೆಲಿಕಾಂ ಕಂಪನಿಗಳು ಯಾವವು?

66
BSNL ಸಿಮ್ ಕಾರ್ಡ್ ಮಾರಾಟ

1.65 ಲಕ್ಷ ಅಂಚೆ ಕಚೇರಿಗಳ ಮೂಲಕ BSNL ಸಿಮ್ ಕಾರ್ಡ್ ಮಾರಾಟ ಮತ್ತು ಮೊಬೈಲ್ ರೀಚಾರ್ಜ್ ಸೇವೆಗಳನ್ನು ಪ್ರಾರಂಭಿಸಲು ಟೆಲಿಕಾಂ ಕಂಪನಿಯು ಈ ತಿಂಗಳ ಆರಂಭದಲ್ಲಿ ಅಂಚೆ ಇಲಾಖೆಯೊಂದಿಗೆ (DoP) ಒಪ್ಪಂದಕ್ಕೆ ಸಹಿ ಹಾಕಿದೆ. ಇತ್ತೀಚೆಗೆ ಒಡಿಶಾದ ಜಾರ್ಸುಗುಡಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು BSNLನ ಸಂಪೂರ್ಣ ಸ್ವದೇಶಿ 4G ನೆಟ್‌ವರ್ಕ್ ಅನ್ನು ಉದ್ಘಾಟಿಸಿದ್ದರು.

ಇದನ್ನೂ ಓದಿ: ಅಂಬಾನಿ, ಮಿತ್ತಲ್ ನಿದ್ದೆಗೆಡಿಸಿದ BSNL, 47,000 ಕೋಟಿ ರೂ ಹೂಡಿಕೆ, 1 ರೂ ರಿಚಾರ್ಜ್ ಪ್ಲಾನ್

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories