ಇನ್ಫೋಸಿಸ್ ಅಧ್ಯಕ್ಷೆ ಸುಧಾ ಮೂರ್ತಿ ತರಕಾರಿ ಮಾರುವ ಫೋಟೋ ವೈರಲ್!

First Published | Sep 14, 2020, 3:37 PM IST

ದೇಶದ ದಿಗ್ಗಜ ಕಂಪನಿಗಳಲ್ಲೊಂದಾದ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಭಾನುವಾರ ಸೋಶಿಯಲ್ ಮೀಡಿಯಾದಲ್ಲಿ ಆಭರೀ ಟ್ರೆಂಡ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರ ಫೋಟೋ ಒಂದು ಭಾರಿ ವೈರಲ್ ಆಗಿದ್ದು, ಇದರಲ್ಲಿ ಅವರು ತರಕಾರಿ ಮಾರುತ್ತಿರವ ದೃಶ್ಯವಿದೆ. ಇದರೊಂದಿಗೆ ಕೋಟ್ಯಾಧಿಪತಿಯಾಗಿದ್ದರೂ ಇಷ್ಟು ಸರಳ ಬದುಕು ನಡೆಸುವುದು ಸುಲಭದ ಕೆಲಸವಲ್ಲ, ಆದ್ರೆ ಸುಧಾ ಮೂರ್ತಿಯವರ ಜೀವನ ಶೈಲಿಯೇ ಅಂತಹುದು ಎಂದು ಬರೆಯಲಾಗಿದೆ. ಜೊತೆಗೆ ಇವರು ವರ್ಷಕ್ಕೊಂದು ಬಾರಿ ಈ ಕೆಲಸ ಮಾಡುತ್ತಾರೆ ಎಂಬ ಸಂದೇಶವೂ ಕಳುಹಿಸಲಾಗಿದೆ.
 

ಆದರೆ ನಿಮಗೆ ತಿಳಿದಿರಲಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಸುಧಾ ಮೂರ್ತಿಯವರ ಫೋಟೋ ನಾಲ್ಕು ವರ್ಷ ಹಳೆಯದ್ದು. ಗೂಗಲ್ ರಿವರ್ಸ್ ಇಮೇಜ್ ಸರ್ಚ್‌ನಲ್ಲಿ ಹುಡುಕಾಡಿದಾಗ ಈ ಫೋಟೋ 2016ರದ್ದೆದು ತಿಳಿದು ಬಂದಿದೆ.
ಇನ್ನು ಈ ಫೋಟೋ ಹಳಯದ್ದಾಗಿರಬಹುದು. ಆದರೆ ಪರೋಪಕಾರಿ ಮನಸ್ಸುಳ್ಳ ಅವರು ಪ್ರತಿವರ್ಷ ಬೆಂಗಳೂರಿನ ಜಯನಗರದ ತಮ್ಮ ನಿವಾಸದ ಬಳಿ ಇರುವ ರಾಘವೇಂದ್ರ ಸ್ವಾಮಿ ಮಂದಿರದ ಬಳಿ ನಡೆಯುವ ರಾಘವೇಂದ್ರ ಆರಾಧನಾ ಉತ್ಸವದಲ್ಇ ತಪ್ಪದೇ ಕರ ಸೇವೆ ಮಾಡುತ್ತಾರೆ.
Tap to resize

ಬೆಳಗ್ಗೆ ನಾಲ್ಕು ಗಂಟೆಗೆ ತಮ್ಮ ಸಹಯೋಗಿ ಜೊತೆ ದೇವಸ್ಥಾನದ ಭೋಜನಾಲಯಕ್ಕೆ ಆಗಮಿಸಿ, ಅಲ್ಲಿನ ಹಾಗೂ ಅಕ್ಕ ಪಕ್ಕದಲ್ಲಿರುವ ಕೋಣೆಗಳನ್ನು ಸ್ವಚ್ಛಗೊಳಿಸುತ್ತಾರೆ.
ಇಷ್ಟೇ ಅಲ್ಲದೇ ಅಲ್ಲಿನ ಅಡುಗೆ ಪಾತ್ರೆಗಳನ್ನು ತೊಳೆಯುವುದು, ಶೆಲ್ಫ್‌ಗಳ ಸ್ವಚ್ಛತೆ, ತರಕಾರಿ ಸ್ಟಾಕ್ ಪಡೆದು ಅವುಗಳನ್ನು ಕತ್ತರಿಸುವುದು ಹೀಗೆ ತಮ್ಮಿಂದಾಗುವ ಸೇವೆ ಮಾಡುತ್ತಾರೆ.
ಇಷ್ಟೇ ಅಲ್ಲದೇ ತಮ್ಮ ಜೊತೆ ಇರುವವರೊಂದಿಗೆ ಸೇರಿ ತರಕಾರಿ ಹಾಗೂ ಅನ್ನದ ದೊಡ್ಡ ಪಾತ್ರೆಗಳನ್ನು ದೇವಸ್ಥಾನದ ಸ್ಟೋರ್‌ ರೂಂಗೆ ತಲುಪಿಸಲೂ ಸಹಾಯಮಾಡುತ್ತಾರೆ.
2013ರಲ್ಲಿ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಸುಧಾ ಮೂರ್ತಿ ಹಣ ಕೊಡುವುದು ಸುಲಭ, ಆದರೆ ನಾವೇ ನಮ್ಮ ಕೈಯ್ಯಾರೆ ಇಂತಹ ಸೇವೆ ಮಾಡುವುದು ಕಷ್ಟವೆನಿಸುತ್ತದೆ. ಇನ್ನು ದೇವಸ್ಥಾನದ ಆಯೋಜಕರು ಹೇಳಿರುವ ಅನ್ವಯ ಸುಧಾ ಮೂರ್ತಿ ಪ್ರತಿ ವರ್ಷ ಮೂರು ದಿನ ಸ್ಟೋರ್‌ ರೂಂನ ಮ್ಯಾನೇಜರ್‌ನಂತೆ ಕಾರ್ಯ ನಿರ್ವಹಿಸುತ್ತಾರೆಂಬುವುದು ತಿಳಿದು ಬಂದಿದೆ.
ಇನ್ನು ವೈರಲ್ ಆದ ಓಟೋ ಬಗ್ಗೆ ಹೇಳುವುದಾದರೆ ಇಲ್ಲಿ ಸುಧಾ ಮೂರ್ತಿಯವರು ತರಕಾರಿ ಮಾರುತ್ತಿಲ್ಲ. ಬದಲಾಗಿ ದೇವಸ್ಥಾನಕ್ಕೆ ಮೂರು ದಿನಕ್ಕೆ ಬರುವ ತರಕಾರಿಯನ್ನು ಪರಿಶೀಲಿಸುತ್ತಿದ್ದಾರೆ. ಇದಕ್ಕಾಗಿ ಅವರು ತರಕಾರಿ ಮಧ್ಯೆ ನೆಲದ ಮೇಲೆ ಕುಳಿತ್ತಿದ್ದಾರೆ.
ಇನ್ನು ಕನ್ನಡತಿ, ಇನ್ಫೋಸಿಸ್ ಅಧ್ಯಕ್ಷೆ ಸುಧಾ ಮೂರ್ತಿ ಇಂಜಿನಿಯರಿಂಗ್ ಕಲಿತಿದ್ದಾರೆ. 1972 ಅವರು ಪದವಿ ಪಡೆದಿದ್ದರು. ಇನ್ನು ಅವರು ಯಾವ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪೂರೈಸಿದ್ದರೋ ಆ ಕಾಲೇಜಿನಲ್ಲಿ ಅವರನ್ನು ಹೊರತುಪಡಿಸಿ ಬೇರೆ ಯುವತಿಯರಿರಲಿಲ್ಲ.
BVB College of Engineering and Technology ಸೇರುವುದಕ್ಕೂ ಮುನ್ನ ಪ್ರಾಂಶುಪಾಲರು ಅವರೆದುರು ಮೂರು ಷರತ್ತುಗಳನ್ನಿಟ್ಟಿದ್ದರು. ಮೊದಲನೆಯದ್ದು ಪದವಿ ಪೂರೈಸುವವರೆಗೂ ಸೀರೆಯುಟ್ಟುಕೊಂಡೇ ಕಾಲೇಜಿಗೆ ಬರಬೇಕು. ಎರಡನೆಯದ್ದಾಗಿ ಕಾಲೇಜು ಕ್ಯಾಂಟೀನ್‌ಗೆ ಹೋಗುವಂತಿಲ್ಲ ಹಾಗೂ ಮೂರನೆಯದ್ದು, ಕಾಳೇಜಿನ ಹುಡುಗರೊಂದಿಗೆ ಮಾತನಾಡುವಂತಿಲ್ಲ. ಆದರೆ ಮೊದಲೆರಡು ಷರತ್ತು ಪಾಲಿಸಿದ್ದೆ, ಮೂರನೆಯದ್ದು ಆಗಲಿಲ್ಲ ಎಂದು ಸುಧಾ ಮೂರ್ತ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಮೊದಲ ವರ್ಷದಲ್ಲಿ ಅವರು ಕಾಲೇಜಿನಲ್ಲಿ ಟಾಪರ್ ಆದಾಗ ಎಲ್ಲಾ ಹುಡುಗರು ತಾವೇ ಖುದ್ದಾಗಿ ಬಂದು ಅವರನ್ನು ಮಾತನಾಡಿದ್ದರಂತೆ.

Latest Videos

click me!