ಇಲ್ಲಿನ ಶಿಕ್ಷಕರು ಪಿಎಂ ಮೋದಿಗಿಂತಲೂ ಹೆಚ್ಚು ಸ್ಯಾಲರಿ ಪಡೆಯುತ್ತಾರೆ!

First Published | Sep 6, 2020, 4:51 PM IST

ಇಂದು 5 ಸೆಪ್ಟೆಂಬರ್ ಭಾರತದಲ್ಲಿ ಶಿಕ್ಷಕರ ದಿನಾಚರಣೆ ಮಾಡಲಾಗುತ್ತದೆ. ಅನೇಕ ಕಾರಣಗಳಿಂದ ಈ ಬಾರಿ ಶಿಕ್ಷಕರ ದಿನ ವಿಭಿನ್ನವಾಗಿ ಆಚರಿಸಲಾಗುತ್ತದೆ. ಈ ಹಿಂದೆ ಇಂದಿನ ದಿನ ಕಾರ್ಯಕ್ರಮಗಳು ನಡೆಯುತ್ತಿದ್ದರೆ, ಈ ಬಾರಿ ಶಾಲೆಗಳು ಬಂದ್ ಆಗಿವೆ. ಹೀಗಿರುವಾಗ ವಿದ್ಯಾರ್ಥಿಗಳು ಶಿಕ್ಷಕರಿಗೆ ಆನ್‌ಲೈನ್ ಮೂಲಕವೇ ವಿಶ್ ಮಾಡಲಿದ್ದಾರೆ. ಇನ್ನು ಭಾರತದಲ್ಲಿ ಶಿಕ್ಷಕರಿಗೆ ಬಹಳಷ್ಟು ಗೌರವಿಸಲಾಗುತ್ತದೆ. ಅದರೆ ಹಣದ ವಿಚಾರ ಬಂದ ಕೂಡಲೇ ಶಿಕ್ಷಕರು ಕೊಂಚ ಡಲ್ ಆಗುತ್ತಾರೆ. ಸರ್ಕಾರಿ ನೌಕರಿ ಆದರೆ ಪರ್ವಾಗಿಲ್ಲ, ಆದರೆ ಖಾಸಗಿ ಶಾಲೆಯ ಶಿಕ್ಷಕರ ಪರಿಸ್ಥಿತಿ ವಿಭಿನ್ನವಾಗಿದೆ. ಆದರೆ ಕೆಲ ದೇಶಗಳಲ್ಲಿ ಶಿಕ್ಷಕರ ವೃತ್ತಿ ಎಂದರೆ ಲಾಟರಿ ಹೊಡೆದಂತೆ, ಇಲ್ಲಿ ಅವರ ಸ್ಯಾಲರಿ ಪಿಎಂ ಮೋದಿಗಿಂತಲೂ ಅಧಿಕವಾಗಿರುತ್ತದೆ. ಇಲ್ಲಿದೆ ನೋಡಿ ಅಂತಹ ದೇಶಗಳ ಪಟ್ಟಿ.

ಸ್ವಿಡ್ಜರ್ಲೆಂಡ್: ಈ ದೇಶದ ಜೂರಿಕ್ ಏರಿಯಾದಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರಿಗೆ ವಾರ್ಷಿಕ 80 ಲಕ್ಷಕ್ಕೂ ಅಧಿಕ ವೇತನ ನೀಡಲಾಗುತ್ತದೆ. ಇಲ್ಲಿನ 13 ತಿಂಗಳ ವೇತನ ಪ್ರಣಾಳಿಕೆ ಅನ್ವಯ ಶಿಕ್ಷಕರು ವಾರ್ಷಿಕವಾಗಿ ಎಂಭತ್ತು ಲಕ್ಷ ಸಂಪಾದಿಸುತ್ತಾರೆ. ಆದರೆ ಜೂರಿಕ್ ಹೊಗೆ ಕಾರ್ಯ ನಿರ್ವಹಿಸುವ ಶಿಕ್ಷಕರಿಗೆ ವಾರ್ಷಿಕವಾಗಿ ಹನ್ನೊಂದು ಲಕ್ಷ ವೇತನ ನೀಡಲಾಗುತ್ತದೆ.
ಲಕ್ಸೆಂಬರ್ಗ್: ಈ ಯೂರೋಪಿಯನ್ ದೇಶದಲ್ಲಿ ಶಿಕ್ಷಕರ ವಾರ್ಷಿಕ ಆದಾಯ 73 ಲಕ್ಷ 18 ಸಾವಿರವಿರುತ್ತದೆ. ಪ್ರಾಥಮಿಕ ಶಾಲಾ ಶಿಕ್ಷಕರ ಆರಂಭಿಕ ವೇತನ 51 ಲಕ್ಷದಿಂದ ಆರಂಭವಾಗುತ್ತದೆ, ಅನುಭವ ಹೆಚ್ಚಾದಂತೆ ವೇತನವೂ ಹೆಚ್ಚಳವಾಗುತ್ತದೆ.
Tap to resize

ಕೆನಡಾ: ಇಲ್ಲಿ ಶಿಕ್ಷಕರ ವೇತನ ವಾರ್ಷಿಕ 54 ಲಕ್ಷವಿಇರುತ್ತದೆ. ಇಲ್ಲಿ ಕೂಡಾ ನುನಾವುತ್‌ನ ಶಾಲೆಯ ಶಿಕ್ಷಕರಿಗೆ ಹೆಚ್ಚು ವೇತನ ನೀಡಲಾಗುತ್ತದೆ.
ಜರ್ಮನಿ: ಇಲ್ಲಿ ಶಿಕ್ಷಕರ ಸರಾಸರಿ ವೇತನ 51 ಲಕ್ಷವಿರುತ್ತದೆ. ಇಲ್ಲಿ ಆರಂಭದಲ್ಲಿ ಶಿಕ್ಷಕರಿಗೆ 32 ಲಕ್ಷ ಪ್ಯಾಕೇಜ್ ನೀಡಲಾಗುತ್ತದೆ. ಇದು ಅನುಭವ ಹೆಚ್ಚಾದಂತೆ ವೃದ್ಧಿಯಾಗುತ್ತದೆ.
ನೆದರ್ಲೆಂಡ್: ಇಲ್ಲಿ ಶಿಕ್ಷಕರ ಸರಾಸರಿ ವೇತನ 49 ಲಕ್ಷವಿರುತ್ತದೆ. ಆದರೆ ಅನುಭವಸ್ಥ ಶಿಕ್ಷಕರಿಗೆ 71 ಲಕ್ಷ ಪ್ಯಾಕೇಜ್ ನೀಡುತ್ತಾರೆ.
ಯುನೈಟೆಡ್ ಸ್ಟೇಟ್ಸ್: ಇಲ್ಲಿ ಶಿಕ್ಷಕರಿಗೆ ಸಾಮಾನ್ಯವಾಗಿ ನಲ್ವತ್ತನಾಲ್ಕು ಲಕ್ಷ ವೇತನ ನೀಡುತ್ತಾರೆ. ಅದರಲ್ಲೂ ನ್ಯೂಯಾರ್ಕ್‌ನ ಶಿಕ್ಷಕರಿಗೆ ಅತ್ಯಧಿಕ ವೇತನ ನೀಡಲಾಗುತ್ತದೆ.
ಐರ್ಲೆಂಡ್: ಇಲ್ಲಿನ ಶಿಕ್ಷಕರಿಗೆ 39 ಲಕ್ಷ ವಾರ್ಷಿಕ ವೇತನ ನೀಡಲಾಗುತ್ತದೆ.

Latest Videos

click me!