
ಬಜಾಜ್ ಫಿನ್‌ಸರ್ವ್ ಇದರ ಮಾತೃಸಂಸ್ಥೆಯಾಗಿದೆ. ಸೆ.9 ಅಂದರೆ ಸೋಮವಾರದಿಂದ ಇದರ ಐಪಿಓ ಬಿಡ್ಡಿಂಗ್ ಆರಂಭವಾಗಲಿದೆ. ಸೆ.11ಕ್ಕೆ ಮುಕ್ತಾಯವಾಗಲಿದೆ. ಆರಂಭಿಕ ಸಾರ್ವಜನಿಕ ಹೂಡಿಕೆಯಿಂದ ಕಂಪನಿ 6560 ಕೋಟಿ ರೂಪಾಯಿಯನ್ನು ಸಂಗ್ರಹ ಮಾಡುವ ಗುರಿ ಹೊಂದಿದೆ. ಪ್ರತಿ ಷೇರಿಗೆ 66-70 ರೂಪಾಯಿ ನಿಗದಿ ಮಾಡಿದೆ. ಪ್ರತಿ ವ್ಯಕ್ತಿ ಕನಿಷ್ಠ 214 ಷೇರನ್ನು ಖರೀದಿ ಮಾಡಬೇಕಿದೆ. ಮಾರುಕಟ್ಟೆ ಅಬ್ಸರ್ವರ್‌ಗಳ ಪ್ರಕಾರ, ಬಜಾಜ್ ಹೌಸಿಂಗ್ ಫೈನಾನ್ಸ್‌ನ ಷೇರುಗಳು ಪಟ್ಟಿ ಮಾಡದ ಮಾರುಕಟ್ಟೆಯಲ್ಲಿ ₹51 ಪ್ರೀಮಿಯಂನೊಂದಿಗೆ ವಹಿವಾಟು ನಡೆಸುತ್ತಿವೆ, ಇದು IPO ಬೆಲೆಗೆ 73% ರಷ್ಟು ಪ್ರೀಮಿಯಂ ಅನ್ನು ಸೂಚಿಸಿದೆ.
ದೇಶದ ಅತ್ಯಂತ ಪ್ರಮುಖ ದ್ವಿಚಕ್ರ ವಾಹನ ಕಂಪನಿಯಾಗಿರುವ ಹೀರೋ ಮೋಟೋಕಾರ್ಪ್‌ನ ಅಂಗಸಂಸ್ಥೆಯಾಗಿರುವ ಹೀರೋ ಫಿನ್‌ಕಾರ್ಪ್ ಕೂಡ ಐಪಿಓ ತಯಾರಿಯಲ್ಲಿದೆ. ಐಪಿಓ ಮೂಲಕ 3668 ಕೋಟಿ ರೂಪಾಯಿ ಸಂಗ್ರಹ ಮಾಡುವ ಗುರಿಯನ್ನು ಕಂಪನಿ ಹೊಂದಿದೆ. ಇತ್ತೀಚೆಗೆ ಡಿಆರ್‌ಎಚ್‌ಪಿಯನ್ನೂ ಕೂಡ ಸೆಬಿಗೆ ಸಲ್ಲಿಕೆ ಮಾಡಿದೆ.
ಎಚ್‌ಡಿಎಫ್ ಬ್ಯಾಂಕ್‌ನ ಮಾತೃಸಂಸ್ಥೆಯಾಗಿರುವ ಎಚ್‌ಡಿಬಿ ಫೈನಾನ್ಶಿಯಲ್ ಸರ್ವೀಸಸ್ ಐಪಿಒ ಮೂಲಕ 9 ರಿಂದ 10 ಬಿಲಿಯನ್ ಯುಎಸ್ ಡಾಲರ್ ಹಣವನ್ನು ಕಲೆಕ್ಟ್ ಮಾಡುವ ನಿರ್ಧಾರ ಮಾಡಿದೆ. 2025ರ ಮಾರ್ಚ್‌ನಲ್ಲಿ ಇದರ ಆರಂಭಿಕ ಸಾರ್ವಜನಿಕ ಹೂಡಿಕೆ (IPO) ಬರುವ ಸಾಧ್ಯತೆ ಇದೆ. ಐಪಿಓ ಮೂಲಕ HDB Financial Services ಅಲ್ಲಿ ಹೊಂದಿರುವ ಶೇ. 10 ರಿಂದ ಶೇ. 15ರಷ್ಟು ಶೇರನ್ನು ಮಾರಾಟ ಮಾಡಲು ಎಚ್‌ಡಿಎಫ್‌ಸಿ ಬ್ಯಾಂಕ್ ತೀರ್ಮಾನ ಮಾಡಿದೆ.
ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ತನ್ನ ಅಂಗಸಂಸ್ಥೆಯಾದ ಎನ್‌ಟಿಪಿಸಿ ಗ್ರೀನ್ ಎನರ್ಜಿಯ ಐಪಿಒಅನ್ನು ಅಕ್ಟೋಬರ್-ನವೆಂಬರ್‌ನಲ್ಲಿ ರಿಲೀಸ್ ಮಾಡಲು ಮುಂದಾಗಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ವಿದ್ಯುತ್ ಉತ್ಪಾದನಾ ಕಂಪನಿ NTPC ತನ್ನ ನವೀಕರಿಸಬಹುದಾದ ಇಂಧನ ವ್ಯವಹಾರಕ್ಕೆ ಇಳಿಯಲು ತೀರ್ಮಾನ ಮಾಡಿದೆ. ಅಂದಾಜು 10 ಸಾವಿರ ಕೋಟಿ ರೂಪಾಯಿ ಹಣವನ್ನು ಮಾರುಕಟ್ಟೆಯಿಂದ ಪಡೆಯಲು ಮುಂದಾಗಿದೆ.
ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ಅಂದರೆ ಒಎನ್‌ಜಿಸಿ ಮಾತೃಸಂಸ್ಥೆಯಾಗಿರುವ ಒಎನ್‌ಜಿಸಿ ಗ್ರೀನ್ ಎನರ್ಜಿ ಕೂಡ ಐಪಿಒಗೆ ಬರಲು ತೀರ್ಮಾನಿಸಿದೆ. ದೇಶದ ಅತಿದೊಡ್ಡ ಕಚ್ಚಾತೈಲ ಹಾಗೂ ನೈಸರ್ಗಿಕ ಅನಿಲ ಕಂಪನಿ ಇದಾಗಿದ್ದು, ಕೇಂದ್ರ ಸರ್ಕಾರ ಮಾಲೀಕತ್ವದಲ್ಲಿದೆ. ಈ ಕಂಪನಿಯ ಐಪಿಒ ಕುರಿತಾಗಿ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಬರಬೇಕಿದೆ.
ಬ್ಯಾಂಕ್ ಆಫ್ ಬರೋಡಾ ಬೆಂಬಲಿಕ ಇಂಡಿಯಾ ಫರ್ಸ್ಟ್ ಲೈಫ್ ಇನ್ಶುರೆನ್ಸ್‌ನ ಐಪಿಒ ಕೂಡ ಬರುವ ತಯಾರಿಯಲ್ಲಿದೆ. 2023ರ ಮಾರ್ಚ್‌ನಲ್ಲಿಯೇ ಸೆಬಿ ಇದಕ್ಕೆ ಅನುಮೋದನೆ ನೀಡಿದ್ದರೂ, ಇನ್ನೂ ಮಾರುಕಟ್ಟೆಗೆ ಬಂದಿಲ್ಲ. 500 ಕೋಟಿಯ ಫ್ರೆಶ್ ಷೇರುಗಳು 14 ಕೋಟಿಯ ಆಫರ್ ಫಾರ್ ಸೇಲ್ ಷೇರುಗಳು ಲಭ್ಯವಿರಲಿದೆ. ಆದರೆ, ಈ ಐಪಿಒನ ಪ್ರೈಸ್‌ಬ್ಯಾಂಡ್ ಹಾಗೂ ಬರುವ ದಿನಾಂಕ ಇನ್ನೂ ನಿಗದಿಯಾಗಿಲ್ಲ.
ಕೆನರಾ ಬ್ಯಾಂಕ್‌ನ ಮ್ಯೂಚುವಲ್ ಫಂಡ್ ಕಂಪನಿ ಕೆರನಾ ರೊಬೆಕೊ ಎಎಂಸಿ ಕೂಡ ಐಪಿಒಗೆ ಬರಲು ಸಜ್ಜಾಗಿದೆ. ಹಾಲಿ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಇದರ ಐಪಿಒ ರಿಲೀಸ್ ಆಗಬಹುದು ಎಂದು ಈಗಾಗಲೇ ಕೆನರಾ ಬ್ಯಾಂಕ್ ತಿಳಿಸಿದೆ. ಈ ಎಎಂಸಿಯಲ್ಲಿ ಕೆನರಾ ಬ್ಯಾಂಕ್ ಶೇ. 51ರಷ್ಟು ಪಾಲು ಹೊಂದಿದೆ. ಇದರ ಪೈಕ ಶೇ. 13ರಷ್ಟು ಪಾಲನ್ನು ಐಪಿಒಗೆ ನೀಡಲು ತೀರ್ಮಾನ ಮಾಡಿದೆ.
ಟಾಟಾ ಮೋಟಾರ್ಸ್‌ನ ಟಾಟಾ ಪ್ಯಾಸೆಂಜರ್ ಎಲೆಕ್ಟಿಕ್ ಮೊಬಿಲಿಟಿ ಕೂಡ ಐಪಿಒ ರಿಲೀಸ್ ಮಾಡುತ್ತಿದೆ. 2025-26ರ ಹಣಕಾಸಿ ವರ್ಷದಲ್ಲಿ ಇದರ ಐಪಿಒ ಬರಲಿದ್ದು, ಮಾರುಕಟ್ಟೆಯಿಂದ 1--2 ಬಿಲಿಯನ್ ಹಣ ಸಂಗ್ರಹ ಮಾಡವ ಗುರಿಯಲ್ಲಿದೆ. ಇನ್ನೊಂದೆಡೆ ಟಾಟಾ ಮೋಟಾರ್ಸ್ ಈಗಾಗಲೇ ಆಂತರಿಕ ಸಂಪನ್ಮೂಲಗಳಿಂದ ಟಿಪಿಇಎಂಎಲ್ ಕಂಪನಿಯ ಮೇಲೆ 1 ಬಿಲಿಯನ್ ಯುಎಸ್ ಡಾಲರ್ ಹಣವನ್ನು ಹೂಡಿಕೆ ಮಾಡುವುದಾಗಿ ತಿಳಿಸಿದೆ. ಇದರ ಪ್ರೈಸ್ ಬ್ಯಾಂಡ್ ಹಾಗೂ ಮಾರುಕಟ್ಟೆಗೆ ಬರುವ ದಿನಾಂಕ ಇನ್ನೂ ನಿರ್ಧಾರವಾಗಿಲ್ಲ.
ಗಮನಿಸಿ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗಳು ಅಪಾಯಗಳಿಗೆ ಒಳಪಟ್ಟಿರುತ್ತವೆ. ಹೂಡಿಕೆ ಮಾಡುವ ಮೊದಲು ನಿಮ್ಮ ಮಾರುಕಟ್ಟೆ ತಜ್ಞರ ಸಲಹೆಯನ್ನು ಪಡೆಯಿರಿ.
ಇದನ್ನೂ ಓದಿ: ಲಾಂಗ್‌ಟರ್ಮ್‌ಗಾಗಿ ಖರೀದಿಸಲೇಬೇಕಾದ ಟಾಪ್-5 ಷೇರುಗಳು, ಟಾರ್ಗೆಟ್ ಪ್ರೈಸ್ ಚೆಕ್ ಮಾಡಿ!
ಇದನ್ನೂ ಓದಿ: ಡೆಂಗ್ಯೂ ಸಾಂಕ್ರಾಮಿಕ ಎಂದು ಘೋಷಿಸಿದ ಕರ್ನಾಟಕ, ಕುಂಟುತ್ತಾ ಸಾಗ್ತಿದ್ದ ಷೇರಿಗೆ ಖುಲಾಯಿಸಿದ ಅದೃಷ್ಟ!