ಸೇವಿಂಗ್ಸ್ ಅಂತ ಫಿಕ್ಸಡ್ ಡೆಪಾಸಿಟ್ ಮಾಡ್ತೀರಿ, ಆದ್ರೆ ಹೆಚ್ಚು ಬಡ್ಡಿ ಕೊಡೋ ಬ್ಯಾಂಕ್ ಯಾವುದು?

First Published | Sep 3, 2024, 5:21 PM IST

SBI, ಬ್ಯಾಂಕ್ ಆಫ್ ಬರೋಡಾ, HDFC ಬ್ಯಾಂಕ್, ICICI ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು PNB ಸೇರಿತೆ ಭಾರತದ ಪ್ರಮುಖ ಬ್ಯಾಂಕ್‌ಗಳು ನೀಡುವ ಸ್ಥಿರ ಠೇವಣಿಗಳ (Fixed Deposit) ಮೇಲಿನ ಬಡ್ಡಿ ದರವೆಷ್ಟು? ಶ್ರೀ ಸಾಮಾನ್ಯರು ಮತ್ತು ಹಿರಿಯ ನಾಗರಿಕರಿಗೆ ವಿಭಿನ್ನ ಬಡ್ಡಿ ದರಗಳೆಷ್ಟು ಎಂಬುವುದೇ ಗೊತ್ತಿರೋಲ್ಲ. ದುಡ್ಡು ಸೇಫ್ ಆಗಿರಿಲ, ಒಳ್ಳೇ ಇಂಟರೆಸ್ಟ್ ಬರಲಿ ಅಂತ ಬ್ಯಾಂಕಲ್ಲಿಡುತ್ತಾರೆ. ಆದರೆ, ಇಂಥ ಉಳಿತಾಯಕ್ಕೆ ಭಾರತದಲ್ಲಿ ಬೆಸ್ಟ್ ಬ್ಯಾಂಕ್ ಯಾವುದು?

ಫಿಕ್ಸಡ್ ಡೆಪಾಸಿಟ್‌ಗೆ ಬಡ್ಡಿ ಎಷ್ಟು?

ಹಣಕಾಸಿನ ಸ್ಥಿರತೆ ಈ ಕಾಲದಲ್ಲಿ ಬಹಳ ಮುಖ್ಯ. ಉತ್ತಮ ಹೂಡಿಕೆ ಆಯ್ಕೆ ಅನಿವಾರ್ಯ. ನಿವೃತ್ತ ಉದ್ಯೋಗಿಗಳು ಹೆಚ್ಚಾಗಿ ತಮಗೆ ನಿವೃತ್ತಿ ವೇಳೆ ಬಂದ ಹಣವನ್ನು ಬ್ಯಾಂಕ್ ಒಂದರಲ್ಲಿ ಸ್ಥಿರ ಠೇವಣಿಯನ್ನಾಗಿ ಇರಿಸಿ, ಬರೋ ಬಡ್ಡಿಯಿಂದ ಜೀವನ ಸಾಗಿಸಲು ಇಚ್ಛಿಸುತ್ತಾರೆ. 5-ವರ್ಷಗಳ ಸ್ಥಿರ ಠೇವಣಿಗಳ ಮೇಲೆ ಭಾರತದ ಬ್ಯಾಂಕ್‌ಗಳು ಸ್ಪರ್ಧಾತ್ಮಕ ಬಡ್ಡಿ ಫಿಕ್ಸ್ ಮಾಡಿದ್ದು, ಸೂಕ್ತ ಬ್ಯಾಂಕ್ ಆಯ್ಕೆ ಮಾಡುವುದು ಹಣಕಾಸಿನ ಬೆಳವಣಿಗೆ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಭಾರತದ ಪ್ರಮುಖ ಬ್ಯಾಂಕ್‌ಗಳು ನೀಡುವ ಉತ್ತಮ 5-ವರ್ಷಗಳ FD ಬಡ್ಡಿ ದರಗಳೆಷ್ಟು? ಸಿಗೋ ಲಾಭದ ಮೇಲೆ ಯಾವ ಬ್ಯಾಂಕಲ್ಲಿ ಡೆಪಾಸಿಟ್ ಇಡಬೇಕೆಂಬುದನ್ನು ಯೋಚಿಸಿ. 

State Bank of India

SBI ಸಾರ್ವಜನಿಕರಿಗೆ 6.5% ಮತ್ತು ಹಿರಿಯ ನಾಗರಿಕರಿಗೆ 7.5% ಬಡ್ಡಿ ದರವನ್ನು ನೀಡುತ್ತದೆ. ಆದಾಗ್ಯೂ, 2-3 ವರ್ಷಗಳ ಸ್ಥಿರ ಠೇವಣಿಗಳ ಮೇಲೆ, ಸಾರ್ವಜನಿಕರಿಗೆ 7% ಮತ್ತು ಹಿರಿಯ ನಾಗರಿಕರಿಗೆ 7.5% ಬಡ್ಡಿದರ ಸಿಗುತ್ತೆ.

Tap to resize

Bank of Baroda

ಬ್ಯಾಂಕ್ ಆಫ್ ಬರೋಡಾ ಐದು ವರ್ಷಗಳ ಸ್ಥಿರ ಠೇವಣಿ ಮೇಲೆ ಸಾರ್ವಜನಿಕರಿಗೆ 6.5% ಮತ್ತು ಹಿರಿಯ ನಾಗರಿಕರಿಗೆ 7.15% ಬಡ್ಡಿ ದರವನ್ನು ನಿಗದಿಗೊಳಿಸಿದೆ. ಅದೇ ಸಮಯದಲ್ಲಿ, 399-ದಿನಗಳ ಮಾನ್ಸೂನ್ ಧಮಾಕಾ ಯೋಜನೆಯಡಿಯಲ್ಲಿ, ಸಾರ್ವಜನಿಕರು 7.25% ಬಡ್ಡಿ ಮತ್ತು ಹಿರಿಯ ನಾಗರಿಕರು 7.75% ಬಡ್ಡಿ ಪಡೆಯಬಹುದು.

HDFC

HDFC ಬ್ಯಾಂಕ್ ಐದು ವರ್ಷಗಳ ಸ್ಥಿರ ಠೇವಣಿ ಮೇಲೆ ಸಾರ್ವಜನಿಕರಿಗೆ 7% ಮತ್ತು ಹಿರಿಯ ನಾಗರಿಕರಿಗೆ 7.5% ಬಡ್ಡಿದರವನ್ನು ನಿಗದಿಗೊಳಿಸಿದೆ. ಅದೇ ವೇಳೆ, 55-ತಿಂಗಳ FD ಯಲ್ಲಿ, ಸಾರ್ವಜನಿಕರು 7.4% ಬಡ್ಡಿ ಮತ್ತು ಹಿರಿಯ ನಾಗರಿಕರು 7.9% ಬಡ್ಡಿ ಪಡೆಯಬಹುದಾಗಿದೆ.

ICICI ಬ್ಯಾಂಕ್

ICICI ಬ್ಯಾಂಕ್ ಐದು ವರ್ಷಗಳ ಸ್ಥಿರ ಠೇವಣಿ ಯೋಜನೆಯಲ್ಲಿ ಸಾರ್ವಜನಿಕರಿಗೆ 7% ಮತ್ತು ಹಿರಿಯ ನಾಗರಿಕರಿಗೆ 7.5% ಬಡ್ಡಿದರವನ್ನು ನೀಡುತ್ತದೆ. ಇದಲ್ಲದೆ, 15 ರಿಂದ 18 ತಿಂಗಳ ಮ್ಯೂಚುಯಲ್ ಫಂಡ್ ಸ್ಥಿರ ಠೇವಣಿಗಳ ಮೇಲೆ 7.25% ರಿಂದ 7.8% ವರೆಗಿನ ಬಡ್ಡಿ ಲಭ್ಯವಿದೆ.

ಕೋಟಕ್ ಮಹೀಂದ್ರಾ

ಕೋಟಕ್ ಮಹೀಂದ್ರಾ ಐದು ವರ್ಷಗಳ ಸ್ಥಿರ ಠೇವಣಿಗಳ ಮೇಲೆ ಸಾರ್ವಜನಿಕರಿಗೆ 6.2% ಬಡ್ಡಿ ಮತ್ತು ಹಿರಿಯ ನಾಗರಿಕರಿಗೆ 6.7% ಬಡ್ಡಿ ನೀಡುತ್ತದೆ. ಬ್ಯಾಂಕಿನ ಅತಿ ಹೆಚ್ಚಿನ ಬಡ್ಡಿ ದರ 7.4%. ಇದನ್ನು 390-ದಿನಗಳ ಸ್ಥಿರ ಠೇವಣಿಗಳ ಮೇಲೆ ನೀಡಲಾಗುತ್ತದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್

PNB ಬ್ಯಾಂಕ್ ತನ್ನ ಐದು ವರ್ಷಗಳ ಸ್ಥಿರ ಠೇವಣಿ ಯೋಜನೆಯಲ್ಲಿ ಸಾರ್ವಜನಿಕರಿಗೆ 6.5% ಮತ್ತು ಹಿರಿಯ ನಾಗರಿಕರಿಗೆ 7% ಬಡ್ಡಿ ದರವನ್ನು ನಿಗದಿಗೊಳಿಸಿದೆ. ಈ ಬ್ಯಾಂಕ್ 400-ದಿನಗಳ FD ಗಳ ಮೇಲೆ 7.25% ಬಡ್ಡಿ ಕೊಡುತ್ತದೆ.

Latest Videos

click me!