ಇಂದಿನ ಜಗತ್ತಿನಲ್ಲಿ ಹೆಚ್ಚುತ್ತಿರುವ ವೆಚ್ಚ ಸರಿದೂಗಿಸಲು ಜನರು ಆದಾಯವನ್ನು ನೀಡುವ ಹೊಸ ಮೂಲಗಳನ್ನು ಹುಡುಕುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಅಪರೂಪದ ಮತ್ತು ಹಳೇ ಕರೆನ್ಸಿ ನೋಟು ಮತ್ತು ನಾಣ್ಯಗಳನ್ನು ಹೊಂದಿರುವವರು ಲಾಭ ಗಳಿಸಲು ಹಲವು ಅವಕಾಶಗಳಿವೆ. ಸ್ಪಷ್ಟವಾಗಿ ಹೇಳುವುದಾದರೆ, ಹಳೆ 2 ರೂ. ನೋಟಿದ್ದರೆ, ಅದನ್ನು ಮಾರಿ ಉತ್ತಮ ಆದಾಯ ಗಳಿಸಬಹುದು. ಅಪರೂಪದ ನಾಣ್ಯಗಳು ಮತ್ತು ರೂಪಾಯಿ ನೋಟುಗಳನ್ನು ಸಂಗ್ರಹಿಸುವವರು ಗಣನೀಯ ಮೊತ್ತವನ್ನು ನೀಡಿ, ಈ ಹಳೆಯ ನೋಟುಗಳನ್ನು ಖರೀದಿಸಲು ಸಿದ್ಧರಿದ್ದಾರೆ. ಕೆಲವರು ಇಂತಹ ಹಳೇ ನಾಣ್ಯ ಮತ್ತು ರೂಪಾಯಿ ನೋಟುಗಳನ್ನು ಮಾರಿಯೇ ಲಕ್ಷಗಟ್ಟಲೆ ಸಂಪಾದಿಸುತ್ತಾರೆ.