Best Work- Life Balance ಹೊಂದಿರುವ ಪ್ರಪಂಚದ ಟಾಪ್ 10 ದೇಶಗಳಿವು… ಭಾರತ ಯಾವ ಸ್ಥಾನದಲ್ಲಿದೆ?

Published : Sep 26, 2024, 08:27 AM ISTUpdated : Sep 26, 2024, 08:34 AM IST

ಪ್ರಪಂಚದ ಟಾಪ್ 10 ವರ್ಕ್ ಲೈಫ್ ಬ್ಯಾಲೆನ್ಸ್ ಹೊಂದಿರುವ ದೇಶಗಳ ಲಿಸ್ಟ್ ಇಲ್ಲಿದೆ. ಭಾರತ ಟಾಪ್ 50 ರಲ್ಲಿ ಸ್ಥಾನ ಪಡೆದಿದೆ. ಕೆಲಸದ ಒತ್ತಡದಿಂದ ಸಾಲು ಸಾಲು ಸಾವು ಸಂಭವಿಸುತ್ತಿರುವ ಸಂದರ್ಭದಲ್ಲಿ ಈ ವರ್ಕ್ ಲೈ ಬ್ಯಾಲೆನ್ಸ್ ನಲ್ಲಿ ಭಾರತದ ಸ್ಥಾನ ಎಷ್ಟು ತಿಳಿಯೋಣ.   

PREV
112
Best Work- Life Balance ಹೊಂದಿರುವ ಪ್ರಪಂಚದ ಟಾಪ್ 10 ದೇಶಗಳಿವು… ಭಾರತ ಯಾವ ಸ್ಥಾನದಲ್ಲಿದೆ?

ಭಾರತದಲ್ಲಿ ಕೆಲವು ದಿನಗಳಿಂದ ಕೆಲಸದ ಒತ್ತಡದಿಂದ ಸಾವನ್ನಪ್ಪುತ್ತಿರುವವರ ಸುದ್ದಿಯೇ ಕೇಳಿ ಬರ್ತಿದೆ. ಅಂದ್ರೆ ನಮ್ಮ ದೇಶದಲ್ಲಿ ವರ್ಕ್ ಲೈಫ್ ಬ್ಯಾಲೆನ್ಸ್ ಸರಿಯಾಗಿಲ್ಲ ಎಂದು ಅರ್ಥ. ಶಾಸನಬದ್ಧ ವಾರ್ಷಿಕ ರಜೆ, ಪೇಯ್ಡ್ ಹೆರಿಗೆ ರಜೆ ಮತ್ತು ಪ್ರತಿ ಉದ್ಯೋಗಿಗೆ ಕೆಲಸ ಮಾಡುವ ಸರಾಸರಿ ಗಂಟೆಗಳಂತಹ ಪ್ರಮುಖ ಕೆಲಸದ ಅಂಶಗಳ ಸಂಯೋಜನೆಯ ಆಧಾರದ ಮೇಲೆ ಕೆಳಗಿನ 10 ದೇಶಗಳು ನಮ್ಮ ಜಾಗತಿಕ ಅಧ್ಯಯನದಲ್ಲಿ ಬೆಸ್ಟ್ ವರ್ಕ್ ಲೈಫ್ ಬ್ಯಾಲೆನ್ಸ್ (Work life balance) ಹೊಂದಿರುವ ದೇಶಗಳು ಎಂದು ತಿಳಿದು ಬಂದಿದೆ. ಈ ಲಿಸ್ಟ್ ನಲ್ಲಿ ಭಾರತ ಯಾವ ಸ್ಥಾನದಲ್ಲಿದೆ ನೋಡೋಣ.

212

ನ್ಯೂಝಿಲ್ಯಾಂಡ್ 
ಅದ್ಭುತವಾದ  ವರ್ಕ್ ಲೈಫ್ ಬ್ಯಾಲೆನ್ಸ್ ಹೊಂದಿರುವ ದೇಶಗಳಲ್ಲಿ ನ್ಯೂಝಿಲ್ಯಾಂಡ್ ಮೊದಲನೇ ಸ್ಥಾನದಲ್ಲಿದೆ. 52,69,939 ಜನಸಂಖ್ಯೆ ಇರುವ ಈ ದೇಶದಲ್ಲಿನ 80.76 % ವರ್ಕ್ ಲೈಫ್ ಬ್ಯಾನೆನ್ಸ್ ಇದೆ. ಇವರಿಗೆ 32 ವಾರ್ಷಿಕ ರಜೆ ಇದೆ. 80% ಸಿಕ್ ಪೇಯ್ಡ್ ಲೀವ್ ಇದೆ. ಅಷ್ಟೇ ಅಲ್ಲ 26 ವಾರಗಳ ಮಟರ್ನಿಟಿ ರಜೆ ಇದ್ದು, ವಾರಕ್ಕೆ 177 $ ನೀಡಲಾಗುತ್ತೆ. 

312

ಐರ್ಲ್ಯಾಂಡ್ 
ಯುರೋಪ್ ನ ಈ ದೇಶದಲ್ಲಿ 50,89,478 ಜನಸಂಖ್ಯೆ ಇದೆ. ಇಲ್ಲಿಯೂ ಕೂಡ ಜನರ  ವರ್ಕ್ ಲೈಫ್ ಬ್ಯಾಲೆನ್ಸ್ ಸರಿಯಾಗಿಯೇ ಇದೆ.  ಇಲ್ಲಿ 77.89%  ವರ್ಕ್ ಲೈಫ್ ಬ್ಯಾಲೆನ್ಸ್ ಇದೆ. 30 ವಾರ್ಷಿಕ ರಜೆ, 70% ವೇತನ ಸಹಿತ ಸಿಕ್ ಲೀವ್ (paid sick leave), ವೇತನ ಸಹಿತ 26 ವಾರಗಳ ಮೆಟರ್ನಿಟಿ ರಜೆ . 

412

ಬೆಲ್ಜಿಯಂ
ಬೆಲ್ಜಿಯಂ ನಲ್ಲಿ 11, 715, 744 ಜನಸಂಖ್ಯೆ ಹೊಂದಿರುವ ಈ ದೇಶದಲ್ಲಿ  73.45%  ವರ್ಕ್ ಲೈಫ್ ಬ್ಯಾಲೆನ್ಸ್ ಇದೆ. 30 ವಾರ್ಷಿಕ ರಜೆ, 100% ವೇತನ ಸಹಿತ ಸಿಕ್ ಲೀವ್, ವೇತನ ಸಹಿತ 15 ವಾರಗಳ ಮೆಟರ್ನಿಟಿ ರಜೆ (maternity leave) . 

512

ಡೆನ್ಮಾರ್ಕ್ 
ಡೆನ್ಮಾರ್ಕ್ ನ ವರ್ಕ್ ಲೈಫ್ ಬ್ಯಾಲೆನ್ಸ್ ಕೂಡ ಚೆನ್ನಾಗಿದೆ. ಜನಸಂಖ್ಯೆ 59,39,695 ಇರುವ ಈ ದೇಶದಲ್ಲಿ 73.45%  ವರ್ಕ್ ಲೈಫ್ ಬ್ಯಾಲೆನ್ಸ್ ಇದೆ. 35 ವಾರ್ಷಿಕ ರಜೆ, 100%ವೇತನ ಸಹಿತ ಸಿಕ್ ಲೀವ್, ವೇತನ ಸಹಿತ 15 ವಾರಗಳ ಮೆಟರ್ನಿಟಿ ರಜೆ . 

612

ಕೆನಡಾ 
ಬರೋಬ್ಬರಿ 3,91,07,046 ಜನಸಂಖ್ಯೆ ಹೊಂದಿರುವ ಕೆನಡಾದಲ್ಲಿ 72.75%  ವರ್ಕ್ ಲೈಫ್ ಬ್ಯಾಲೆನ್ಸ್ ಇದೆ. 17 ವಾರ್ಷಿಕ ರಜೆ, 100%ವೇತನ ಸಹಿತ ಸಿಕ್ ಲೀವ್, ವೇತನ ಸಹಿತ 17 ವಾರಗಳ ಮೆಟರ್ನಿಟಿ ರಜೆ . 

712

ಜರ್ಮನಿ
84,552,242  ಜನಸಂಖ್ಯೆ ಹೊಂದಿರುವ ಜರ್ಮನಿಯಲ್ಲಿ 71.84%  ವರ್ಕ್ ಲೈಫ್ ಬ್ಯಾಲೆನ್ಸ್ ಇದೆ. 30 ವಾರ್ಷಿಕ ರಜೆ, 70%ವೇತನ ಸಹಿತ ಸಿಕ್ ಲೀವ್, ವೇತನ ಸಹಿತ 14ವಾರಗಳ ಮೆಟರ್ನಿಟಿ ರಜೆ . 

812

ಫಿನ್ಲ್ಯಾಂಡ್ 
ಯೂರೋಪ್ ನ ನಗರ ಫಿನ್ ಲ್ಯಾಂಡ್ ನ ಜನಸಂಖ್ಯೆ 5,618,694 ಆಗಿದೆ.  ಇಲ್ಲಿ 71.55%  ವರ್ಕ್ ಲೈಫ್ ಬ್ಯಾಲೆನ್ಸ್ ಇದೆ. 36 ವಾರ್ಷಿಕ ರಜೆ, 100%ವೇತನ ಸಹಿತ ಸಿಕ್ ಲೀವ್, ವೇತನ ಸಹಿತ 17.5ವಾರಗಳ ಮೆಟರ್ನಿಟಿ ರಜೆ ಸಿಗುತ್ತೆ. 

912

ಆಸ್ಟ್ರೇಲಿಯಾ
ಸುಮಾರು 27,122,411, ಜನಸಂಖ್ಯೆ ಇರುವ ಆಸ್ಟ್ರೇಲಿಯಾದ ವರ್ಕ್ ಲೈಫ್ ಬ್ಯಾಲೆನ್ಸ್ 71.35% ಆಗಿದೆ.  ಈ ಜನರಿಗೆ 30 ವಾರ್ಷಿಕ ರಜೆ, 100%ವೇತನ ಸಹಿತ ಸಿಕ್ ಲೀವ್, ವೇತನ ಸಹಿತ 12 ವಾರಗಳ ಮೆಟರ್ನಿಟಿ ರಜೆ ಸಿಗುತ್ತೆ. 

1012

ನಾರ್ವೆ
ನಾರ್ವೇ ದೇಶದಲ್ಲಿ ಸುಮಾರು 5,576,660 ಜನ ವಾಸಿಸುತ್ತಾರೆ. ನಾರ್ವೇ ವರ್ಕ್ ಲೈಫ್ ಬ್ಯಾಲೆನ್ಸ್ 70.85% ಆಗಿದೆ.  ಈ ಜನರಿಗೆ 35 ವಾರ್ಷಿಕ ರಜೆ, 100%ವೇತನ ಸಹಿತ ಸಿಕ್ ಲೀವ್, ವೇತನ ಸಹಿತ 18 ವಾರಗಳ ಮೆಟರ್ನಿಟಿ ರಜೆ ಸಿಗುತ್ತೆ. 

1112

ಸ್ಪೈನ್
ಸ್ಪೈನ್ ದೇಶದ ಜನಸಂಖ್ಯೆ ಸುಮಾರು 48,797,875 ಆಗಿದೆ. ಟಾಪ್ 10ನೇ ಸ್ಥಾನದಲ್ಲಿರುವ ಈ ದೇಶದ ವರ್ಕ್ ಲೈಫ್ ಬ್ಯಾಲೆನ್ಸ್ 70.06% ಆಗಿದೆ.  ಈ ಜನರಿಗೆ 36 ವಾರ್ಷಿಕ ರಜೆ, 60%ವೇತನ ಸಹಿತ ಸಿಕ್ ಲೀವ್, ವೇತನ ಸಹಿತ 16ವಾರಗಳ ಮೆಟರ್ನಿಟಿ ರಜೆ ಸಿಗುತ್ತೆ. 

1212

ಹಾಗಿದ್ರೆ ನಮ್ಮ ದೇಶ  (India) ಈ ಲಿಸ್ಟ್ ನಲ್ಲಿ ಎಷ್ಟನೇ ಸ್ಥಾನದಲ್ಲಿದೆ ಎಂದು ನೀವು ಯೋಚನೆ ಮಾಡ್ತಿರಬಹುದು ಅಲ್ವಾ? 1,450,935,791 ಜನಸಂಖ್ಯೆಯುಳ್ಳ ಭಾರತದಲ್ಲಿ ವರ್ಕ್ ಲೈಫ್ ಬ್ಯಾಲೆನ್ಸ್ 38.83% ಆಗಿದ್ದು, ಈ ಲಿಸ್ಟ್ ನಲ್ಲಿ 48ನೇ ಸ್ಥಾನದಲ್ಲಿದೆ.  ಈ ಜನರಿಗೆ 35 ವಾರ್ಷಿಕ ರಜೆ, 50%ವೇತನ ಸಹಿತ ಸಿಕ್ ಲೀವ್, ವೇತನ ಸಹಿತ 12ವಾರಗಳ ಮೆಟರ್ನಿಟಿ ರಜೆ ಸಿಗುತ್ತೆ. 
 

Read more Photos on
click me!

Recommended Stories