Offer for sale: 66.76 ಲಕ್ಷ ಈಕ್ವಿಟಿ ಷೇರುಗಳ ಮಾರಾಟಕ್ಕೆ ಮುಂದಾದ ಸಿಮೆಂಟ್ ಕಂಪನಿ

Published : Mar 17, 2026, 01:39 PM IST

ದಕ್ಷಿಣ ಭಾರತದ ಸಿಮೆಂಟ್ ಕಂಪನಿ  66.76 ಲಕ್ಷ ಈಕ್ವಿಟಿ ಷೇರುಗಳನ್ನು ಮಾರಾಟ ಮಾಡುತ್ತಿದೆ. ಸೆಬಿ ನಿಯಮಾವಳಿಗಳನ್ನು ಪಾಲಿಸಲು, ಕಂಪನಿಯು ತನ್ನ ಪಾಲುದಾರಿಕೆಯನ್ನು ಕಡಿಮೆ ಮಾಡಲು ಈ ಆಫರ್-ಫಾರ್-ಸೇಲ್ (OFS) ಪ್ರಕ್ರಿಯೆಯನ್ನು ಕೈಗೊಂಡಿದೆ.

PREV
15
66.76 ಲಕ್ಷ ಈಕ್ವಿಟಿ ಷೇರು

ಸಿಮೆಂಟ್ ಕಂಪನಿಯೊಂದು ತನ್ನ 66.76 ಲಕ್ಷ ಈಕ್ವಿಟಿ ಷೇರುಗಳನ್ನು ಮಾರಾಟ ಮಾಡಲು ಮುಂದಾಗಿದೆ. ಮಾರ್ಚ್ 16ರಂದು ಕಂಪನಿಯಿಂದ ಅಧಿಕೃತ ಹೇಳಿಕೆ ಬಿಡುಗಡೆಯಾಗಿದ್ದು, ಷೇರುಗಳ ಬೆಲೆಯಲ್ಲಿ ಶೇ.10ರಷ್ಟು ಏರಿಕೆಯಾಗಿದೆ. 52 ರೂಪಾಯಿ ಫ್ಲೋರ್ ಪ್ರೈಸ್‌ನಲ್ಲಿ ಷೇರುಗಳು ಮಾರಾಟವಾಗಲಿವೆ. ಕಂಪನಿಯ ಶೇ.7.24ರಷ್ಟು ಷೇರುಗಳ ಬಿಕರಿಯಾಗುತ್ತಿದೆ.

25
ಸಾಗರ್ ಸಿಮೆಂಟ್ಸ್ ಲಿಮಿಟೆಡ್ ಕಂಪನಿ

ಮಾರ್ಚ್ 16ರಂದು ಹೈದರಾಬಾದ್ ಮೂಲದ ಸಿಮೆಂಟ್ ತಯಾರಕ ಸಾಗರ್ ಸಿಮೆಂಟ್ಸ್ ಲಿಮಿಟೆಡ್ ಕಂಪನಿ ಅಂಗಸಂಸ್ಥೆಯಾದ ಆಂಧ್ರ ಸಿಮೆಂಟ್ಸ್ ಲಿಮಿಟೆಡ್‌ನಲ್ಲಿನ ತನ್ನ ಪಾಲನ್ನು ಮಾರಾಟ ಮಾಡುತ್ತಿರೋದಾಗಿ ಘೋಷಿಸಿಕೊಂಡಿದೆ. ಆಫರ್-ಫಾರ್-ಸೇಲ್ (OFS) ಮೂಲಕ ಷೇರುಗಳನ್ನು ಮಾರಾಟ ಮಾಡಲಾಗುತ್ತಿದೆ.

35
ಯಾಕೆ ಮಾರಾಟ?

SEBI ನಿಯಮಗಳ ಪ್ರಕಾರ, ಕಂಪನಿಯ ಮಾಲೀಕರು ಅಥವಾ ಪ್ರವರ್ತಕರು ಶೇ.75ಕ್ಕಿಂತ ಹೆಚ್ಚು ಷೇರುಗಳನ್ನು ಹೊಂದುವಂತಿಲ್ಲ. ಶೇ.25ರಷ್ಟು ಷೇರುಗಳನ್ನು ಸಾರ್ವಜನಿಕರಿಗೆ ನೀಡಬೇಕಾಗುತ್ತದೆ. ಸಾಗರ್ ಸಿಮೆಂಟ್ಸ್ (ಪ್ರವರ್ತಕ) ಆಂಧ್ರ ಸಿಮೆಂಟ್ಸ್‌ನ 90% ಷೇರುಗಳನ್ನು ಹೊಂದಿದೆ. ಈ ಪ್ರಮಾಣ ಶೇ.75ಕ್ಕಿಂತಲೂ ಅಧಿಕವಾಗಿದೆ. ಹಾಗಾಗಿ ಮಾರ್ಗಸೂಚಿಗಳನ್ನು ಅನುಸರಿಸಲು ಕಂಪನಿ ಷೇರುಗಳ ಮಾರಾಟಕ್ಕೆ ಮುಂದಾಗಿದೆ.

45
ಷೇರು ಪ್ರಮಾಣ

ಷೇರು ಪ್ರಮಾಣವನ್ನು ಶೇ.15ರಷ್ಟು ಕಡಿಮೆ ಮಾಡಲು ಸಾಗರ್ ಸಿಮೆಂಟ್ಸ್ ಕಂಪನಿಯಲ್ಲಿನ ತನ್ನ ಪಾಲನ್ನು ಮಾರಾಟ ಮಾಡುತ್ತಿದೆ. ಇದರಿಂದ ಸಾರ್ವಜನಿಕ ಹೂಡಿಕೆದಾರರ ಪ್ರಮಾಣ ಶೇ.25ಕ್ಕಿಂತ ಹೆಚ್ಚಾಗಲಿದೆ. ಚಿಲ್ಲರೆ ಹೂಡಿಕೆದಾರರಲ್ಲದವರು ಮಾರ್ಚ್ 17 ರಂದು ಬಿಡ್ ಮಾಡಲು ಅವಕಾಶ ಹೊಂದುತ್ತಾರೆ. ಆದ್ರೆ ಮಾರ್ಚ್ 18ರಂದು ಬಿಡ್ ಮಾಡಲು ಸಾಧ್ಯವಾಗಲಿದೆ.

ಇದನ್ನೂ ಓದಿ: ಇರಾನ್ ಯುದ್ಧದಿಂದ ಚಿನ್ನದ ಬೆಲೆ ಹೆಚ್ಚಬೇಕಿತ್ತು, ಆದರೆ ಕುಸಿದಿದ್ದೇಕೆ? ಇಲ್ಲಿದೆ ತಜ್ಞರ ವಿಶ್ಲೇಷಣೆ

55
ಕನಿಷ್ಠ ಬೆಲೆ ₹52

ಈ ಘೋಷಣೆಯ ನಂತರ ಸಿಮೆಂಟ್‌ ಷೇರುಗಳು ಸುಮಾರು 10% ರಷ್ಟು ಏರಿಕೆಯಾಗಿ ದಿನದ ಗರಿಷ್ಠ ₹56 ಕ್ಕೆ ತಲುಪಿದ್ದವು. ಈ ಮಾರಾಟದ ಕನಿಷ್ಠ ಬೆಲೆ ₹52 ಕ್ಕೆ ನಿಗದಿಪಡಿಸಲಾಗಿದೆ. ಷೇರುಗಳಿಗೆ ಮಾರಾಟಕ್ಕೆ ತೆರೆದಾಗಿನಿಂದ ಖರೀದಿ ಹೆಚ್ಚಳವಾಗಿದೆ.

Disclaimer: ಯಾವುದೇ ವ್ಯವಹಾರವು ಮಾರುಕಟ್ಟೆಯ ಅಪಾಯವನ್ನು ಒಳಗೊಂಡಿರುತ್ತವೆ. ಷೇರು ಮಾರುಕಟ್ಟೆಯಲ್ಲಿನ ಹೂಡಿಕೆಯೂ ಸಹ ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತದೆ. ಆದ್ದರಿಂದ ಯಾವುದೇ ಹೂಡಿಕೆ ಮಾಡುವ ಮುನ್ನ ಆರ್ಥಿಕ/ಮಾರುಕಟ್ಟೆ ತಜ್ಞರ ಸಲಹೆ ಪಡೆದುಕೊಳ್ಳಬೇಕು. ಓದುಗರು ಇದನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

ಇದನ್ನೂ ಓದಿ: ಒಂದು ದಶಕದಿಂದ ಗಲ್ಫ್‌ ದೇಶಗಳಲ್ಲಿ ಉತ್ತಮ ಬೇಡಿಕೆ ಸೃಷ್ಟಿಸಿದ್ದ ಧಾರವಾಡ ಆಪೂಸ್‌ ಮಾವು ರಫ್ತಿಗೆ ಯುದ್ಧದ ಕರಿನೆರಳು!

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories