ಮೀನುಗಾರಿಕೆ, ಪಶುಸಂಗೋಪನೆಗೂ ಕೋಟಿ ಕೋಟಿ ಹಣ; ಇಲ್ಲಿದೆ ಆರ್ಥಿಕ ಪ್ಯಾಕೇಜ್ ವಿಂಗಡಣೆ ಲೆಕ್ಕ!

First Published | May 15, 2020, 6:17 PM IST

ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಪ್ರಧಾನಿ ಮೋದಿ 20 ಲಕ್ಷ ಕೋಟಿ ರೂಪಾಯಿ ಘೋಷಿಸಿದ್ದರು. ಈ ಹಣವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎಲ್ಲಾ ಕ್ಷೇತ್ರಗಳಿಗೆ ಹಂತಿದ್ದರು. ಕಳೆದೆರಡು ದಿನ 2 ಹಂತವಾಗಿ ವಿವಿಧ ಕ್ಷೇತ್ರಗಳಿಗೆ ಬಂಡವಾಳ ಹಂತಿದ್ದ ನಿರ್ಮಲಾ ಸೀತಾರಾಮನ್, ಇದೀಗ ಮೀನುಗಾರಿಕೆ, ಪಶುಸಂಗೋಪನೆ, ಸಣ್ಣ ಆಹಾರ ಉತ್ಪಾದನೆ, ಔಷದಿ ಸಸ್ಯಗಳ ತೋಟ ಸೇರಿದಂತೆ ಹಲವು ಕ್ಷೇತ್ರಗಳಿಗೆ ವಿಂಗಡಿಸಲಾಗಿದೆ. 3ನೇ ದಿನ ನಿರ್ಮಲಾ ಸೀತಾರಾಮನ್ ನೀಡಿದ ಲಕ್ಕದ ವಿವರ ಇಲ್ಲಿದೆ

ರೈತರು ಬೆಳೆದ ಬೆಳೆಯನ್ನು ಸುಲಭವಾಗಿ ಮಾರಾಟ ಮಾಡಲು ಹಾಗೂ ಉತ್ತಮ ಬೆಲೆಯಲ್ಲಿ ಮಾರಾಟ ಮಾಡಲು ಅಂತರ್ ರಾಜ್ಯ ಉಚಿತ ಟ್ರೇಡಿಂಗ್ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ
undefined
ಹೈನುಗಾರಿಗೆಯಲ್ಲಿ ತೊಡಗಿರುವ 2 ಕೋಟಿ ರೈತರಿಗಾಗಿ 5,000 ಕೋಟಿ ರೂಪಾಯಿ ಮೀಸಲು
undefined

Latest Videos


ಲಾಕ್‌ಡೌನ್ ಅವದಿಯಲ್ಲಿ ರೈತರಿಗೆ ಕನಿಷ್ಠ ಬೆಂಬಲ ಬೆಲೆ 74,300 ಕೋಟಿ ರೂಪಾಯಿ ನೀಡಲಾಗಿದೆ. ಫಸಲ್ ಭೀಮಾ ಯೋಜನೆಯಡಿ 6,400 ಕೋಟಿ ರೂಪಾಯಿ ಬಳಸಿಕೊಳ್ಳಲಾಗಿದೆ
undefined
ಸ್ಥಳೀಯ ಉತ್ಪನ್ನಗಳ ಬಳಸಲು ಕರೆ ನೀಡಿರುವ ಪ್ರಧಾನಿ ಮೋದಿ, ಇದೀಗ ಸಣ್ಣ ಆಹಾರ ಉತ್ಪನ್ನದಾತರಿಗೆ 10,000 ಕೋಟಿ ರೂಪಾಯಿ ಮೀಸಲಿಡಲಾಗಿದೆ
undefined
ಕೋಲ್ಡ್ ಸ್ಟೋರೇಜ್ ಸೇರಿದಂತೆ ರೈತರ ಉತ್ನನ್ನಗಳ ಶೇಖರಣೆ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ದಿಗೆ 1 ಲಕ್ಷ ಕೋಟಿ ರೂಪಾಯಿ ಮೀಸಲು
undefined
ದನ, ಎತ್ತು, ಕೋಣ ಸೇರಿದಂತೆ ಪಶುಸಂಗೋಪನೆಯಲ್ಲಿ ಎದುರಾಗುವ ಕಾಯಿಲೆಗಳ ಚಿಕಿತ್ಸೆಗೆ 13,343 ಕೋಟಿ ರೂಪಾಯಿ ಮೀಸಲು
undefined
ಮೀನುಗಾರರ ಸಮಸ್ಯೆ ಹಾಗೂ ಕೊರೋನಾ ವೈರಸ್ ಲಾಕ್‌ಡೌನ್‌ನಲ್ಲಿ ಎದುರಿಸಿದ ಸಾವಲುಗಳಿಗೆ ಸೂಕ್ತ ಕ್ರಮ
undefined
ಹಾಲು ಶೇಖರಣೆ, ಸಂಸ್ಕರಣೆ ಸೇರಿದಂತೆ ಮೂಲಭೂತ ಸೌಕರ್ಯ ಅಭಿವೃದ್ದಿಗೆ 15,000 ಕೋಟಿ ರೂಪಾಯಿ
undefined
ಮೆಡಿಸಿನ್ ಪ್ಲಾಂಟ್, ಔಷದಿ ಸಸ್ಯಗಳ ಬೆಳೆಸಲು, ತೋಟಗಾರಿಗೆ 4000 ಕೋಟಿ ರೂಪಾಯಿ
undefined
ಜೇನು ಕೃಷಿಗೆ ಬೇಕಾದ ಸಲಕರಣೆ, ಮೂಲ ಸೌಕರ್ಯ ಅಭಿವೃದ್ದಿಗೆ 500 ಕೋಟಿ ರೂಪಾಯಿ
undefined
ದವಸ ದಾನ್ಯ ಬೆಳೆದ ರೈತರಿಗೆ ಉತ್ತಮ ಬೆಲೆ ಸಿಗುವಂತೆ ಮಾಡುವುದಕ್ಕಾಗಿ ಅಗತ್ಯ ವಸ್ತು ಕಾಯ್ದೆ ತಿದ್ದುಪಡಿ
undefined
ತರಕಾರಿ ಹಣ್ಣು ಬೆಳೆದ ರೈತರಿಗೆ ಸರಿಯಾದ ಬೆಲೆ ಹಾಗೂ ಸಾಗಾಣಿಕೆ ಹಾಗೂ ಮಾರಾಟಕ್ಕೆ ಸುಲಭ ಅವಕಾಶ
undefined
ಉತ್ತಮ ಗುಣಣಟ್ಟದ ಕೃಷಿ ಉತ್ಪನ್ನಗಳಿಗೆ ಪ್ರೋತ್ಸಾಹ ಹಾಗೂ ಉತ್ತಮ ದರ ನಿಗದಿ
undefined
ಪ್ರಧಾನ ಮಂತ್ರಿ ಮತ್ಸ ಸಂಪದ ಯೋಜನೆ ಮೂಲಕ ಮೀನುಗಾರರಿಗೆ 20,000 ಕೋಟಿ ರೂಪಾಯಿ
undefined
click me!