Published : May 14, 2020, 03:13 PM ISTUpdated : May 14, 2020, 03:16 PM IST
ಕೊರೋನಾ ವೈರಸ್‌ನಿಂದಾಗಿ ದೇಶದ ಆರ್ಥಿಕತೆ ಮೇಲಾಗಿರುವ ಪರಿಣಾಮಗಳನ್ನು ಎದುರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ್ದ ಐತಿಹಾಸಿಕ ಹಾಗೂ ಭಾರಿ ಗಾತ್ರದ 20 ಲಕ್ಷ ಕೋಟಿ ರು. ಪ್ಯಾಕೇಜ್‌ನ ಮೊದಲ ಹಂತ ಬುಧವಾರ ಅನಾವರಣಗೊಂಡಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಣ್ಣ, ಅತಿಸಣ್ಣ ಹಾಗೂ ಮಧ್ಯಮ ಉದ್ದಿಮೆ (ಎಂಎಸ್‌ಎಂಇ), ಬ್ಯಾಂಕೇತರ ಹಣಕಾಸು ಸಂಸ್ಥೆ, ರಿಯಲ್ ಎಸ್ಟೇಟ್, ನೌಕರರು- ಕಂಪನಿಗಳಿಗೆ ನೌಕರರ ಭವಿಷ್ಯ ನಿಧಿ ವಿನಾಯಿತಿ, ಗುತ್ತಿಗೆದಾರರು, ವಿದ್ಯುತ್ ಕಂಪನಿಗಳಿಗೆ ಸುಮಾರು 6 ಲಕ್ಷ ಕೋಟಿ ರು. ಮೊತ್ತದ ಹಣಕಾಸು ನೆರವಿನ ಕ್ರಮಗಳನ್ನು ಪ್ರಕಟಿಸಿದ್ದಾರೆ. ಯಾವ ಕ್ಷೇತ್ರಕ್ಕೆ ಎಷ್ಟು ಹಣ ಘೋಷಿಸಿದ್ದಾರೆ? ಸಿಂಪಲ್ ಆಗಿ ತಿಳ್ಕೊಳ್ಳಿ