ಇನ್ಫೋಸಿಸ್ ಷೇರಿನ ಲಾಭಾಂಶ ತೆಗೆದುಕೊಂಡು ಬೇರೆಯಾದ ನಾರಾಯಣ ಮೂರ್ತಿ ಮಗ ರೋಹನ್ ಮೂರ್ತಿ!

First Published Mar 17, 2024, 6:29 PM IST

ಇನ್ಫೋಸಿಸ್ ಲಿಮಿಟೆಡ್ ಭಾರತದ ಐಟಿ ವಲಯಕ್ಕೆ ದೊಡ್ಡ ಹೆಸರು. ಕಂಪನಿಯು ಎನ್.ಆರ್. ನಾರಾಯಣ ಮೂರ್ತಿಯವರು 1981 ರಲ್ಲಿ ಸ್ಥಾಪನೆ ಮಾಡಿದರು. NYSE (ನ್ಯೂಯಾರ್ಕ್ ಸ್ಟಾಕ್ ಎಕ್ಸ್ಚೇಂಜ್) ಮತ್ತು BSE (ಬಾಂಬೆ ಸ್ಟಾಕ್ ಎಕ್ಸ್ಚೇಂಜ್) ನಲ್ಲಿ ಕಂಪೆನಿಯನ್ನು ಪಟ್ಟಿ ಮಾಡಲಾಗಿದೆ.  ಆದರೆ ಎನ್‌ಆರ್‌ಎನ್‌ ಅವರ ಮಗ ರೋಹನ್ ಮೂರ್ತಿ ಅಪ್ಪನ ಕಂಪೆನಿಯಲ್ಲಿ ದುಡಿಯಲು ಒಪ್ಪಲಿಲ್ಲ. ಹೀಗಾಗಿ ಕಂಪೆನಿ ತೊರೆದರು.  

ಇನ್ಫೋಸಿಸ್ ಭಾರತದ ಕೆಲವು ದೊಡ್ಡ ಕಂಪನಿಗಳಿಗೆ ಹಣಕಾಸು, ಉತ್ಪಾದನೆ, ವಿಮೆ ಮತ್ತು ಇತರ ಹಲವು ಡೊಮೇನ್‌ಗಳಿಗೆ ನಿರ್ವಹಣೆ ಮತ್ತು ಸಾಫ್ಟ್‌ವೇರ್ ಅಭಿವೃದ್ಧಿ ಸೇವೆಗಳನ್ನು ಒದಗಿಸುತ್ತದೆ. ಇದು ಮಾತ್ರವಲ್ಲದೆ, ಇನ್ಫೋಸಿಸ್ ಹೊರಗುತ್ತಿಗೆ, ಸಲಹಾ ಮತ್ತು ಮುಂದಿನ ಪೀಳಿಗೆಯ ಇಂಟಿಗ್ರೇಟೆಡ್ ಎಐ ಪ್ಲಾಟ್‌ಫಾರ್ಮ್ ಅನ್ನು ಒದಗಿಸುವಲ್ಲಿ ಜಾಗತಿಕವಾಗಿ ಮನ್ನಣೆ ಪಡೆದಿದೆ. ಕಂಪನಿಯ ಅಧಿಕೃತ ವೆಬ್‌ಸೈಟ್ ಪ್ರಕಾರ, ಇನ್ಫೋಸಿಸ್ ಪ್ರಸ್ತುತ ಪ್ರಪಂಚದಾದ್ಯಂತ 50 ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ಬಹುರಾಷ್ಟ್ರೀಯ ಐಟಿ ಕಂಪನಿ, ಇನ್ಫೋಸಿಸ್ ಕರ್ನಾಟಕದ ಬೆಂಗಳೂರಿನಲ್ಲಿ ತನ್ನ ಪ್ರಧಾನ ಕಛೇರಿಯನ್ನು ಹೊಂದಿದೆ. ಬ್ರ್ಯಾಂಡ್ ಫೈನಾನ್ಸ್ 2024 ರ ವರದಿಯ ಪ್ರಕಾರ, ಆಕ್ಸೆಂಚರ್ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಲಿಮಿಟೆಡ್ ನಂತರ ನಾರಾಯಣ ಮೂರ್ತಿಯವರ ಇನ್ಫೋಸಿಸ್ ವಿಶ್ವದ ಮೂರನೇ ಅತ್ಯಮೂಲ್ಯ ಐಟಿ ಸೇವೆಗಳ ಬ್ರ್ಯಾಂಡ್ ಆಗಿದೆ.

ನಾರಾಯಣ ಮೂರ್ತಿ ಮತ್ತು ಅವರ ತಂಡವು ಪ್ರಪಂಚದ ಪ್ರತಿಯೊಬ್ಬ ಯುವ ಉದ್ಯಮಿಗಳಿಗೆ ಸ್ಫೂರ್ತಿಯಾಗಿದೆ ಏಕೆಂದರೆ ಈ ಬೃಹತ್ ಐಟಿ ಸಂಸ್ಥೆಯು ಒಂದೇ ಒಂದು ಕಂಪ್ಯೂಟರ್ ಅನ್ನು ಖರೀದಿಸಲು ಸಾಧ್ಯವಾಗದ ಸಮಯವಿತ್ತು. 1981 ರಲ್ಲಿ ಸ್ಥಾಪನೆಯಾಗಿ ಸುಮಾರು ಎರಡು ವರ್ಷಗಳ ನಂತರ ಇನ್ಫೋಸಿಸ್ ತನ್ನ ಮೊದಲ ಕಂಪ್ಯೂಟರ್ ಅನ್ನು ಖರೀದಿ ಮಾಡಿತು.

ನಾರಾಯಣ ಮೂರ್ತಿಯವರು ಫೆಬ್ರವರಿ 10, 1978 ರಂದು ಸುಧಾ ಮೂರ್ತಿ ಅವರನ್ನು ವಿವಾಹವಾದರು.1980 ರಲ್ಲಿ ಅಕ್ಷತಾ ಮೂರ್ತಿ ಮತ್ತು 1983 ರಲ್ಲಿ ರೋಹನ್ ಮೂರ್ತಿ ಮಕ್ಕಳು ಹುಟ್ಟಿದರು. ಅಕ್ಷತಾ ಯುನೈಟೆಡ್ ಕಿಂಗ್‌ಡಮ್‌ನ ಪ್ರಧಾನಿ ರಿಷಿ ಸುನಕ್ ಪತ್ನಿಯಾಗಿದ್ದಾರೆ. ದಂಪತಿಗೆ ಅನುಷ್ಕಾ ಮತ್ತು ಕೃಷ್ಣ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ರೋಹನ್ 2011ರಲ್ಲಿ  ಅಪರ್ಣಾ ಕೃಷ್ಣನ್ ಅವರನ್ನು ಮದುವೆಯಾಗಿದ್ದಾರೆ. ದಂಪತಿ ನವೆಂಬರ್ 10, 2023 ರಂದು ಗಂಡು ಮಗುವನ್ನು ಸ್ವಾಗತಿಸಿದರು. ಏಕಗ್ರಾಹ್ ಎಂದು ಹೆಸರಿಸಿದರು. ಇದು ರೋಹನ್‌ ಅವರಿಗೆ ಎಡನೇ ಮದುವೆಯಾಗಿದೆ. ಈ ಹಿಂದೆ ಟಿವಿಎಸ್ ಮೋಟಾರ್‌ನ ಅಧ್ಯಕ್ಷ  ವೇಣು ಶ್ರೀನಿವಾಸನ್ ಅವರ ಪುತ್ರಿ ಲಕ್ಷ್ಮಿ ವೇಣು ಅವರನ್ನು ವಿವಾಹವಾಗಿದ್ದರು. 5 ವರ್ಷಗಳ ಬಳಿಕ ಬೇರ್ಪಟ್ಟಿದ್ದರು. 

ರೋಹನ್ ತಮ್ಮ ಶಾಲಾ ಶಿಕ್ಷಣವನ್ನು ಬೆಂಗಳೂರಿನ ಪ್ರಸಿದ್ಧ ಬಿಷಪ್ ಕಾಟನ್ ಬಾಲಕರ ಶಾಲೆಯಲ್ಲಿ ಪೂರ್ಣಗೊಳಿಸಿದರು. ಅವರ ಶಾಲಾ ಶಿಕ್ಷಣ ಮುಗಿದ ನಂತರ, ಅವರು ಪ್ರತಿಷ್ಠಿತ ಕಾರ್ನೆಲ್ ವಿಶ್ವವಿದ್ಯಾನಿಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿಪೂರ್ವ ಪದವಿಯನ್ನು ಪಡೆಯಲು US ಗೆ ಹೋದರು. ರೋಹನ್ ಅವರು ಹಾರ್ವರ್ಡ್ ವಿಶ್ವವಿದ್ಯಾನಿಲಯದಿಂದ ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಮಾಡಿದರು, ಅದು 2011 ರಲ್ಲಿ ಪೂರ್ಣಗೊಂಡಿತು.  

ಈ ಎಲ್ಲಾ ಪದವಿಗಳೊಂದಿಗೆ, ರೋಹನ್ ಮೂರ್ತಿ ಜೂನ್ 2013 ರಲ್ಲಿ ತಮ್ಮ ತಂದೆಯ  ಕಚೇರಿಯಲ್ಲಿ ಕಾರ್ಯನಿರ್ವಾಹಕ ಸಹಾಯಕರಾಗಿ ಇನ್ಫೋಸಿಸ್‌ನಲ್ಲಿ ಸೇರಿಕೊಂಡರು. ಆದಾಗ್ಯೂ, ಜೂನ್ 2014 ರಲ್ಲಿ, ನಾರಾಯಣ ಮೂರ್ತಿ ಇನ್ಫೋಸಿಸ್ ತೊರೆದರು. ಅಪ್ಪ ನೆಟ್ಟ ಆಲದ ಮರಕ್ಕೆ ಜೋತು ಬೀಳದೆ ಸಂಪೂರ್ಣವಾಗಿ ಇನ್ಫೊಸೀಸ್ ತೊರೆದು. ತಮ್ಮ ಕನಸಿನ ಯೋಜನೆಗೆ ಮುಂದಾದರು. 

2014 ರಲ್ಲಿ, ರೋಹನ್ ಮೂರ್ತಿ ಅವರು ಜಾರ್ಜ್ ನೈಚಿಸ್ ಮತ್ತು ಅರ್ಜುನ್ ನಾರಾಯಣ್ ಅವರೊಂದಿಗೆ ಸೊರೊಕೊವನ್ನು ಸ್ಥಾಪಿಸಿದರು. ಬಹು ಕೃತಕ ಬುದ್ಧಿಮತ್ತೆ ಸಂಪನ್ಮೂಲಗಳ ಸಹಾಯದಿಂದ ತಂತ್ರಜ್ಞಾನದಲ್ಲಿ ಪರಿಣತಿ ಹೊಂದುವ ಮೂಲಕ ವ್ಯವಹಾರಗಳು ಡಿಜಿಟಲ್ ರೂಪಾಂತರವನ್ನು ಹೇಗೆ ನಿರ್ವಹಿಸುತ್ತವೆ ಎಂಬುದನ್ನು ಬದಲಾಯಿಸುವುದು ರೋಹನ್ ಮತ್ತು ಅವರ ತಂಡದ  ಮೂಲ ಉದ್ದೇಶವಾಗಿದೆ.  

ರೋಹನ್ ಪ್ರಸ್ತುತ ಸೊರೊಕೊದಲ್ಲಿ CTO (ಮುಖ್ಯ ತಂತ್ರಜ್ಞಾನ ಅಧಿಕಾರಿ) ಆಗಿ ಕೆಲಸ ಮಾಡುತ್ತಿದ್ದಾರೆ. ಸೊರೊಕೊ ತನ್ನ ಆದಾಯವನ್ನು ಎಂದಿಗೂ ಬಹಿರಂಗಪಡಿಸದಿದ್ದರೂ, ನೆಲ್ಸನ್‌ಹಾಲ್ ವೆಂಡರ್ ಮೌಲ್ಯಮಾಪನ ಮತ್ತು ಅಸೆಸ್‌ಮೆಂಟ್ ಟೂಲ್ ಪ್ರಕಾರ, 2022 ರಲ್ಲಿ ಈ ಕಂಪೆನಿಯ  ಆದಾಯವು ಸುಮಾರು ರೂ.  150 ಕೋಟಿ ರೂ.  ಆಗಿದೆ.

ರೋಹನ್ ಮೂರ್ತಿ ಅವರು ವಿಶ್ವದ ಬಿಲಿಯನೇರ್‌ಗಳ ಕೆಲವೇ ಮಕ್ಕಳಲ್ಲಿ ಒಬ್ಬರು, ಅವರು ತಮ್ಮದೇ ಆದ ಸಾಮ್ರಾಜ್ಯವನ್ನು ಕಟ್ಟಲು  ನಿರ್ಧರಿಸಿದರು.  600,000 ಕೋಟಿ ಸಂಸ್ಥೆ ಇನ್ಫೋಸೀಸ್ ಉಪಾಧ್ಯಕ್ಷರಾಗುವ ಅವಕಾಶವನ್ನು ರೋಹನ್ ಹೇಗೆ ತಿರಸ್ಕರಿಸಿದರು ಎಂಬುದು ಇಂದಿಗೂ ತಿಳಿದಿಲ್ಲ.  ತನ್ನ ಸ್ವಂತ ಸ್ಟಾರ್ಟ್ಅಪ್ ಆರಂಭಿಸಲು ರೋಹನ್ ನಾರಾಯಣ ಮೂರ್ತಿಯವರ ಮಗನಾಗಿರುವ ಕಾರಣ ರೋಹನ್, 5.55 ಟ್ರಿಲಿಯನ್ (ರೂ. 5.55 ಲಕ್ಷ ಕೋಟಿ) ಮೌಲ್ಯದ ಇನ್ಫೋಸಿಸ್ ಕಂಪನಿಯ ಬೃಹತ್ ಪಾಲನ್ನು ಪಡೆದಿದ್ದಾರೆ. 

ಇದರಿಂದ  ಸೊರೊಕೊ ಆರಂಭಿಸಿದರು ಎನ್ನಲಾಗುತ್ತೆ. ಇನ್ಫೋಸಿಸ್‌ನಲ್ಲಿರುವ ರೋಹನ್‌ ಅವರ 6,08,12,892 ಷೇರುಗಳ  ಲಾಭಾಂಶದ ಆದಾಯದಲ್ಲಿ (ಶೇಕಡಾ 1.67 ರಷ್ಟು) 106.42 ಕೋಟಿ ರೂ. ಪಡೆಯುತ್ತಾರೆ. ಎಂದು ಬ್ಯುಸಿನೆಸ್ ಟುಡೇ  ವರದಿ ಮಾಡಿದೆ.   

click me!