ರಿಲಯನ್ಸ್‌ನಲ್ಲಿ ಅತೀ ಹೆಚ್ಚು ಪಾಲುದಾರರು ಯಾರು? ಮುಕೇಶ್ ಅಂಬಾನಿ-ಪತ್ನಿ, ಮಕ್ಕಳು ಅಲ್ಲ!

First Published | Mar 17, 2024, 4:18 PM IST

ರಿಲಯನ್ಸ್‌ನಲ್ಲಿ ಅತಿ ಹೆಚ್ಚು ಪಾಲನ್ನು ಹೊಂದಿರುವ ವ್ಯಕ್ತಿ ಏಷ್ಯಾದ ಶ್ರೀಮಂತ  ಮುಖೇಶ್ ಅಂಬಾನಿ, ನೀತಾ ಅಂಬಾನಿ, ಇಶಾ ಅಂಬಾನಿ, ಆಕಾಶ್ ಅಂಬಾನಿ ಅಥವಾ ಅನಂತ್ ಅಂಬಾನಿ ಅಲ್ಲ. ಅದ್ಯಾರು ಎಂಬು ಕುತೂಹಲದ ಪ್ರಶ್ನೆಗೆ ಇಲ್ಲಿದೆ ಉತ್ತರ.

ಅಂಬಾನಿ ಕುಟುಂಬವನ್ನು ಒಳಗೊಂಡಿರುವ ರಿಲಯನ್ಸ್ ಪ್ರವರ್ತಕರ ಗುಂಪಿನಿಂದ ಒಟ್ಟಾರೆಯಾಗಿ ಕಂಪನಿಯ 50.39% ಷೇರುಗಳನ್ನು ರಿಲಯನ್ಸ್ ಇಂಡಸ್ಟ್ರೀಸ್‌  ಹೊಂದಿದೆ. ಉಳಿದ 49.61% ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮತ್ತು ಕಾರ್ಪೊರೇಟ್ ಘಟಕಗಳನ್ನು ಒಳಗೊಂಡಂತೆ ಸಾರ್ವಜನಿಕ ಷೇರುದಾರರು ಹೊಂದಿದ್ದಾರೆ.

ರಿಲಯಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಕುಟುಂಬದ ಎಲ್ಲಾ ಸದಸ್ಯರು ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಮಾತೃಪ್ರಧಾನ ಕೋಕಿಲಾಬೆನ್‌ನೊಂದಿಗೆ ತೊಡಗಿಸಿಕೊಂಡಿದ್ದಾರೆ. ಕೋಕಿಲಾಬೆನ್‌ ಕಂಪನಿಯಲ್ಲಿ 0.24% ಪಾಲನ್ನು ಹೊಂದಿದ್ದು, 1,57,41,322 (1.57 ಕೋಟಿ) ಷೇರುಗಳನ್ನು ಹೊಂದಿದ್ದಾರೆ. ಹೀಗಾಗಿ ಮುಖೇಶ್ ಅಂಬಾನಿಯವರ ಬೃಹತ್ ನಿವ್ವಳ ಮೌಲ್ಯ  117 ಶತಕೋಟಿ ಬಿಲಿಯನ್‌ (ರೂ 97,66,89,81,30,000) ಹೊರತಾಗಿಯೂ, ಗರಿಷ್ಠ ಪಾಲುದಾರರು ಅಂಬಾನಿ ಕುಟುಂಬದ ಕೋಕಿಲಾಬೆನ್ ಅಂಬಾನಿಯಾಗಿದ್ದಾರೆ. 

Tap to resize

ಕೋಕಿಲಾಬೆನ್ ಅವರು ರಿಲಯನ್ಸ್ ಇಂಡಸ್ಟ್ರೀಸ್‌ನ ದೈನಂದಿನ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿಲ್ಲವಾದರೂ, ಅವರ ಪ್ರಭಾವ ಮತ್ತು ಮಾರ್ಗದರ್ಶನವು ಕುಟುಂಬದ ಪ್ರಯಾಣಕ್ಕೆ ಅವಿಭಾಜ್ಯ ಅಂಗವಾಗಿದೆ. ಅವರ ಜೊತೆಯಲ್ಲಿ, ಮುಖೇಶ್ ಅಂಬಾನಿ ಅವರ ಮೂವರು ಮಕ್ಕಳಾದ ಆಕಾಶ್ ಅಂಬಾನಿ, ಇಶಾ ಅಂಬಾನಿ ಮತ್ತು ಅನಂತ್ ಅಂಬಾನಿ ಪ್ರತಿಯೊಬ್ಬರೂ 80,52,021 ಷೇರುಗಳನ್ನು ಹೊಂದಿದ್ದಾರೆ.  ಅಂದರೆ ಕಂಪನಿಯಲ್ಲಿ 0.12% ಪಾಲನ್ನು ಹೊಂದಿದ್ದಾರೆ.

ಇನ್ನು ಮುಖೇಶ್ ಅಂಬಾನಿ ಮಾತ್ರ 75 ಲಕ್ಷ ಅಥವಾ 0.12% ಷೇರುಗಳನ್ನು ಹೊಂದಿದ್ದಾರೆ ಮತ್ತು ಅವರ ನೀತಾ ಅಂಬಾನಿ  ಅವರು ನಲ್ಲಿ 0.12% ಪಾಲನ್ನು ಹೊಂದಿದ್ದಾರೆ. ಹೀಗಾಗಿ ಮುಕೇಶ್ ಅವರ ತಾಯಿಯೇ ಕಂಪನಿಯಲ್ಲಿ ಅತಿದೊಡ್ಡ ವೈಯಕ್ತಿಕ ಷೇರುದಾರರಾಗಿದ್ದಾರೆ. 

2022 ರಲ್ಲಿ, ಇಶಾ ಅಂಬಾನಿ ಅವರನ್ನು ರಿಲಯನ್ಸ್ ರಿಟೇಲ್‌ನ ಮುಖ್ಯಸ್ಥೆಯನ್ನಾಗಿ ನೇಮಿಸಲಾಯಿತು, ಆದರೆ ಆಕಾಶ್ ಅಂಬಾನಿ ಜೂನ್ 2022 ರಲ್ಲಿ ರಿಲಯನ್ಸ್ ಜಿಯೋದ ಅಧ್ಯಕ್ಷರಾದರು. ಆಗಸ್ಟ್ 2022 ರಲ್ಲಿ ಅನಂತ್ ಅಂಬಾನಿ ಕಂಪನಿಯ ಎನರ್ಜಿ ವರ್ಟಿಕಲ್‌ನ ಮುಖ್ಯಸ್ಥರಾಗಿ ನೇಮಕಗೊಂಡರು. 
 

ಇತ್ತೀಚೆಗೆ  ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಅನಂತ್ ಅಂಬಾನಿ ತಮ್ಮ ಒಡಹುಟ್ಟಿದ ಆಕಾಶ್ ಅಂಬಾನಿ ಮತ್ತು ಇಶಾ ಅಂಬಾನಿ ಅವರೊಂದಿಗಿನ ಸಂಬಂಧದ ಬಗ್ಗೆ ತೆರೆದಿಟ್ಟರು. ಸಹೋದರ ಆಕಾಶ್ ಅಂಬಾನಿ ಅವರಿಗೆ ಶ್ರೀರಾಮನಿದ್ದಂತೆ ಮತ್ತು ಸಹೋದರಿ ಇಶಾ ಅಂಬಾನಿ ದೈವಿಕ ತಾಯಿಯಂತೆ ಎಂದು ಅನಂತ್ ಬಹಿರಂಗಪಡಿಸಿದ್ದಾರೆ. 
 

"ಅವರಿಬ್ಬರೂ ನನಗಿಂತ ಹಿರಿಯರು. ನಾನು ಅವರ ಹನುಮಂತ, ನನ್ನ ಅಣ್ಣ ನನ್ನ ರಾಮ ಮತ್ತು ನನ್ನ ಸಹೋದರಿ ನನಗೆ ತಾಯಿಯಂತಿದ್ದಾರೆ. ಅವರಿಬ್ಬರೂ ನನ್ನನ್ನು ಯಾವಾಗಲೂ ರಕ್ಷಿಸಿದ್ದಾರೆ, ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಅಥವಾ ಸ್ಪರ್ಧೆಯಿಲ್ಲ. ನಾವು ಒಟ್ಟಿಗೆ ಅಂಟಿಕೊಂಡಿರುತ್ತೇವೆ. ಫೆವಿಕ್ವಿಕ್ ನಂತೆ ಎಂದು ಅನಂತ್ ಅಂಬಾನಿ  ಹೇಳಿದ್ದರು.
 

Latest Videos

click me!