ಸೊಸೆಯಾಗಿ ಆಯ್ಕೆ ಮಾಡಿದ್ದ ಮಾವ ಧೀರೂಭಾಯಿ ಮೇಲೆ ಆಕ್ರೋಶಗೊಂಡಿದ್ದ ನೀತಾ ಅಂಬಾನಿ!

First Published Mar 13, 2024, 5:04 PM IST

ಏಷ್ಯಾದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ  ಸಮಚಿತ್ತದ ಪ್ರತಿರೂಪ. ಇದಕ್ಕೆ ಪುರಾವೆ ಎಂದರೆ  ಸಾರ್ವಜನಿಕ ಜೀವನದಲ್ಲಿ ಅವರು ನಡೆದುಕೊಳ್ಳುವ ರೀತಿಯಿಂದ ಕಂಡುಬರುತ್ತದೆ. ಆದರೆ ನೀತಾ ಮತ್ತು ಮುಕೇಶ್ ಅವರ ಪ್ರೇಮಕಥೆ ನಿಮಗೆ ಗೊತ್ತಾ? ಮಾವ ಧೀರೂಭಾಯಿಗೆ ನೀತಾ ಗದರಿದ ಕಥೆ ಗೊತ್ತಾ?

ನೀತಾ ಅಂಬಾನಿ ಮತ್ತು ಮುಖೇಶ್ ಅಂಬಾನಿ 1965 ರಲ್ಲಿ ತಮ್ಮ ಕುಟುಂಬದ ಹಿರಿಯರ ಆಶೀರ್ವಾದದೊಂದಿಗೆ ವಿವಾಹವಾದರು. ವೈಭವದ ಒಗ್ಗಟ್ಟಿನ  ಜೀವನ ಆರಂಭಿಸಿದರು. ಆದರೆ ಇದಕ್ಕೂ ಮೊದಲು, ನೀತಾ ಸಾಮಾನ್ಯರಂತೆ ಕನಸುಗಳನ್ನು ಹೊಂದಿರುವ ಸಾಮಾನ್ಯ ಹುಡುಗಿಯಾಗಿದ್ದರು. ನೀತಾ ಅವರು ಮುಖೇಶ್ ಅಂಬಾನಿಯನ್ನು ವಿವಾಹವಾದಾಗ ಶಿಕ್ಷಕರಾಗಿದ್ದರು. ಮದುವೆಯ ನಂತರ ಎರಡು ವರ್ಷಗಳ ಕಾಲ ತಮ್ಮ ಶಿಕ್ಷಕ ವೃತ್ತಿಯನ್ನು ಮುಂದುವರೆಸಿದರು. 

ನೀತಾ ಅಂಬಾನಿಯನ್ನು ಅಂಬಾನಿ ಕುಟುಂಬದ ಸೊಸೆಯನ್ನಾಗಿ ಅವರ ಮಾವ ಧೀರೂಭಾಯಿ ಅಂಬಾನಿಯವರು ಆಯ್ಕೆ ಮಾಡಿದ್ದರು. ಅದಕ್ಕೆ ತಕ್ಕನಂತೆ ಇಂದು ನೀತಾ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ಅನ್ನು ಹೊಸ ಮಟ್ಟದ ಯಶಸ್ಸಿನತ್ತ ಕೊಂಡೊಯ್ದರು ಮತ್ತು ಅದರ ಕುಟುಂಬದ ಸಮಗ್ರತೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹಾಗೇ ಉಳಿಸಿಕೊಳ್ಳಲು ಭದ್ರ ಬುನಾದಿ ಹಾಕಿದ್ದಾರೆ.

ಧೀರೂಭಾಯಿ ಅಂಬಾನಿ ಒಬ್ಬ ದಾರ್ಶನಿಕ ಉದ್ಯಮಿಯಾಗಿದ್ದು, ಅವರು ಯಾವಾಗಲೂ ತಮ್ಮ ಕುಟುಂಬಕ್ಕೆ ಉತ್ತಮವಾದದ್ದನ್ನೇ ಮಾಡುತ್ತಿದ್ದರು. 2003 ರಲ್ಲಿ BBC ಗೆ ನೀಡಿದ ಸಂದರ್ಶನದಲ್ಲಿ, ನೀತಾ ಅಂಬಾನಿ ಅವರು ಮಾವ ಧೀರೂಭಾಯಿ ಅಂಬಾನಿ  ತನ್ನ ಮಗ ಮುಖೇಶ್ ಜೊತೆಗೆ ಜೀವನ ಸಂಗಾತಿಯಾಗುವ ಬಗ್ಗೆ ಚರ್ಚಿಸಲು ನನ್ನನ್ನು ಕರೆಸಿದ್ದರು ಎಂದು ಬಹಿರಂಗಪಡಿಸಿದ್ದರು.

ಈ ಘಟನೆಯನ್ನು ನೆನಪಿಸಿಕೊಳ್ಳುತ್ತಾ ಒಂದು ದಿನ ನಾನು ಪರೀಕ್ಷೆಗೆ ಓದುತ್ತಿದ್ದೆ  ಫೋನ್ ರಿಂಗಣಿಸಿದಾಗ  ಕರೆ ಸ್ವೀಕರಿಸಿದೆ. ಕರೆ ಮಾಡಿದವರು ತನ್ನನ್ನು ಧೀರೂಭಾಯಿ ಅಂಬಾನಿ ಎಂದು ಪರಿಚಯಿಸಿಕೊಂಡರು, ಆದರೆ ನಾನು ಅದನ್ನು ತಮಾಷೆ ಎಂದು ಭಾವಿಸಿ ಕರೆಯನ್ನು ಕಟ್ ಮಾಡಿದೆ. ಫೋನ್ ಮತ್ತೆ ರಿಂಗಾಯಿತು ಮತ್ತೆ ತನ್ನನ್ನು ಶ್ರೀ ಅಂಬಾನಿ ಎಂದು ಗುರುತಿಸಿಕೊಂಡರು, ಆದರೆ ಈ ಸಮಯದಲ್ಲಿ, ನನಗೆ ಸ್ವಲ್ಪ  ಕೋಪಬಂತು. ನನ್ನನ್ನು ಮೂರ್ಖರನ್ನಾಗಿ ಮಾಡಬೇಡಿ ಈ ರೀತಿ ಮಾಡುವುದನ್ನು ನಿಲ್ಲಿಸಿ ಎಂದು  ಗದರಿ ಕರೆಯನ್ನು ಕಟ್ ಮಾಡಿದೆ.

ಮೂರನೇ ಬಾರಿ ಫೋನ್ ರಿಂಗಣಿಸಿತು, ನಾನು ಆ ಕರೆಯನ್ನು ತೆಗೆದುಕೊಳ್ಳಲು ಸಹ  ಯೋಚಿಸಲಿಲ್ಲ. ಆಗ ನನ್ನ ತಂದೆ ಕರೆ ಎತ್ತಿಕೊಂಡರು, ಮತ್ತು ಇದ್ದಕ್ಕಿದ್ದಂತೆ ಅವರ ಮಾತನಾಡುವ ಶೈಲಿ, ಮುಖಭಾವ  ಮತ್ತು ಭಂಗಿ ಬದಲಾಯಿತು. ತಂದೆ ಹೇಳಿದರು ನೀತಾ, ಇದು ನಿಜವಾಗಿ ಧೀರೂಭಾಯಿ ಅಂಬಾನಿ, ಅವರೊಂದಿಗೆ ನಯವಾಗಿ ಮಾತನಾಡಬಹುದೇ? ಎಂದು ಸೂಚಿಸಿದರು.

ಇನ್ನು ತಮ್ಮ ಮತ್ತು ನೀತಾ ಅವರ ಪ್ರೇಮಕಥೆಯಲ್ಲಿ ಅವರ ತಂದೆ ಮ್ಯಾಚ್ ಮೇಕರ್ ಪಾತ್ರವನ್ನು ವಹಿಸಿದ್ದಾರೆ ಎಂದು ಮುಖೇಶ್ ಅಂಬಾನಿ ಬಹಿರಂಗಪಡಿಸಿದ್ದಾರೆ. ಅದೇ ಸಂದರ್ಶನದಲ್ಲಿ ಮಾತನಾಡಿದ ಮುಖೇಶ್ ಅಂಬಾನಿ, ತಮ್ಮ ತಂದೆ ತನ್ನೊಂದಿಗೆ ಮತ್ತು ನೀತಾ ಅವರೊಂದಿಗೆ ಪ್ರತ್ಯೇಕವಾಗಿ ಈ ಬಗ್ಗೆ ಮಾತನಾಡಿ ಇಬ್ಬರನ್ನು ಕೂಡ ಮದುವೆಯಾಗಲು ಮನವೊಲಿಸಿದರು. ಅವರು ನಮ್ಮಿಬ್ಬರ ಸಂಬಂಧದಲ್ಲಿ ಮ್ಯಾಚ್ ಮೇಕರ್ ಪಾತ್ರವನ್ನು ನಿರ್ವಹಿಸಿದವರು. ಇದು ನಮ್ಮ ವೈಯಕ್ತಿಕ ಹಿತಾಸಕ್ತಿ ಎಂದೂ ನಮ್ಮಿಬ್ಬರಿಗೂ ತಿಳಿಹೇಳುತ್ತಿದ್ದರು. ತಂದೆ ನೀತಾಳೊಂದಿಗೆ ಮತ್ತು ನನ್ನೊಂದಿಗೆ ಕೂಡ ಸ್ವತಂತ್ರವಾಗಿ ಮಾತನಾಡುತ್ತಿದ್ದರು ಎಂದು  ಹೇಳಿದ್ದಾರೆ.

ಉದ್ಯಮಿ ಮುಕೇಶ್ ಅಂಬಾನಿ ತಮ್ಮ ಪತ್ನಿ ನೀತಾ ಅಂಬಾನಿಗೆ ಮದುವೆ ಪ್ರಪೋಸ್ ಮಾಡಿದ್ದು ದಶಕಗಳ ಹಿಂದೆ ಮುಂಬೈನ ಜನನಿಬಿಡ ರಸ್ತೆಯ ಟ್ರಾಫಿಕ್‌ ಸಿಗ್ನಲ್‌ ನಲ್ಲಿ ವಾಹನಗಳು ಮತ್ತು ಹಾರ್ನ್ ಗಳ ಸದ್ದಿನಲ್ಲಿ. ಈ ಬಗ್ಗೆ ಹೇಳಿಕೊಂಡ ಅಂಬಾನಿ, ನೀತಾ ನನ್ನ ಲೇಡಿ ಲವ್, ನಿಜವಾಗಿಯೂ ಆಕೆ ನನ್ನ ಮೊದಲ ಹುಡುಗಿ. ಹಲವು ಭೇಟಿಗಳ ನಂತರ ಆಕೆಯನ್ನು ಜೀವನ ಸಂಗಾತಿ ಮಾಡಿಕೊಳ್ಳಬೇಕೆಂದುಕೊಂಡೆ ಎಂದಿದ್ದಾರೆ. 

ಮುಕೇಶ್ ತಾವು ಪ್ರಪೋಸ್‌ ಮಾಡಿದ ದಿನವನ್ನು ನೆನಪಿಸಿಕೊಂಡಿದ್ದು, ಒಮ್ಮೆ ಅವರು ನೀತಾ ಅವರನ್ನು ಡ್ರೈವ್‌ಗೆ ಕರೆದೊಯ್ದರು. ಮುಂಬೈನ ಪೆದ್ದಾರ್ ರಸ್ತೆಯ ಟ್ರಾಫಿಕ್ ನಲ್ಲಿ  ಚಲಿಸುವಾಗ ಆ ಅವಕಾಶವನ್ನು ಬಳಸಿಕೊಂಡ ಮುಕೇಶ್ ಅಂಬಾನಿ ಕಾರಿನಲ್ಲಿ ನೀತಾಗೆ ಮದುವೆಯ ಬಗ್ಗೆ ಪ್ರಶ್ನೆಯನ್ನು ಹಾಕಿದರು. ಅಂತಹ ಪರಿಸ್ಥಿತಿಯಲ್ಲಿ ಯಾವುದೇ ಹುಡುಗಿ ನಿರೀಕ್ಷಿಸಿರುವುದಿಲ್ಲ. ಮೊದಲು ಇದು ನೀತಾಗೆ ಆಶ್ಚರ್ಯವನ್ನುಂಟು ಮಾಡಿತು ಆದರೆ ನಂತರ ಆಕೆ ಒಪ್ಪಿಕೊಂಡಳು. ಇದು ಅವರ ಪ್ರೇಮಕಥೆಯ ಆಕಸ್ಮಿಕದ  ಅದೃಷ್ಟ.

ವೃತ್ತಿನಿರತ ಭರತನಾಟ್ಯ ನೃತ್ಯಗಾರ್ತಿಯಾಗಿರುವ ನೀತಾ ಅವರನ್ನು ಮೊದಲು  ಧೀರೂಭಾಯಿ ಅಂಬಾನಿ ಅವರ ಒಂದು ಪ್ರದರ್ಶನದ ಸಮಯದಲ್ಲಿ  ನೋಡಿದರು. ನೀತಾ ತಮ್ಮ ಹಿರಿಯ ಮಗ ಮುಕೇಶ್‌ಗೆ ಒಳ್ಳೆ ಜೋಡಿಯಾಗಬಹುದೆಂದು ಇಷ್ಟಪಟ್ಟರು. ಆದರೂ ಸರಣಿ ಭೇಟಿಯ ನಂತರ ನೀತಾಗೆ ಮುಖೇಶ್ ಅವರ ಬಗ್ಗೆ ತಿಳಿದುಕೊಳ್ಳುವ ಅವಕಾಶ ಸಿಕ್ಕಿತು. ಮುಕೇಶ್ ಅವರ ನಮೃತೆಗೆ ನೀತಾ ಆಶ್ಚರ್ಯಗೊಂಡರು. ಇದೇ ವೇಳೆ  ನೀತಾಳ ಸೌಂದರ್ಯ ಮತ್ತು ಸ್ವಭಾವದಿಂದ ಪ್ರಭಾವಿತನಾದ ಮುಖೇಶ್‌ ಅವರು ಮದುವೆಯಾಗುವ ಬಗ್ಗೆ ನೇರವಾಗಿ ಕೇಳಿದರು.

ಚಿಕ್ಕ ಶಾಲೆಯೊಂದರಲ್ಲಿ ವೃತ್ತಿಪರ ನೃತ್ಯ ತರಬೇತುದಾರರಾಗಿದ್ದ ನೀತಾ ಅವರು ಮುಕೇಶ್  ರನ್ನು ಮದುವೆಯಾಗಲು  ಷರತ್ತುಗಳನ್ನಿಟ್ಟರು. ಮದುವೆಯ ನಂತರವೂ ತಮ್ಮ ವೃತ್ತಿಯನ್ನು ಮುಂದುವರಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿಕೊಂಡರು. ಅಂಬಾನಿ ಕುಟುಂಬವು ಇದಕ್ಕೆ ಸಮ್ಮತಿ ಸೂಚಿಸಿತು. ನಂತರ, ನೀತಾ ರಿಲಯನ್ಸ್ ಗ್ರೂಪ್‌ನಲ್ಲಿ ರಿಲಯನ್ಸ್ ಫೌಂಡೇಶನ್ ಮತ್ತು ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನ ಅಧ್ಯಕ್ಷರಾಗಿ ಮತ್ತು ಸಂಸ್ಥಾಪಕರಾಗಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ನ ನಿರ್ದೇಶಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು.

click me!