ಟೆಲಿಕಾಂ ವಲಯದಲ್ಲಿ ಸಂಚಲನ ಸೃಷ್ಟಿಸಿ, ಜನಸಾಮಾನ್ಯರಿಗೂ ದೂರವಾಣಿ, ಮೊಬೈಲ್ ಸೌಲಭ್ಯ ದೊರಕುವಂತೆ ಮಾಡಿರೋ ಹೆಗ್ಗಳಿಕೆ ಬಿಲಿಯನೇರ್ ಮುಕೇಶ್ ಅಂಬಾನಿ ಒಡೆತನದ ಸಂಸ್ಥೆಗಳಿಗೆ ಸಲ್ಲುತ್ತದೆ. ಜಿಯೋಸ್ಪೇಸ್ ಫೈಬರ್ ಮೂಲಕ ಟೆಲಿಕಾಂ ಲೋಕದಲ್ಲಿ ಅಂಬಾನಿ ಕುಟುಂಬ ಕೋಟಿ ಕೋಟಿ ವ್ಯವಹಾರವನ್ನು ನಡೆಸುತ್ತಿದೆ.
ಸದ್ಯ ಮುಕೇಶ್ ಅಂಬಾನಿ ತನ್ನ ರಿಲಯನ್ಸ್ ಜಿಯೋ ಅಂಗಸಂಸ್ಥೆಯ ಮೂಲಕ ಭಾರತೀಯ ಇಂಟರ್ನೆಟ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದಾರೆ. ಆದರೆ ಮುಂದಿನ ವರ್ಷಗಳಲ್ಲಿ ಜಿಯೋ ಇರೋದು ಅನುಮಾನ. ಯಾಕಂದ್ರೆ ಜಿಯೋಗೆ ಪ್ರತಿಸ್ಪರ್ಧಿಯಾಗಿ ಟೆಲಿಕಾಂ ವಲಯದಲ್ಲಿ ಅವರ ಪ್ರತಿಸ್ಪರ್ಧಿ ಸುನಿಲ್ ಭಾರ್ತಿ ಮಿತ್ತಲ್ ಬಹು ಮಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿದ್ದಾರೆ.
ಭಾರತದ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಈ ಬಿಲಿಯನೇರ್, ಎಲೋನ್ ಮಸ್ಕ್‌ನ ಸ್ಟಾರ್‌ಲಿಂಕ್‌ನಂತಹ ಉಪಗ್ರಹ ಬ್ರಾಡ್‌ಬ್ಯಾಂಡ್ ಸೇವೆಯನ್ನು ಭಾರತದಲ್ಲಿ ಪ್ರಾರಂಭಿಸಲು ಸಜ್ಜಾಗುತ್ತಿದ್ದಾರೆ. ಸುನಿಲ್ ಭಾರ್ತಿ ಮಿತ್ತಲ್ ಟೆಲಿಕಾಂ ವಲಯದಲ್ಲಿ ಕಡಿಮೆ ಭೂ ಕಕ್ಷೆ (LEO) ಉಪಗ್ರಹ ಸಂಸ್ಥೆಯು ಅಗತ್ಯ ನಿಯಂತ್ರಣ ಅನುಮೋದನೆಗಳನ್ನು ಪಡೆದುಕೊಂಡಿದೆ.
JioSpaceFiber ಎಂಬ ಅಂಬಾನಿ-ಮಾಲೀಕತ್ವದ ಉಪಗ್ರಹ ಆಧಾರಿತ ಗಿಗಾ ಫೈಬರ್ ಸೇವೆಯು ದೇಶದೊಳಗೆ ಈ ಹಿಂದೆ ಪ್ರವೇಶಿಸಲಾಗದ ಭೌಗೋಳಿಕ ಪ್ರದೇಶಗಳಿಗೆ ಹೆಚ್ಚಿನ ವೇಗದ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇಲ್ಲಿಯವರೆಗೆ, ಮುಕೇಶ್ ಅಂಬಾನಿ ಈ ರೀತಿ ಅನುಮೋದನೆ ಪಡೆದು ಯಶಸ್ವೀ ಉದ್ಯಮ ನಡೆಸುತ್ತಿದ್ದರು.
ಮಿತ್ತಲ್, ಬೆಂಬಲಿತ ಉಪಗ್ರಹ ಸಂಸ್ಥೆ OneWeb India ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರದಿಂದ (IN-SPAce) ಯುಟೆಲ್‌ಸ್ಯಾಟ್ ಒನ್‌ವೆಬ್‌ನ ವಾಣಿಜ್ಯ ಉಪಗ್ರಹ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ದೇಶದಲ್ಲಿ ಪ್ರಾರಂಭಿಸಲು ಅನುಮೋದನೆಯನ್ನು ಪಡೆದುಕೊಂಡಿದೆ.
ಭಾರತದಲ್ಲಿ ಸ್ಯಾಟ್‌ಕಾಮ್ ಸೇವೆಗಳನ್ನು ನೀಡಲು DoT ನಿಂದ IN-SPAce ಅನುಮೋದನೆ, GMPCS ಪರವಾನಗಿ ಮತ್ತು ಸ್ಪೆಕ್ಟ್ರಮ್ ಅನ್ನು ಪಡೆಯುವುದು ಅವಶ್ಯಕ.
ಮಿತ್ತಲ್ ಬೆಂಬಲಿತ OneWeb ಈಗ IN-SPAce ನಿಂದ ಅನುಮೋದನೆಯನ್ನು ಪಡೆದ ಮೊದಲ ಕಂಪನಿಯಾಗಿದೆ. ಇದು Luxembourg SES ಉಪಗ್ರಹಗಳ ಪಾಲುದಾರಿಕೆಯನ್ನು ಹೊಂದಿರುವ ಮುಕೇಶ್ ಅಂಬಾನಿಯವರ Jioಗೆ ಪೈಪೋಟಿ ನೀಡಲಿದೆ.
ಹೊಸ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಯು ಪ್ರಪಂಚದಾದ್ಯಂತ ಉಪಗ್ರಹ ಇಂಟರ್ನೆಟ್‌ನ ಅತ್ಯಂತ ಜನಪ್ರಿಯ ಪೂರೈಕೆದಾರರಲ್ಲಿ ಒಬ್ಬರಾದ ಸ್ಟಾರ್‌ಲಿಂಕ್‌ನ್ನು ಹೊಂದಿರುವ ಎಲೋನ್ ಮಸ್ಕ್ ವಿರುದ್ಧ ನೇರವಾಗಿ ಮುಕೇಶ್ ಅಂಬಾನಿ ಮತ್ತು ಸುನಿಲ್ ಭಾರತಿ ಮಿತ್ತರ್‌ನ್ನು ಪ್ರತಿಸ್ಪರ್ಧಿಯಾಗಿ ಮಾಡಲಿದೆ.